ಜಡೆ ಸಂಸ್ಥಾನ ಮಠಕ್ಕೆ ಭೇಟಿ ನೀಡಿದ ಮಧು ಬಂಗಾರಪ್ಪ ಅವರನ್ನು ಶ್ರೀ ಡಾ. ಮಹಾಂತ ಸ್ವಾಮೀಜಿ ಸನ್ಮಾನಿಸಿದರು. ಶಿವಲಿಂಗೇಗೌಡ, ಸದಾನಂದಗೌಡ ಬಿಳಗಲಿ, ಪಾಟೀಲ್, ಚಂದ್ರಶೇಖರ್ ನಿಜಗುಣ, ಈರೇಶ್ ಗೌಡ, ನಾಗರಾಜ ಗೌಡ, ಅಶೋಕ್ ನಾಯ್ಕ ಇತರರಿದ್ದರು. 
ಜಿಲ್ಲೆ

ಜಡೆ ಸಂಸ್ಥಾನ ಮಠಕ್ಕೆ ಮಧು ಭೇಟಿ

Shivamogga - Desk - Megha MS

ಸೊರಬ: ತಾಲೂಕಿನ ಜಡೆ ಸಂಸ್ಥಾನ ಮಠದ ಆವರಣದಲ್ಲಿರುವ ಶ್ರೀ ಸಿದ್ಧವೃಷಭೇಂದ್ರ ಸ್ವಾಮೀಜಿ ಅವರ ಕತೃ ಗದ್ದುಗೆಗೆ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಭೇಟಿ ನೀಡಿ ಆಶೀರ್ವಾದ ಪಡೆದರು.

ನಿರ್ಮಾಣ ಹಂತದಲ್ಲಿರುವ ಕತೃ ಗದ್ದುಗೆಯ ಶಿಲಾಮಯ ನೂತನ ಕಟ್ಟಡ ವೀಕ್ಷಿಸಿದ ಸಚಿವರು, ಜಡೆ ಸಂಸ್ಥಾನ ಮಠದ ಶ್ರೀ ಡಾ. ಮಹಾಂತ ಸ್ವಾಮೀಜಿ ಅವರಿಂದ ಮಾಹಿತಿ ಪಡೆದರು. ಸಚಿವರಾದ ನಂತರ ಮೊದಲ ಬಾರಿಗೆ ಶ್ರೀಮಠಕ್ಕೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ಮಠದ ವತಿಯಿಂದ ಶ್ರೀ ಡಾ. ಮಹಾಂತ ಸ್ವಾಮೀಜಿ ಅವರು ಸಚಿವರನ್ನು ಸನ್ಮಾನಿಸಿ ಆಶೀರ್ವದಿಸಿದರು.
ಶಾಂತಾಪುರ ಮಠಕ್ಕೆ ಪ್ರತಿವರ್ಷ ಜಾತ್ರೆ ಹಾಗೂ ಪ್ರತಿ ಅಮಾವಾಸ್ಯೆಗೆ ಸಾವಿರಾರು ಭಕ್ತರು ಆಗಮಿಸುತ್ತಾರೆ. ಈ ವೇಳೆ ಅನ್ನಸಂತರ್ಪಣೆ ನಡೆಯುತ್ತದೆ. ಭಕ್ತರಿಗೆ ತಂಗಲು ಮತ್ತು ಕಾರ್ಯಕ್ರಮ ನಡೆಸಲು ಸಮುದಾಯ ಭವನದ ಅವಶ್ಯಕತೆ ಇದೆ. ಸಮುದಾಯ ಭವನದ ಮುಂದುವರಿದ ಕಾಮಗಾರಿಗೆ ಸುಮಾರು ಒಂದು ಕೋಟಿ ರೂ. ಅನುದಾನದ ಅವಶ್ಯಕತೆ ಇದೆ. ಸರ್ಕಾರದಿಂದ ಅನುದಾನ ಕೊಡಿಸಬೇಕಾಗಿ ಶಾಂತಾಪುರ ಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿಗಳು ಸಚಿವರಿಗೆ ಮನವಿ ಸಲ್ಲಿಸಿದರು.
ಜಿಪಂ ಮಾಜಿ ಸದಸ್ಯ ಶಿವಲಿಂಗೇಗೌಡ, ಪ್ರಮುಖರಾದ ಸದಾನಂದಗೌಡ ಬಿಳಗಲಿ, ಆರ್.ಸಿ.ಪಾಟೀಲ್, ಚಂದ್ರಶೇಖರ ನಿಜಗುಣ, ಸಿ.ಪಿ.ಈರೇಶ್‌ಗೌಡ, ನಾಗರಾಜ ಗೌಡ, ಅಶೋಕ್ ನಾಯ್ಕ ಅಂಡಿಗೆ, ಕೆ.ಪಿ.ರುದ್ರಗೌಡ, ಬಸವರಾಜ ಇತರರಿದ್ದರು.