ಜಿಲ್ಲೆ

ಅಂಬುಕುಂಜೆ ಮಜಕ್ಕಾರು ಸಮಿತಿ ಸಭೆ : ಮಧೂರು ದೇವಸ್ಥಾನ ಬ್ರಹ್ಮಕಲಶೋತ್ಸವ

ಸೌಮ್ಯ ಆರ್

ಮುಳ್ಳೇರಿಯ: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ ಜೀರ್ಣೋದ್ಧಾರ ಬ್ರಹ್ಮಕಲಶೋತ್ಸವ ಅಂಗವಾಗಿ ಮಜಕ್ಕಾರು ಶ್ರೀ ಧೂಮಾವತಿ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಭಾನುವಾರ ಅಂಬುಕುಂಜೆ ಮಜಕ್ಕಾರು ಪ್ರಾದೇಶಿಕ ಸಮಿತಿ ರೂಪೀಕರಣ ಸಭೆ ನಡೆಯಿತು.

ಬಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸೀತಾರಾಮ ಬಳ್ಳುಳ್ಳಾಯ ಉದ್ಘಾಟಿಸಿದರು. ಗೋವಿಂದ ಬಳ್ಳಮೂಲೆ ಕಾರ್ಯಯೋಜನೆಗಳ ಮಾಹಿತಿ ನೀಡಿದರು. ಕಾರ್ಯಕಾರಿ ಸಮಿತಿ ರಚಿಸಲಾಯಿತು.

ರಕ್ಷಾಧಿಕಾರಿಯಾಗಿ ಗೋಪಾಲಕೃಷ್ಣ ಭಟ್ ಅಂಬುಕುಂಜೆ, ಗೌರವಾಧ್ಯಕ್ಷರಾಗಿ ಕೇಶವ ರಾವ್ ಅಂಬುಕುಂಜೆ, ಅಧ್ಯಕ್ಷರಾಗಿ ಬಾಲಕೃಷ್ಣ ಶೆಟ್ಟಿ, ಉಪಾಧ್ಯಕ್ಷರಾಗಿ ಯಂ.ನಾರಾಯಣ ರಾವ್, ಪ್ರವೀಣ ಅಂಬುಕುಂಜೆ, ಸರೋಜಾ ಎನ್.ಭಟ್, ಉದಯಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ರವೀಂದ್ರ ಅಂಬುಕುಂಜೆ, ಕಾರ್ಯದರ್ಶಿಗಳಾಗಿ ರಮೇಶ್ ಮಜಕ್ಕಾರು, ಪ್ರಕಾಶ್ ಕಟ್ಟದ ಮನೆ, ಹರಿಣಿ ಅಶೋಕ್, ಭರತ್ ಅಂಬುಕುಂಜೆ, ಕೋಶಾಧಿಕಾರಿಯಾಗಿ ಶಂಕರ ಪಾಟಾಳಿ, ಶ್ರಮದಾನ ಸಂಯೋಜಕರಾಗಿ ರಾಜೇಶ್ ಕೊಡಿಯಾಲ್, ಅನೀಶ್ ಆಚಾರ್ಯ, ಹಸಿರು ವಾಣಿ ಸಂಯೋಜಕರಾಗಿ ರವೀಂದ್ರ ರೈ ಕುರಿಕ್ಕಲಡ್ಕ, ಪದ್ಮನಾಭ ರೈ, ಸತ್ಯನಾರಾಯಣ ರಾವ್, ರಾಘವನ್, ಮನಮೋಹನ್ ಕಡ್ಪಂಗಲ್ಲು, ಮಾತೃ ಸಮಿತಿ ಅಧ್ಯಕ್ಷೆಯಾಗಿ ಉಷಾಕುಮಾರಿ ಆಯ್ಕೆಯಾದರು. ಪ್ರಧಾನ ಸಂಯೋಜಕಾರಾಗಿ ಕೃಷ್ಣೋಜಿ ರಾವ್ ಮಾಸ್ತರ್ ಅವರನ್ನು ಆಯ್ಕೆ ಮಾಡಲಾಯಿತು.

ಹರಿಶ್ಚಂದ್ರ ಅಂಬುಕುಂಜೆ ಅವರು ಕೋಶಾಧಿಕಾರಿ ಶಂಕರ ಪಾಟಾಳಿ ಅವರಿಗೆ ದೇಣಿಗೆ ನೀಡಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿದರು. ಕೃಷ್ಣೋಜಿರಾವ್ ಮಾಸ್ತರ್ ಸ್ವಾಗತಿಸಿದರು. ಉಷಾಕುಮಾರಿ ವಂದಿಸಿದರು.