ತಲ್ಲೂರ: ಮಾಧವಾನಂದ ಪ್ರಭೂಜಿ ಅವರು ಸರ್ವ ಧರ್ಮೀಯರನ್ನು ಸಮಾನ ಭಾವದಿಂದ ಕಾಣುವ ಮೂಲಕ ಸಮಾನತೆಯ ಸಂದೇಶ ಸಾರಿದ್ದಾರೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಸಮೀಪದ ಮಬನೂರ ಗ್ರಾಮದ ಮಾಧವಾನಂದ ಪ್ರಭೂಜಿ ಆಶ್ರಮದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಮಾಧವಾನಂದ ಪ್ರಭೂಜಿ ಜಯಂತ್ಯುತ್ಸವ ಹಾಗೂ ಕರೆಪ್ಪ ಮಹಾರಾಜರ ಪುಣ್ಯಸ್ಮರಣೋತ್ಸವ, ತೊಟ್ಟಿಲು ಪೂಜೆ, ಸಾಮೂಹಿಕ ವಿವಾಹ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಯುವಜನರು ಮಾಧವಾನಂದ ಪ್ರಭೂಜಿ ಅವರ ತತ್ತ್ವ, ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಂದೇಶ ನೀಡಿದರು.
ಇಂಚಗೇರಿಮಠದ ಪ್ರಭೂಜಿ ಮಹಾರಾಜರು ಮಾತನಾಡಿ, ಇಂಚಗೇರಿ ಮಾಧವಾನಂದರು ಎಲ್ಲ ಜಾತಿಯವರನ್ನು ಒಗ್ಗೂಡಿಸಿಕೊಂಡು ಮಹಾತ್ಮ ಗಾಂಧೀಜಿ ಹಾಗೂ ಜವಾಹರಲಾಲ ನೆಹರು ಜತೆ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಕ್ರಾಂತಿಕಾರಿ ಎಂದರು.
ಮುನವಳ್ಳಿ ಸೋಮಶೇಖರ ಮಠದ ಮುರುಘೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಗೌರವಾಧ್ಯಕ್ಷ ಶಶಿಕಾಂತ ಪಡಸಲಗಿ ಮಹಾರಾಜರು, ಮಾಜಿ ಗ್ರಾಪಂ ಸದಸ್ಯ ಕರೆಪ್ಪ ಮುರಗೋಡ ಅಧ್ಯಕ್ಷತೆ ವಹಿಸಿದ್ದರು.
ಗ್ರಾಪಂ ಅಧ್ಯಕ್ಷೆ ನಿಂಗವ್ವ ಮೇಟಿ, ಸುವರ್ಣತಾಯಿ ಹೊಸಮಠ, ರವೀಂದ್ರ ಯಲಿಗಾರ, ಬಸವರಾಜ ಬಸಳಿಗುಂದಿ, ಕೀರಪ್ಪ ಹದ್ದನ್ನವರ, ಪುಂಡಲೀಕ ಮೇಟಿ, ಶಂಕರ ಇಟ್ನಾಳ, ಮುನವಳ್ಳಿ ಪುರಸಭೆ ಅಧ್ಯಕ್ಷ ಸಿ.ಬಿ.ಬಾಳಿ, ಸವದತ್ತಿ ಎಪಿಎಂಸಿ ಅಧ್ಯಕ್ಷ ಚಂದ್ರು ಜಂಬ್ರಿ. ರಾಮಚಂದ್ರ ಪಟಾತ, ಎಚ್.ಕೆ. ಪಟಾತ, ದಾವಲಸಾಬ ಶಿಂದೋಗಿ, ಯಲ್ಲಪ್ಪ ನರಿ, ಲಕ್ಷ್ಮಣ ಮುರಗೋಡ, ಜಡೆಪ್ಪ ಮುರಗೋಡ, ಮಂಜುಳಾ ಮಾದರ, ಬಸವ್ವ ಹಡಪದ, ಪಿಡಿಒ ರಾಜೇಸಾಬ್ ಚಿಪ್ಪಲಕಟ್ಟಿ ಇತರರು ಇದ್ದರು.