ಜಿಲ್ಲೆ

ಒಕ್ಕಲಿಗರಿಗೆ ಒಲಿಯುತ್ತಾ ಮಧುಗಿರಿ ಪಟ್ಟ?

ತುಮಕೂರು ಡೆಸ್ಕ್

31ಕ್ಕೆ ಪುರಸಭೆ ಅಧ್ಯ, ಉಪಾಧ್ಯರ ಆಯ್ಕೆಗೆ ಚುನಾವಣೆ | ಸಚಿವ ಕೆ.ಎನ್​.ರಾಜಣ್ಣರತ್ತ ಎಲ್ಲರ ಚಿತ್ತ

ಮಧುಗಿರಿ: ಸಹಕಾರ ಸಚಿವ ಕೆ.ಎನ್​.ರಾಜಣ್ಣ ಕ್ಷೇತ್ರ ಮಧುಗಿರಿ ಪುರಸಭೆಯ ಅಧ್ಯ ಸ್ಥಾನ ಸಾಮಾನ್ಯ ಮತ್ತು ಉಪಾಧ್ಯ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ಆ.31ಕ್ಕೆ ಅಧ್ಯ ಮತ್ತು ಉಪಾಧ್ಯರ ಆಯ್ಕೆಗೆ ಉಪವಿಭಾಗಾಧಿಕಾರಿ ಮತ್ತು ಪುರಸಭೆ ಆಡಳಿತಾಧಿಕಾರಿ ಗೋಟೂರು ಶಿವಪ್ಪ ಚುನಾವಣೆ ನಿಗದಿ ಮಾಡಿದ್ದಾರೆ.


ಒಟ್ಟು 23 ಸದಸ್ಯರಿರುವ ಪುರಸಭೆಯಲ್ಲಿ 14 ಸದಸ್ಯರು ಕಾಂಗ್ರೆಸ್​, 8 ಜೆಡಿಎಸ್​ ಮತ್ತು ಒಬ್ಬರ ಪೇತರ ಸದಸ್ಯರಿದ್ದಾರೆ. 8 ಜೆಡಿಎಸ್​ ಸದಸ್ಯರಲ್ಲಿ ಮೂವರು ಕಾಂಗ್ರೆನಲ್ಲಿ ಗುರುತಿಸಿಕೊಂಡಿದ್ದಾರೆ.ಈ ಹಿಂದಿನ ಅವಧಿಯಲ್ಲಿ ಕಾಂಗ್ರೆಸ್​&ಜೆಡಿಎಸ್​ ಮೈತ್ರಿಯಿಂದಾಗಿ ಜೆಡಿಎಸ್​ನ ತಿಮ್ಮರಾಯಪ್ಪ ಅಧ್ಯ ಹಾಗೂ ಕಾಂಗ್ರೆಸ್​ ರಾಧಿಕಾ ಆನಂದಕೃಷ್ಣ ಉಪಾಧ್ಯೆಯನ್ನಾಗಿ ಅವಿರೋಧವಾಗಿ ಆಯ್ಕೆ ಮಾಡುವಲ್ಲಿ ಕೆ.ಎನ್​.ರಾಜಣ್ಣ ಪ್ರಮುಖ ಪಾತ್ರ ವಹಿಸಿದ್ದರು. ಈ ಚುನಾವಣೆಯಲ್ಲೂ ಅವಿರೋಧವಾಗಿ ಆಯ್ಕೆಯಾಗುವ ಸಂಪ್ರದಾಯ ಮುಂದುವರಿಯುವ ಸಂಭವವಿದೆ.


