ಜಿಲ್ಲೆ

ಸ್ಪೋಟದ ಜಾಗ ