ಶಿರಾ : ಅವೈಜ್ಞಾನಿಕ ಕಾಮಗಾರಿಯಿಂದ ಶಿರಾ-ಬುಕ್ಕಾಪಟ್ಟಣ ರಾಷ್ಟ್ರೀಯ ಹೆದ್ದಾರಿ 234ರಲ್ಲಿ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿವೆ. ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗದಿದ್ದರೆ ಇಲ್ಲಿಂದ ಹೊರಹೋಗಿ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್‌ಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತರಾಟೆ ತೆಗೆದುಕೊಂಡರು.
ತಾಲೂಕು ಪಂಚಾಯಿತಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ತ್ರೈವಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಶಿರಾ-ಬುಕ್ಕಾಪಟ್ಟಣ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ರಾತ್ರಿ ಸಂಭವಿಸಿದ ಬಸ್ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿ, ಹಲವರಿಗೆ ಗಂಭೀರ ಗಾಯಗಳಾಗಿರುವುದಕ್ಕೆ ಹೆದ್ದಾರಿಯಲ್ಲಿ ಸೂಚನಾ ಫಲಕ ಅಳವಡಿಸದೆ ಇರುವುದೇ ಕಾರಣ ಎಂದು ಅಸಮಾಧಾನ ಹೊರಹಾಕಿದರು.
ತಾಲೂಕಿನಲ್ಲಿ ನಿವೇಶನರಹಿತರು ಎಷ್ಟು ಇದ್ದಾರೆ, ಎಷ್ಟು ಜನರಿಗೆ ನಿವೇಶನ ಹಂಚಲಾಗಿದೆ ಹಾಗೂ ಅರ್ಜಿ ಸಲ್ಲಿಸಿರುವವರಿಗೆ ನಿವೇಶನ ಹಂಚಿಕೆಯಲ್ಲಿ ವಿಳಂಬವಾಗುತ್ತಿರುವುದಾದರೂ ಏಕೆ? ಎಂದು ತಾಲೂಕು ಪಂಚಾಯಿತಿ ಇಒ ಲಕ್ಷ್ಮಣ್ ಅವರನ್ನು ಸಂಸದ ಎ.ನಾರಾಯಣಸ್ವಾಮಿ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಲಕ್ಷ್ಮಣ್ ತಾಲೂಕಿನಲ್ಲಿ 8455 ನಿವೇಶನ ರಹಿತರು,
10 ಸಾವಿರ ವಸತಿ ರಹಿತರು ಹಾಗೂ 1582 ಫಲಾನುಭವಿಗಳ ಪೈಕಿ 888 ಫಲಾನುಭವಿಗಳ ಆಧಾರ್ ಹಾಗೂ ಪಡಿತರ ಚೀಟಿ ಸಮಸ್ಯೆಯಿಂದ ನಿವೇಶನ ಹಂಚಿಕೆ ಬಾಕಿ ಇರುತ್ತದೆ ಎಂದು ವಿವರಿಸಿದರು. ಈ ಕೂಡಲೇ ಪಿಡಿಒಗಳಿಗೆ ತಿಳಿಸಿ ಗ್ರಾಪಂಗಳ ವ್ಯಾಪ್ತಿಯಲ್ಲಿ ಗುಡಿಸಲು ಹಾಗೂ ಶಿಥಿಲಗೊಂಡ ಮನೆಗಳಲ್ಲಿ ವಾಸ ವಾಡುತ್ತಿರುವ ಕುಟುಂಬಗಳ ವಾಹಿತಿ ನೀಡಿದರೆ ಅವರಿಗೆ ವಸತಿ ಹಾಗೂ ನಿವೇಶನ
ಕೊಡುವ ವ್ಯವಸ್ಥೆ ವಾಡುವುದಾಗಿ ಸೂಚಿಸಿದರು.
