ಜಿಲ್ಲೆ

ಅಚಲ ಭಕ್ತಿಗೆ ದೈವಾನುಗ್ರಹ : ಮಧೂರು ಬ್ರಹ್ಮಕಲಶೋತ್ಸವದಲ್ಲಿ ಅದಮಾರು ಶ್ರೀ ಆಶೀರ್ವಚನ

ಸೌಮ್ಯ ಆರ್

ಮಧೂರು: ಪರಿಶುದ್ಧ ಮನದಿಂದ ನಾಮಸ್ಮರಣೆಯೇ ಭಗವಂತನ ಪ್ರೀತಿಯ ಆರಾಧನಾ ರೂಪವಾಗಿದ್ದು, ಅಚಲ ಭಕ್ತಿಗೆ ದೈವಾನುಗ್ರಹ ನಿರೀಕ್ಷೆಗೂ ಮೀರಿ ಒದಗಿಬರುತ್ತದೆ ಎಂದು ಉಡುಪಿ ಅದಮಾರು ಮಠದ ಈಶಪ್ರಿಯ ತೀರ್ಥ ಶ್ರೀಪಾದರು ನುಡಿದರು.

ಮಧೂರು ಶ್ರೀಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪಸೇವೆಯ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ, ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಉಪಸ್ಥಿತರಿದ್ದು ಆಶೀರ್ವಚನ ನೀಡಿದರು.

ಮಧೂರು ಗ್ರಾಪಂ ಅಧ್ಯಕ್ಷ ಕೆ.ಗೋಪಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಆರ್.ಎಸ್.ಎಸ್.ಅಖಿಲ ಭಾರತ ಪ್ರತಿನಿಧಿ ಸಭಾದ ಆಮಂತ್ರಿತ ಸದಸ್ಯ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅವರು ಪ್ರಧಾನ ಉಪನ್ಯಾಸ ನೀಡಿದರು.

ಬ್ರಹ್ಮಕಲಶೋತ್ಸವ ಸಮಿತಿ ಗೌರವ ಉಪಾಧ್ಯಕ್ಷ, ಉದ್ಯಮಿ ಬಿ.ಕೆ.ಮಧೂರು, ಮಂಗಳೂರಿನ ಕಲ್ಕೂರ ಪ್ರತಿಷ್ಠಾನ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ, ಡಾ.ಹರಿಕೃಷ್ಣ ಬಂಗೇರ, ಏವಂದೂರು ಗೋಪಾಲ ಮಣಿಯಾಣಿ, ಸಿ.ಎಚ್. ಧರ್ಮಪಾಲ ಚೀನಕ್ಕೋಡು ಶುಭಹಾರೈಸಿದರು. ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಗಿರೀಶ್ ಸಂಧ್ಯಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಬ್ಲಾಕ್ ಪಂ.ಸದಸ್ಯ, ಸಮಿತಿ ಸದಸ್ಯ ಸುಕುಮಾರ ಕುದ್ರೆಪ್ಪಾಡಿ ವಂದಿಸಿದರು. ಮೋಹನ್ ಕುಮಾರ್ ಅಡ್ಕ ಕಾರ್ಯಕ್ರಮ ನಿರೂಪಿಸಿದರು.

ರಾತ್ರಿ ಮಧೂರು ಶ್ರೀ ಸಿದ್ಧಿವಿನಾಯಕ ಬಾಲಗೋಕುಲ ಮಕ್ಕಳಿಂದ ನೃತ್ಯ ವೈವಿಧ್ಯ, ಬೆಂಗಳೂರಿನ ನೃತ್ಯಕುಟೀರದ ವಿದುಷಿ ದೀಪಾ ಭಟ್ ಅವರಿಂದ ಭರತನಾಟ್ಯ ಪ್ರದರ್ಶನ ನಡೆಯಿತು.

ಭಕ್ತಿಗೆ ಮಾತ್ರ ಒಲಿಯುವ ಭಗವಂತ ಜ್ಞಾನ ಚಕ್ಷುಗಳ ಮೂಲಕ ಬದುಕಿನ ಆತ್ಯಂತಿಕ ಲಕ್ಷೃದ ಬಗ್ಗೆ ಬೆಳಕು ತೋರುತ್ತಾನೆ. ಆದರೆ ಅದನ್ನು ಗ್ರಹಿಸುವ ಶಕ್ತಿ ನಮ್ಮ ಅಂತಃಶಕ್ತಿಗೆ ಗೋಚರಿಸಬೇಕು. ಸಮಾಜ, ಸಂಸಾರ ಸುದೃಢಗೊಳ್ಳಲು ಎಲ್ಲರ ಸಹಭಾಗಿತ್ವದೊಂದಿಗೆ ಆರಾಧನಾಲಯಗಳು ಬೆಳೆಯಬೇಕು. ಈಶಪ್ರಿಯ ತೀರ್ಥ ಶ್ರೀಪಾದರು ಉಡುಪಿ ಅದಮಾರು ಮಠ ಆನಂದ ಆಂತರಂಗಿಕವಾದುದಾಗಿದ್ದು, ಸಂತೋಷ ಬಾಹ್ಯ ಭಾವ ಸ್ಪುರಣವಾಗಿದೆ. ನಮ್ಮಲ್ಲಿರಬೇಕಾದುದು ಶಾಶ್ವತ, ಒಳಭಾವಗಳ ಆನಂದವಾಗಿದೆ. ಅದು ದೈವಾನುಗ್ರಹದಿಂದ ಸಾಧ್ಯ. ಬದುಕಿನ ಮೂಲಸೂತ್ರ ಧರ್ಮದ ಹಾದಿಯಾಗಿದ್ದು, ಆ ಹಾದಿ ನಮ್ಮನ್ನು ದೇವತಾ ಮನುಷ್ಯರನ್ನಾಗಿಸುತ್ತದೆ. ಶ್ರೀ ಗುರುದೇವಾನಂದ ಸ್ವಾಮೀಜಿ, ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನ https://www.vijayavani.net/save-water-campaign-pamphlet-released https://www.vijayavani.net/madhuru-bramhakalasha-2