ಜಿಲ್ಲೆ

ಮಧೂರು ಕ್ಷೇತ್ರದಲ್ಲಿ ಸಂಜೀವಿನೀ ಮಹಾಮೃತ್ಯುಂಜಯ ಯಾಗ

ಸೌಮ್ಯ ಆರ್

ಕಾಸರಗೋಡು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ ಅಷ್ಟಬಂಧ ಬ್ರಹ್ಮಕಲಶೋತ್ಸವ-ಮೂಡಪ್ಪ ಸೇವೆ ಅಂಗವಾಗಿ ದೇವಾಲಯದಲ್ಲಿ ಶುಕ್ರವಾರ, ಸಂಜೀವಿನೀ ಮಹಾಮೃತ್ಯುಂಜಯ ಯಾಗ ದೇರೆಬೈಲು ಡಾ.ಶಿವಪ್ರಸಾದ ತಂತ್ರಿ ಅವರ ನೇತೃತ್ವದಲ್ಲಿ ಜರುಗಿತು.

ಬೆಳಗ್ಗೆ ಅರಣಿ ಮಥನದ ಮೂಲಕ ಅಗ್ನಿ ಸೃಷ್ಟಿಸಲಾಯಿತು. ಧಾರಾಂತ ಬಿಂಬ ಶುದ್ಧಿ, ಪ್ರಾಯಶ್ಚಿತ ಹೋಮಗಳು, ಶಾಂತಿಹೋಮಗಳು ನಡೆಯಿತು. ಸಂಜೆ ಶ್ರೀದುರ್ಗಾ ನಮಸ್ಕಾರ ಪೂಜೆ, ಮಂಟಪ ಸಂಸ್ಕಾರ, ಅಂಕುರ ಪೂಜೆ ನೆರವೇರಿತು.

ಸಾಂಸ್ಕೃತಿಕ ಕಾರ್ಯಕ್ರಮಗಳು: ನಾಲ್ಕು ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯಿತು. ಕೃಷ್ಣಪ್ರಸಾದ್ ದೇವಾಡಿಗ ಉಪ್ಪಿನಂಗಡಿ ಮತ್ತು ಬಳಗದಿಂದ ಸ್ಯಾಕ್ಸೋಫೋನ್‌ವಾದನ, ಬಳ್ಳಪದವು ಯೋಗೀಶ ಶರ್ಮ ಮತ್ತು ಬಳಗದವರಿಂದ ಸಂಗೀತಾರ್ಚನೆ, ವ್ಯಾಸರಾಜ ಕಡಬ ಮತ್ತು ಬಳಗದಿಂದ ಭಕ್ತಿಭಾವ ಜಾನಪದ ಹಾಡು, ನಾಗರತ್ನ ಉಪಾಧ್ಯಾಯ ಮಧೂರು ಅವರಿಂದ ಸಂಗೀತ ಕಾರ್ಯಕ್ರಮ, ವಿಧಾತ್ರಿ ಭಟ್ ಅಬ್ರಾಜೆ ಮತ್ತು ಬಳಗದವರಿಂದ ಸಂಗೀತ ಕಛೇರಿ, ಯಕ್ಷಗಾನ ತಾಳಮದ್ದಳೆ, ಯಕ್ಷಗಾನ ಕೂಟ ನಡೆಯಿತು.