ಕಲಬುರ್ಗಿಯ ವಕೀಲ ಈರಣ್ಣ ಗೌಡ ಪಾಟೀಲ್ ಅವರ ಹತ್ಯೆಯನ್ನು ಖಂಡಿಸಿ ಮದ್ದೂರು ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ವಕೀಲರ ಸಂಘದ ವತಿಯಿಂದ ಪ್ರತಿಭಟಿಸಿ ತಹಸೀಲ್ದಾರ್ ಸೋಮಶೇಖರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಶಿವಣ್ಣ, ಸುಮಂತ್, ಸುವರ್ಣ, ಪ್ರಸನ್ನ ಇದ್ದರು. 
ಜಿಲ್ಲೆ

ವಕೀಲರ ಸಂಘದಿಂದ ಕಲಾಪ ಬಹಿಷ್ಕಾರ

ನಾಗೇಶ ಎಸ್

ಮದ್ದೂರು: ಕಲಬುರ್ಗಿಯ ವಕೀಲ ಈರಣ್ಣ ಗೌಡ ಪಾಟೀಲ್ ಹತ್ಯೆ ಖಂಡಿಸಿ ಪಟ್ಟಣದಲ್ಲಿ ವಕೀಲರ ಸಂಘದ ವತಿಯಿಂದ ಶುಕ್ರವಾರ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಲಾಯಿತು.

ಸಂಘದ ಅಧ್ಯಕ್ಷ ಶಿವಣ್ಣ ಮಾತನಾಡಿ, ನ್ಯಾಯವನ್ನು ಎತ್ತಿ ಹಿಡಿಯುವ ವಕೀಲರಿಗೆ ರಕ್ಷಣೆ ಇಲ್ಲದಂತಾಗಿದೆ. ವಕೀಲರು ನಿರ್ಭಿತಿಯಿಂದ ಕಾರ್ಯನಿರ್ವಹಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕಲಬುರ್ಗಿಯಲ್ಲಿ ನಡೆದ ಹತ್ಯೆ ಪ್ರಕರಣವು ವಕೀಲರಿಗೆ ಆತಂಕವನ್ನುಂಟು ಮಾಡಿದೆ. ಸಮಾಜದಲ್ಲಿ ಯಾವುದೇ ರಕ್ಷಣೆ ಇಲ್ಲದೆ ವಕೀಲರು ಕಾರ್ಯನಿರ್ವಹಿಸಬೇಕಾಗಿದೆ. ಹತ್ಯೆ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಹಾಗೂ ಹತ್ಯೆಯಾಗಿರುವ ವಕೀಲನ ಕುಟುಂಬಕ್ಕೆ ಸರ್ಕಾರ ಆರ್ಥಿಕ ನೆರವು ನೀಡುವುದರ ಜತೆಗೆ ನ್ಯಾಯ ಒದಗಿಸಬೇಕು ಎಂದರು.

ತಹಸೀಲ್ದಾರ್ ಸೋಮಶೇಖರ್ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಸಂಘದ ಉಪಾಧ್ಯಕ್ಷ ಎ.ಎಂ.ಪುಟ್ಟರಾಜು, ಪ್ರಧಾನ ಕಾರ್ಯದರ್ಶಿ ಎಂ.ಜೆ. ಸುಮಂತ್, ಜಂಟಿ ಕಾರ್ಯದರ್ಶಿ ಸುವರ್ಣ, ಖಜಾಂಚಿ ಪ್ರಸನ್ನ, ವಕೀಲರಾದ ಕೊಪ್ಪ ದೇವರಾಜು, ಶೇಖರ್, ಟಿ.ಜೆ.ಸುನೀಲ್ ಕುಮಾರ್, ಚೈತ್ರಾ, ಎಂ.ಎಂ.ಯಧುನಂದನ, ಪಿ.ಸಿದ್ದಪ್ಪಾಜಿ ಸೇರಿದಂತೆ ಇತರರಿದ್ದರು.