ಸಚಿವ ಮಧು ಬಂಗಾರಪ್ಪ ಜನ್ಮದಿನದ ಪ್ರಯುಕ್ತ ಉಳ್ಳಿ ಫೌಂಡೇಶನ್‌ನಿಂದ ಮಹಿಳಾ ಪೌರಕಾರ್ಮಿಕರಿಗೆ ಸೀರೆ ಮತ್ತು ಅಗತ್ಯ ಸಲಕರಣೆ ನೀಡಲಾಯಿತು. ಉಳ್ಳಿ ದರ್ಶನ್, ದಯಾನಂದ ಗಾಮ, ರಾಜು ಉಡುತಡಿ ಇತರರಿದ್ದರು. 
ಜಿಲ್ಲೆ

ಮಧು ಬಂಗಾರಪ್ಪ ಜನ್ಮದಿನ: ಪೌರಕಾರ್ಮಿಕರಿಗೆ ಸೀರೆ ವಿತರಣೆ

ಶಿಕಾರಿಪುರ: ಮಧು ಬಂಗಾರಪ್ಪ ತಂದೆಯಂತೆಯೇ ಉಪೇಕ್ಷಿತ ವರ್ಗಗಳ, ಬಡವರ, ಕೂಲಿ ಕಾರ್ಮಿಕರ ನಾಯಕ ಎಂದು ಪುರಸಭೆ ಸದಸ್ಯ ಉಳ್ಳಿ ದರ್ಶನ್ ಹೇಳಿದರು.

ಸಚಿವ ಮಧು ಬಂಗಾರಪ್ಪ ಜನ್ಮದಿನ ಪ್ರಯುಕ್ತ ಉಳ್ಳಿ ಫೌಂಡೇಶನ್‌ನಿಂದ ಪುರಸಭೆ ಪೌರಕಾರ್ಮಿಕರಿಗೆ ಸೀರೆ, ಹ್ಯಾಂಡ್ ಗ್ಲೌಸ್ ಹಾಗೂ ನೀರಿನ ಬಾಟಲ್‌ಗಳನ್ನು ವಿತರಿಸಿ ಮಾತನಾಡಿದ ಅವರು, ಮಧು ಬಂಗಾರಪ್ಪ ಜನ್ಮದಿನವನ್ನು ವಿಶೇಷವಾಗಿ ಆಚರಿಸಬೇಕು ಎಂಬ ದೃಷ್ಟಿಯಿಂದ ಮಹಿಳಾ ಪೌರ ಕಾರ್ಮಿಕರಿಗೆ ಅನುಕೂಲವಾಗುವ ಸಲಕರಣೆ ನೀಡಲಾಯಿತು ಎಂದರು.
ಮಧು ಸಚಿವರಾದ ಮೇಲೆ ಶಿಕ್ಷಣ ಕ್ಷೇತ್ರದಲ್ಲಿ ಬಹಳಷ್ಟು ಪಾರದರ್ಶಕ ವ್ಯವಸ್ಥೆ ಜಾರಿಗೆ ಬಂದಿದೆ. ಮಕ್ಕಳಿಗೆ ಪೌಷ್ಟಿಕಾಂಶದ ಕೊರತೆ ಆಗದಂತೆ ವಾರದ ಮೂರು ದಿನ ರಾಗಿ ಮಾಲ್ಟ್ ವಿತರಣೆ, ಶಾಲೆಗಳ ದುರಸ್ತಿ ಮುಂತಾದ ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ. ಅವರ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ನಾಗರಾಜ ನಾಯಕ್, ಪ್ರಮುಖರಾದ ದಯಾನಂದ ಗಾಮ, ರಾಜು ಉಡುತಡಿ, ಶಶಾಂಕ್, ನವೀನ್, ಶ್ರೀನಿವಾಸ್ ಇತರರಿದ್ದರು.