ಜಿಲ್ಲೆ

ಬುದ್ಧನ ಚಿಂತನೆಗಳು ಸರ್ವಕಾಲಿಕ

ಎ. ಆರ್. ರಘುರಾಮ

ಮದ್ದೂರು : ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸಿ, ಕರುಣೆಯಿಂದ ಕಾಣಬೇಕು ಎಂದು ನಿವೃತ್ತ ಶಿಕ್ಷಕ ಜ್ಞಾನವರ್ ಬೋದ್ ತಿಳಿಸಿದರು.

ಪಟ್ಟಣದ ಗುರುಭವನದಲ್ಲಿ ರಾಷ್ಟ್ರೀಯ ಸಾಕೇತ್ ಸಾಮ್ರಾಟ್ ಧಾರ್ಮಿಕ ದತ್ತಿ ಮತ್ತು ಶೈಕ್ಷಣಿಕ ಟ್ರಸ್ಟ್ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಚಿಂತನೆ, ಆರೋಗ್ಯ ಮತ್ತು ಕೃಷಿ ಬಗೆಗಿನ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಬುದ್ಧನ ಚಿಂತನೆಗಳು ಸರ್ವಕಾಲಿಕವಾಗಿವೆ. ಇವುಗಳನ್ನು ಅಳವಡಿಸಿಕೊಂಡರೆ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ಹಾಗೂ ಆರೋಗ್ಯ ನೆಲಸುತ್ತದೆ ಎಂದರು. ಉಪನ್ಯಾಸಕ ಎಂ.ಸಿ.ಗುರುಪ್ರಸಾದ್ ಮತ್ತು ಡಾ.ಕೆ.ಸೌಭಾಗ್ಯಾ ವಿಶೇಷ ಉಪನ್ಯಾಸ ನೀಡಿದರು. ಮಹದೇವಪ್ಪ,ಯೋಗಾನಂದ, ದೇವರಾಜು, ಅತಗೂರು ನಿಂಗಪ್ಪ, ಅರುಣ್ ಮೌರ್ಯ ಇತರರು ಇದ್ದರು.