ಜಿಲ್ಲೆ

ಅಮ್ಮಂಗೋಡು ಗೋಳಿಯಡ್ಕ ಸಮಿತಿ ರಚನೆ : ಮಧೂರು ಬ್ರಹ್ಮಕಲಶೋತ್ಸವಕ್ಕೆ ಪೂರ್ವಭಾವಿ ಸಿದ್ಧತೆ

ಸೌಮ್ಯ ಆರ್

ಮುಳ್ಳೇರಿಯ: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಬ್ರಹ್ಮಕಲಶೋತ್ಸವ ಮತ್ತು ಮೂಡಪ್ಪ ಸೇವೆ ವಾರ್ಚ್ 27ರಿಂದ ಏಪ್ರಿಲ್ 7ರವರೆಗೆ ನಡೆಯಲಿದ್ದು, ಅಮ್ಮಂಗೋಡು ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಇತ್ತೀಚೆಗೆ ಅಮ್ಮಂಗೋಡು ಗೋಳಿಯಡ್ಕ ಪ್ರಾದೇಶಿಕ ಸಮಿತಿ ರಚನಾ ಸಭೆ ಜರಗಿತು.

ಸೀತಾರಾಮ ಬಳ್ಳುಳ್ಳಾಯ ಅಧ್ಯಕ್ಷತೆ ವಹಿಸಿದ್ದರು. ರಾಜನ್ ಮುಳಿಯಾರು ಬ್ರಹ್ಮಕಲಶದ ಬಗ್ಗೆ ವಿವರಿಸಿದರು. ಗೋವಿಂದ ಬಳ್ಳಮೂಲೆ ಸಮಿತಿ ಕಾರ್ಯಯೋಜನೆಗಳ ಮಾಹಿತಿಗಳನ್ನಿತ್ತರು.

ಕಾರ್ಯಕಾರಿ ಸಮಿತಿ ರಚಿಸಲಾಯಿತು. ರಾವೇಂದ್ರ ಉಡುಪುಮೂಲೆ - ಗೌರವಾಧ್ಯಕ್ಷ, ಸದಾಶಿವ ಭಟ್ ಮುಂಡಪ್ಪಳ್ಳ - ಅಧ್ಯಕ್ಷ, ಹರಿಶ್ಚಂದ್ರ ಗೋಳಿಯಡ್ಕ, ಜಗದೀಶ ಅಮ್ಮಂಗೋಡು - ಉಪಾಧ್ಯಕ್ಷರು, ಪುರುಷೋತ್ತಮ ಗೋಳಿಯಡ್ಕ - ಪ್ರಧಾನ ಕಾರ್ಯದರ್ಶಿ, ಶಮಂತ್ ಗೋಳಿಯಡ್ಕ, ಪ್ರಿಯ ಗೋಳಿಯಡ್ಕ, ಅನುಷಾ ಗೋಳಿಯಡ್ಕ - ಜತೆ ಕಾರ್ಯದರ್ಶಿ, ಜ್ಯೋತಿ ಅಮ್ಮಂಗೋಡು - ಕೋಶಾಧಿಕಾರಿ ಮತ್ತು ಸದಸ್ಯರನ್ನು ಸಮಿತಿಗೆ ಆಯ್ಕೆ ಮಾಡಲಾಯಿತು. ಮಹಿಳಾ ಸಮಿತಿಗೆ ಸಂಯೋಜಕರಾಗಿ ವಿಜಯಲಕ್ಷ್ಮೀ ಗೋಳಿಯಡ್ಕ ಅವರನ್ನು ಪುನರಾಯ್ಕೆ ಮಾಡಲಾಯಿತು. ಸಮಿತಿಯ ಪ್ರಧಾನ ಸಂಯೋಜಕರಾಗಿ ಪ್ರಕಾಶ ಅಮ್ಮಂಗೋಡು ಮತ್ತು ಸಹಸಂಯೋಜಕರಾಗಿ ರಾಜೇಂದ್ರ ಗೋಳಿಯಡ್ಕ ಅವರನ್ನು ಆಯ್ಕೆ ಮಾಡಲಾಯಿತು.