ಘಟ್ಟಿರಡ್ಡಿಹಾಳ ಗ್ರಾಮದಲ್ಲಿ ಡಾ.ಅಂಬೇಡ್ಕರ್ ಯುವಕ ಸಂಘ, ಮಾದಿಗ ದಂಡೋರ ಗ್ರಾಮ ಘಟಕ ವಿಜಯೋತ್ಸವ ಆಚರಿಸಿದವು. ಪ್ರಮುಖರಾದ ಈರಣ್ಣ ಗಾಳೇರ, ದೇವೇಂದ್ರ ಪೂಜಾರ, ನಾಗರಾಜ, ಯಂಕಪ್ಪ, ರಣದಪ್ಪ, ಬಸಪ್ಪ ಇತರರಿದ್ದರು. 
ಜಿಲ್ಲೆ

ಸಮಾಜಕ್ಕೆ ನ್ಯಾಯ ಒದಗಿಸಿದ ಸರ್ಕಾರ; ಮಾದಿಗ ದಂಡೋರ ತಾಲೂಕಾಧ್ಯಕ್ಷ ಈರಣ್ಣ

ಅಳವಂಡಿ: ರಾಜ್ಯ ಸರ್ಕಾರ ನ್ಯಾ.ಸದಾಶಿವ ಆಯೋಗದ ವರದಿ ಜಾರಿಗೊಳಿಸಿ ನ್ಯಾಯ ಒದಗಿಸಿದೆ ಎಂದು ಮಾದಿಗ ದಂಡೋರ ಕೊಪ್ಪಳ ತಾಲೂಕಾಧ್ಯಕ್ಷ ಈರಣ್ಣ ಗಾಳೇರ ಹೇಳಿದರು.


ಘಟ್ಟಿರಡ್ಡಿಹಾಳನಲ್ಲಿ ಡಾ.ಅಂಬೇಡ್ಕರ್ ಯುವಕ ಸಂಘ, ಮಾದಿಗ ದಂಡೋರ ಗ್ರಾಮ ಘಟಕ ಹಮ್ಮಿಕೊಂಡಿದ್ದ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ತಾಲೂಕು ಸಂಘಟನಾ ಕಾರ್ಯದರ್ಶಿ ದೇವೇಂದ್ರ ಪೂಜಾರ ಮಾತನಾಡಿ, ಸುಮಾರು ಎರಡು ದಶಕಗಳಿಂದ ಸದಾಶಿವ ಆಯೋಗ ಜಾರಿಗಾಗಿ ಹೋರಾಟ ಮಾಡಲಾಗುತ್ತಿತ್ತು. ಆದರೆ ಸರ್ಕಾರಗಳು ಅನುಷ್ಠಾನಕ್ಕೆ ಹಿಂದೇಟು ಹಾಕುತ್ತಿದ್ದವು. ಈಗ ಬಸವರಾಜ ಬೊಮ್ಮಾಯಿ ಸರ್ಕಾರವು ಒಳಮೀಸಲಾತಿ ನೀಡಿ ಸಾಮಾಜಿಕ ನ್ಯಾಯ ಕಲ್ಪಿಸಿದೆ ಎಂದರು.


ಪ್ರಮುಖರಾದ ಮಹಾಂತೇಶ ಪೂಜಾರ, ಬಸಪ್ಪ ಮ್ಯಾಗೇರಿ, ರಣದಪ್ಪ ಪೂಜಾರ, ಚಿರಂಜೀವಿ ಮ್ಯಾಗೇರಿ, ದುರುಗೇಶ ಮ್ಯಾಗೇರಿ, ದುರುಗೇಶ ಪೂಜಾರ, ಯಂಕಪ್ಪ ಪೂಜಾರ, ಹನುಮಂತ ಗಾಳೇರ, ಹನುಮೇಶ ಪೂಜಾರ, ಮಹೇಶ, ಕೊಟ್ರೇಶ ಪೂಜಾರ, ರವಿ ಮ್ಯಾಗೇರಿ, ಮಂಜು ಮ್ಯಾಗೇರಿ, ಸಂದೀಪ, ಅನಿಲ್ ಪೂಜಾರ, ನಾಗರಾಜ ಪೂಜಾರ ಇತರರಿದ್ದರು.