ಯಲ್ಲಾಪುರ: ಕರ್ನಾಟಕ ಚಲನಚಿತ್ರ ಕಲಾವಿದರ ಕ್ಷೇಮಾಭಿವೃದ್ಧಿ ಮಂಡಳಿ ಧಾರವಾಡ, ಚೇತನ ಫೌಂಡೇಶನ್ ಕರ್ನಾಟಕ ಮತ್ತು ಕಾವ್ಯಶ್ರೀ ಚಾರಿಟಬಲ್ ಟ್ರಸ್ಟ್ ಕರ್ನಾಟಕ ನೀಡುವ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಯಲ್ಲಾಪುರದ ಕವಯಿತ್ರಿ, ಕಲಾವಿದೆ ಮಧುರಾ ಗಾಂವ್ಕರ ಅವರಿಗೆ ದೊರೆತಿದೆ.
ಮಧುರಾ ಅವರ ಸಾಹಿತ್ಯ ಹಾಗೂ ಸಾಂಸ್ಕೃತಿಕ ಸೇವ ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ನಡೆದ ಬೆಂಗಳೂರು ಚಿತ್ರೋತ್ಸವ ಮತ್ತು ಕರ್ನಾಟಕ ರಾಜ್ಯೋತ್ಸವ ಸಂಭ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಚೇತನಾ ಫೌಂಡೇಶನ್ ಸಂಸ್ಥಾಪಕ ಚಂದ್ರಕಾಂತ ಮಾಡಲಗೇರಿ, ಕಾವ್ಯಶ್ರೀ ಚಾರಿಟಬಲ್ ಟ್ರಸ್ಟ್ನ ಸಂಸ್ಥಾಪಕ ಅಧ್ಯಕ್ಷ ಡಾ. ಜಿ ಶಿವಣ್ಣ, ಸಂಘಟನೆಯ ಪದಾಧಿಕಾರಿಗಳು, ನಿರ್ದೇಶಕರು, ನಿರ್ವಪಕರು ಇದ್ದರು