ಕುಶಾಲನಗರ: ಹೆಬ್ಬಾಲೆ ನೀರು ಬಳಕೆದಾರ ಸಂಘದ ಅಧ್ಯಕ್ಷರಾಗಿ ಎಚ್.ಎಸ್.ಮಧುಕುಮಾರ್, ಉಪಾಧ್ಯಕ್ಷೆ ಸರೋಜಮ್ಮ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ಒಂದೊಂದು ನಾಮಪತ್ರಗಳು ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿಯಗಿದ್ದ ಸಹಕಾರ ಇಲಾಖೆಯ ಅಧಿಕಾರಿ ಪ್ರದೀಪ್ ಅವರು ಅಯ್ಕೆ ಪ್ರಕ್ರಿಯೆಯನ್ನು ಘೋಷಣೆ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಹೆಚ್.ಪಿ.ಮಂಜುನಾಥ, ಹೆಚ್.ಕೆ.ರಾಜಶೇಖರ್, ಜವರೇಗೌಡ, ಮೋಹನ್, ಚಂದ್ರಕಲಾ, ಹೆಚ್.ಟಿ.ದಿನೇಶ್, ಹರೀಶ್, ಸೇರಿದಂತೆ ಸಂಘದ ಕಾರ್ಯದರ್ಶಿ ಹಾಜರಿದ್ದರು.
ನಂತರ ಅಧ್ಯಕ್ಷ ಮಧುಕುಮಾರ್ ಮಾತಾನಾಡಿ, ಸಂಘದ ಮೂಲಕ ರೈತರ ಜಮೀನಿನ ಬೇಸಾಯಕ್ಕೆ ಅನುಕೂಲವಾಗುವಂತೆ ನೀರಾವರಿ ಸೌಕರ್ಯಗಳನ್ನು ಒದಗಿಸುವಲ್ಲಿ ಪ್ರಮುಖವಾಗಿ ಉಪ ಕಾಲುವೆಗಳ ದುರಸ್ತಿಗೆ ಮುಂದಾಗುವ ಮೂಲಕ ರೈತರಿಗೆ ಸಹಕಾರವನ್ನು ನೀಡುತ್ತೇನೆ. ಜೊತೆಗೆ ನೀರಾವರಿ ಮಹಾ ಮಂಡಲದ ಮುಖೇನ ವಿವಿಧ ಕಾಲುವೆಗಳ ದುರಸ್ತಿಗೆ ಸಂಬಂಧಿಸಿದಂತೆ ಸಂಘದ ಮೂಲಕ ಕಾರ್ಯ ನಿರ್ವಹಿಸಲಾಗುವುದು ಎಂದು ತಿಳಿಸಿದರು.