ಜಿಲ್ಲೆ

video/ ಪ್ರಜ್ವಲ್ ರೇವಣ್ಣನ ಕಾಲಿಗೆ ಬಿದ್ದ ಮಧುಗಿರಿ ಶಾಸಕ !

ತುಮಕೂರು: ನಿವೃತ್ತ ಐಎಎಸ್ ಅಧಿಕಾರಿಯೂ ಆದ ಮಧುಗಿರಿ ಶಾಸಕ ಎಂ.ವಿ.ವೀರಭದ್ರಯ್ಯ ಅವರು ಹಾಸನ ಸಂಸದ ಪ್ರಜ್ವಲ್ ರೇವಣ್ಣನ ಕಾಲಿಗೆರಗಿ ಆಶೀರ್ವಾದ ಪಡೆದಿದ್ದಾರೆ!

ಗುರುವಾರ ಶಿರಾ ಶಾಸಕ ಬಿ.ಸತ್ಯನಾರಾಯಣ ಅವರ ಪುಣ್ಯಸ್ಮರಣೆ ಕಾರ್ಯಕ್ರಮ ಮುಗಿದ ಬಳಿಕ ಪ್ರಜ್ವಲ್‌ ರೇವಣ್ಣ ಕಾರ್ಯಕರ್ತರ ಮಧ್ಯೆ ತೆರಳುತ್ತಿದ್ದರು. ಈ ವೇಳೆ ತನ್ನ ಮಗನ ವಯಸ್ಸಿನ ಪ್ರಜ್ವಲ್‌ ಕಾಲಿಗೆ ಶಾಸಕ ವೀರಭದ್ರಯ್ಯ ನಮಸ್ಕರಿಸಿದ್ದು ನೆರೆದಿದ್ದವರಲ್ಲಿ ದಿಗ್ಭ್ರಮೆ ಮೂಡಿಸಿತು.

ಜೆಡಿಎಸ್ ವರಿಷ್ಠರ ಕುಡಿ ಎಂಬ ಕಾರಣಕ್ಕೆ ವೀರಭದ್ರಯ್ಯ ಅವರು ನೂರಾರು ಜನರ ಸಮ್ಮುಖದಲ್ಲೇ ಪ್ರಜ್ವಲ್​ ಕಾಲಿಗೆರಗಿ ದೇವೇಗೌಡರ ಕುಟುಂಬ ನಿಷ್ಠೆ ಪ್ರದರ್ಶಿಸಿರುವ ವಿಡಿಯೋ ಸಖತ್ ವೈರಲ್ ಆಗಿದೆ.

ರಾಜಕಾರಣದಲ್ಲಿ ಹಿರಿಯರ ಕಾಲಿಗೆರಗಿ ವಿಧೇಯತೆ ಅಥವಾ ಅಭಿಮಾನ ವ್ಯಕ್ತಪಡಿಸುವುದು ಸಾಮಾನ್ಯವಾಗಿದೆಯಾದರೂ ವರಿಷ್ಠರ ವಂಶದ ಕುಡಿ ಎಂಬ ಕಾರಣಕ್ಕೆ ಅತೀ ಕಿರಿಯ ವಯಸ್ಸಿನ ಸಂಸದನ ಕಾಲಿಗೆರಗಿದ್ದು ಅಪರೂಪವಾಗಿದೆ.