ಲಾಲಾಪೇಟೆ ಮಂಜುನಾಥ್​ಗೆ ದಕ್ಕೀತೆ ಅಧ್ಯಗಿರಿ? : 23ನೇ ವಾರ್ಡಿನ ಸದಸ್ಯ ಲಾಲಾಪೇಟೆ ಮಂಜುನಾಥ್​ ಸೇರಿ ಮೂವರು ಸದಸ್ಯರು ಜೆಡಿಎಸ್​ನಿಂದ ಗೆದ್ದಿದ್ದರೂ ಕಾಂಗ್ರೆಸ್​ನಲ್ಲಿ ಗುರುತಿಸಿಕೊಂಡಿದ್ದು, ಈ ಬಾರಿ ಅಧ್ಯ ಸ್ಥಾನವನ್ನು ಸಾಮಾನ್ಯ ವರ್ಗಕ್ಕೆ ಮೀಸಲಿರಿಸಲಾಗಿದೆ. ಕಾಂಗ್ರೆಸ್​ನಲ್ಲಿ 3 ಪುರುಷ ಸದಸ್ಯರನ್ನು ಹೊರತುಪಡಿಸಿ 11 ಮಹಿಳಾ ಸದಸ್ಯರಿದ್ದಾರೆ. 2018ರಲ್ಲಿ ಜೆಡಿಎಸ್​ನಲ್ಲಿ ಹಾಲಿ ಶಾಸಕರಿದ್ದರೂ ಪುರಸಭೆ ಚುನಾವಣೆಯಲ್ಲಿ ಜಯಗಳಿಸಿದ ಮೂರೇ ತಿಂಗಳಿಗೆ ಕೆ.ಎನ್​.ರಾಜಣ್ಣ ಅವರನ್ನು ನಂಬಿಕೊಂಡು ಕಾಂಗ್ರೆಸ್​ಗೆ ಬಂದಿರುವ ಕುಂಚಿಟಿಗ ಸಮುದಾಯದ ಲಾಲಾಪೇಟೆ ಮಂಜುನಾಥ್​ ಅಧ್ಯ ಸ್ಥಾನಕ್ಕೆ ಪ್ರಬಲ ಆಕಾಂಯಾಗಿ ಕಂಡು ಬರುತ್ತಿದ್ದಾರೆ.


ರಾಜಕೀಯ ತಂತ್ರಗಾರಿಕೆ: ಕ್ಷೇತ್ರದಲ್ಲಿ ಕುಂಚಿಟಿಗ ಸಮುದಾಯ ಪ್ರಬಲ ಮತ ಬ್ಯಾಂಕ್​ ಹೊಂದಿದ್ದರೂ ಪುರಸಭೆಯ ಇತಿಹಾಸದಲ್ಲಿ ಇಲ್ಲಿಯವರೆಗೂ ಕುಂಚಿಟಿಗ ಒಕ್ಕಲಿಗ ಸಮುದಾಯದ ಯಾರೊಬ್ಬರಿಗೂ ಪುರಸಭೆ ಅಧ್ಯ ಸ್ಥಾನ ಒಲಿದಿಲ್ಲ. ಈ ಹಿಂದೆ ಒಕ್ಕಲಿಗ ಸಮುದಾಯದ ದಿ.ಎಂ.ಪಿ.ಗಣೇಶ್​ ಉಪಾಧ್ಯ ಸ್ಥಾನ ಅಲಂಕರಿಸಿದ್ದರು. ಈ ಬಾರಿ ಕೆ.ಎನ್​.ರಾಜಣ್ಣ ಮತ್ತು ವಿಧಾನ ಪರಿಷತ್​ ಸದಸ್ಯ ರಾಜೇಂದ್ರ ರಾಜಣ್ಣ ಅಧ್ಯ ಸ್ಥಾನವನ್ನು ಕುಂಚಿಟಿಗ ಸಮುದಾಯಕ್ಕೆ ಕೊಡುಗೆಯಾಗಿ ನೀಡಲಿದ್ದಾರೆ ಎಂಬ ಮಾತುಗಳು ೇತ್ರದಲ್ಲಿ ಕೇಳಿ ಬರುತ್ತಿದ್ದು, ಲಾಲಾಪೇಟೆ ಮಂಜುನಾಥ್​ಗೆ ಅಧ್ಯ ಸ್ಥಾನ ಒಲಿದು ಬಂದಲ್ಲಿ ಇತಿಹಾಸ ನಿರ್ಮಾಣವಾಗಲಿದೆ. ಇದು ನಿಜವೇ ಆದಲ್ಲಿ ರಾಜಣ್ಣ ಅವರನ್ನು ನಂಬಿಕೊಂಡು ಬಂದವರನ್ನು ಅವರು ಎಂದಿಗೂ ಕೈ ಬಿಡುವುದಿಲ್ಲ ಎಂಬ ಮಾತು ಮತ್ತೊಮ್ಮೆ ನಿಜವಾಗಲಿದೆ. ರಾಜಣ್ಣ ಒಕ್ಕಲಿಗ ವೀರೋಧಿ ಎಂದು ಚುನಾವಣಾ ಸಂದರ್ಭದಲ್ಲಿ ರಾಜಕೀಯ ಅಸವನ್ನಾಗಿ ಬಳಸಿಕೊಳ್ಳುತ್ತಿರುವ ವಿರೋಧಿಗಳಿಗೆ ತಕ್ಕ ಉತ್ತರ ನೀಡಿದಂತಾಗುತ್ತದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.

ಉಪಾಧ್ಯಕ್ಷ ಸ್ಥಾನದ ಕಗ್ಗಂಟು: ಉಪಾಧ್ಯ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿರುವುದರಿಂದ ಕಾಂಗ್ರೆಸ್​ನಿಂದ ಆಯ್ಕೆಯಾದ 11 ಮಹಿಳಾ ಸದಸ್ಯರಲ್ಲಿ ಯಾರಿಗೆ ಪಟ್ಟ ಕಟ್ಟಬೇಕು ಎಂಬುದು ಯಕ್ಷ ಪ್ರಶ್ನೆಯಾಗಿದ್ದು ಆಯ್ಕೆ ಕಗ್ಗಂಟಾಗಿ ಪರಿಣಮಿಸಲಿದೆ.

ಕಾಂಗ್ರೆಸ್​ನವರನ್ನೇ ಅಧ್ಯರನ್ನಾಗಿ ಮಾಡಿ: ವರಮಹಾಲಕ್ಷ್ಮೀ ಹಬ್ಬದ ದಿನ ಕಾಂಗ್ರೆಸ್​ನ ಕೆಲ ಸದಸ್ಯರು ರಾಜಣ್ಣ ಅವರನ್ನು ಭೇಟಿ ಮಾಡಿ ಅಧ್ಯ ಸ್ಥಾನಕ್ಕೆ ಕಾಂಗ್ರೆಸ್​ನಿಂದ ಗೆದ್ದಿರುವ ಯಾರನ್ನಾದರೂ ಆಯ್ಕೆ ಮಾಡಿ. ಇದಕ್ಕೆ ನಮ್ಮ ಅಭ್ಯಂತರವಿಲ್ಲ ಎಂದು ತಿಳಿಸಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಯಾವುದೇ ಹೆಸರುಗಳು ಕೇಳಿ ಬಂದರೂ ಕೊನೆಗೆ ರಾಜಣ್ಣ ಮತ್ತು ರಾಜೇಂದ್ರ ರಾಜಣ್ಣ ಅವರ ತೀರ್ಮಾನವೇ ಅಂತಿಮ ಎನ್ನಲಾಗಿದ್ದು, ಉಳಿದಿರುವ ಒಟ್ಟು 14 ತಿಂಗಳ ಅವಧಿಯಲ್ಲಿ ಪುರಸಭೆಯ ಅಧಿಕಾರದ ಚುಕ್ಕಾಣಿ ಯಾರು ಹಿಡಿಯಲಿದ್ದಾರೆಂದು ಕಾದು ನೋಡಬೇಕಿದೆ.

ಕೊರಟಗೆರೆಯಲ್ಲಿ ಸಭೆ: ಇನ್ನು ಕುಂಚಿಟಿಗ ಸಮುದಾಯದ ಲಾಲಾಪೇಟೆ ಮಂಜುನಾಥ್​ ಅಧ್ಯ ಸ್ಥಾನಕ್ಕೆ ಆಯ್ಕೆಯಾಗದಂತೆ ನೋಡಿಕೊಳ್ಳಬೇಕು ಎಂದು ಕೆಲ ಕಾಣದ ಕೈಗಳು ಕಸರತ್ತು ನಡೆಸುತ್ತಿದ್ದು, ಇವರಿಗೆ ಅಧ್ಯಗಿರಿ ತಪ್ಪಿಸಿ ಒಕ್ಕಲಿಗರಿಗೆ ರಾಜಣ್ಣ ರಾಜಕೀಯ ಅಧಿಕಾರ ನೀಡುವುದಿಲ್ಲ ಎಂದು ಮುಂಬರುವ ಚುನಾವಣೆಗಳಲ್ಲಿ ದಾಳವನ್ನಾಗಿಸಿಕೊಳ್ಳಲು ವಿರೋಧಿಗಳು ಯತ್ನಿಸುತ್ತಿದ್ದು, ಮಧುಗಿರಿಯಲ್ಲಿ ಸಭೆ ನಡೆಸಿದರೆ ಎಲ್ಲಿ ಗುಟ್ಟು ರಟ್ಟಾಗುವುದೋ ಎಂಬ ಉದ್ದೇಶದಿಂದ ಪಕ್ಕದ ಕೊರಟಗೆರೆಯಲ್ಲಿ ಸಭೆ ನಡೆಸಿ ಪ್ರಭಾವಿಯೊಬ್ಬರ ಮೂಲಕ ಕಸರತ್ತು ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.​