ಜಿಲ್ಲೆ

ಸಚಿವ ಮಧು ಬಂಗಾರಪ್ಪ ಜನ್ಮದಿನ: ಪಟಾಕಿ ಸಿಡಿಸಿ, ಸಿಹಿ ಹಂಚಿ ಅಭಿಮಾನಿಗಳ ಸಂಭ್ರಮ

ತಾಳಗುಪ್ಪ: ಸಚಿವ ಮಧು ಬಂಗಾರಪ್ಪ ಜನ್ಮದಿನ ನಿಮಿತ್ತ ಕಾಂಗ್ರೆಸ್ ಕಾರ್ಯಕರ್ತರು ಸಚಿವರ ಕಾರ್ಯಾಲಯ ಸಮೀಪ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಆಸ್ಪತ್ರೆ, ಬಸ್ ನಿಲ್ದಾಣ, ಆಟೋ ನಿಲ್ದಾಣಗಳಲ್ಲಿ ಸಿಹಿ ಹಂಚಿದರು.

ಕಾಂಗ್ರೆಸ್ ಹೋಬಳಿ ಘಟಕದ ಅಧ್ಯಕ್ಷ ಶಿವಮೂರ್ತಿ ಮಂಡಗಳಲೆ, ಪ್ರಧಾನ ಕಾರ್ಯದರ್ಶಿ ಅಣ್ಣಪ್ಪ ಮರ್ಗಿ, ಪ್ರಮುಖರಾದ ಮಂಜು ಕನ್ನಡಿಗ, ವೀರಭದ್ರಪ್ಪ, ಮುಖಂಡರಾದ ಹುಚ್ಚಪ್ಪ ಮಂಡಗಳಲೆ, ಅನಿಲ್ ಗೌಡ, ಹುಚ್ಚಪ್ಪ ಆಲಳ್ಳಿ ಇತರರಿದ್ದರು.