ನಂತರ 10 ಮನೆಗೂ ಹೆಚ್ಚು ಇರುವ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಗುರುತಿಸಿ ತಾಲೂಕಿನಾದ್ಯಂತ ಸರ್ವೇ ಆಗಿರುವ ಬಗ್ಗೆ ತಹಸೀಲ್ದಾರ್ ಮಮತಾಗೆ ವಾಹಿತಿ ಕೇಳಿದರು. ಇದಕ್ಕೆ ಉತ್ತರಿಸಿದ ತಹಸೀಲ್ದಾರ್, 128 ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಗುರುತಿಸಿದ್ದು, ಅದರಲ್ಲಿ 58 ಗ್ರಾಮಗಳು ಸರ್ವೇಯಾಗಿದ್ದು, ಅನುಮೋದನೆಗೆ ಕಳುಹಿಸಲಾಗಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶಂಕರ್, ಅರಣ್ಯಾಧಿಕಾರಿ ರಾಧಾ ಕೆಡಿಪಿ ಸಭೆಗೆ ತಪ್ಪುತಪ್ಪಾಗಿ ಅಂಕಿ ಅಂಶ ನೀಡಿದ್ದನ್ನು ಪ್ರಶ್ನಿಸಿದ ಸಚಿವ ಮಾಧುಸ್ವಾಮಿ, ಸಭೆಗೆ ಬರುವಾಗ ಅಂಕಿ ಅಂಶಗಳ ಬಗ್ಗೆ ಇರುವ ವ್ಯತ್ಯಾಸ ಸಹ ನೋಡದೆ ವಾಹಿತಿ ನೀಡಲು ಬಂದಿದ್ದೀರಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಶಾಸಕ ಡಾ.ಸಿ.ಎಂ.ರಾಜೇಶ್‌ಗೌಡ, ಡಿವೈಎಸ್‌ಪಿ ಕುವಾರಪ್ಪ, ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಯ್ಯ, ಜಿಪಂ ಸದಸ್ಯ ರಾಮಕೃಷ್ಣ, ಸ್ಥಾಯಿಸಮಿತಿ ಅಧ್ಯಕ್ಷ ತಿಮ್ಮಣ್ಣ ಹಾಗೂ ತಾಲೂಕಿನ ವಿವಿಧ
ಇಲಾಖೆಗಳ ಅಧಿಕಾರಿಗಳು ಇದ್ದರು.
ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ: ಬರಗೂರು ಶಾಲೆ ಕಾಂಪೌಂಡ್‌ನಲ್ಲೇ ಓವರ್ ಹೆಡ್ ಟ್ಯಾಂಕ್ ನಿರ್ಮಿಸಿದ್ದು, ನೀರು ಸರಬರಾಜು ವಾಡದೇ ಇರುವುದರಿಂದ ಶಾಲೆಗೆ ನೀರಿಲ್ಲದಂತಾಗಿದೆ ಎಂದು ಗ್ರಾಮೀಣ ನೀರು ಸರಬರಾಜು ಎಇಇ ಮಂಜುಪ್ರಸಾದ್‌ಗೆ ಎಂಎಲ್‌ಸಿ ಎಂ.ಚಿದಾನಂದ್ ಗೌಡ ಪ್ರಶ್ನಿಸಿದರು. ಇದಕ್ಕೆ ಧ್ವನಿಗೂಡಿಸಿದ ಎಂಎಲ್‌ಸಿ ತಿಪ್ಪೇಸ್ವಾಮಿ, ಸಾಕಷ್ಟು ಕಡೆ ಓವರ್ ಹೆಡ್ ಟ್ಯಾಂಕ್ ನಿರ್ಮಿಸಿದ್ದು, ನೀರು ಸರಬರಾಜಿಗೆ ಪೈಪ್‌ಲೈನ್ ಕೂಡ ವಾಡಿಲ್ಲ. ಈ ಬಗ್ಗೆ ಗಮನ ಹರಿಸಿ ಸಮಸ್ಯೆ ಬಗೆಹರಿಸಿ ಎಂದು ತಿಳಿಸಿದರು.
ನರೇಗಾದಲ್ಲಿ ಅಂಗನವಾಡಿ ನಿರ್ಮಿಸಿ: ತಾಲೂಕಿನಲ್ಲಿ ಒಟ್ಟು 466 ಅಂಗವನಾಡಿ ಕೇಂದ್ರಗಳಿವೆ. ಅವುಗಳಲ್ಲಿ 308ಕ್ಕೆ ಸ್ವಂತ ಕಟ್ಟಡಗಳಿದ್ದು, 26 ಅಂಗನವಾಡಿ ನಿರ್ಮಾಣ ಹಂತದಲ್ಲಿವೆ. 73 ಗ್ರಾಮೀಣ ಪ್ರದೇಶದ ಹಾಗೂ 29 ನಗರ ಪ್ರದೇಶದ ಅಂಗನವಾಡಿಗಳಿಗೆ ನಿವೇಶನ ಬೇಕಾಗಿರುತ್ತದೆ ಎಂದು ಸಿಡಿಪಿಒ ಕೆಂಪಹನುಮಯ್ಯ ಸಭೆಯಲ್ಲಿ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಂಸದ ನಾರಾಯಣಸ್ವಾಮಿ ಅವರು, ನಿವೇಶನ ಒದಗಿಸುವುದರ ಜತೆಗೆ ನರೇಗಾ ಯೋಜನೆಯಲ್ಲಿ ಕಟ್ಟಡ ನಿರ್ವಾಣ ವಾಡಿಕೊಡಿ ಎಂದು ಪೌರಾಯುಕ್ತ ಪರಮೇಶ್ವರಪ್ಪ ಹಾಗೂ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಣ್‌ಗೆ ಸೂಚಿಸಿದರು.