ಜಿಲ್ಲೆ

ಎಸ್‌ಡಿಎಂ ಶಾಲೆಗೆ ಮಧುಸೂದನ್ ಹವಾಲ ಭೇಟಿ

Avinash R

ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಗೆ ಭೇಟಿ ನೀಡಿದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಅಂತರಾಷ್ಟ್ರೀಯ ಸಹಾಯಕ ಆಯುಕ್ತ ಮಧುಸೂದನ್ ಹವಾಲ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.

ಜಿಲ್ಲಾ ಸಹಾಯಕ ಆಯುಕ್ತ ಬಿ.ಸೋಮಶೇಖರ ಶೆಟ್ಟಿ, ಮುಖ್ಯ ಶಿಕ್ಷಕಿ ಹೇಮಲತಾ ಎಂ.ಆರ್., ರಾಜ್ಯ ಸಹಾಯಕ ಸಂಘಟನಾ ಆಯುಕ್ತಾ ಭರತ್ ರಾಜ್ ಕೆ., ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಪ್ರಮೀಳಾ ಉಪಸ್ಥಿತರಿದ್ದರು.

ಬನ್ನಿಸ್, ಕಬ್, ಬುಲ್‌ಬುಲ್, ಸ್ಕೌಟ್, ಗೈಡ್ ವಿದ್ಯಾರ್ಥಿಗಳು ಬೆಂಕಿ ಇಲ್ಲದ ಅಡುಗೆ ತಯಾರಿಸಿದರು. ಪ್ರಮೀಳಾ ನೇತೃತ್ವ ವಹಿಸಿದ್ದರು. ಗೈಡ್ ಕ್ಯಾಪ್ಟನ್ ಕಾರುಣ್ಯ ಮಾರ್ಗದರ್ಶನ ನೀಡಿದರು. ಮಂಜುನಾಥ ಸಹಕರಿಸಿದರು. ಸ್ಕೌಟ್ ವಿದ್ಯಾರ್ಥಿ ಆಶಿಷ್ ಆರ್.ಕಾಮತ್ ಕಾರ್ಯಕ್ರಮ ನಿರೂಪಿಸಿದರು. ಗೈಡ್ ವಿದ್ಯಾರ್ಥಿ ಪ್ರಾಪ್ತಿ ಸ್ವಾಗತಿಸಿದರು. ಅನಘ ಮರಾಠೆ ವಂದಿಸಿದರು.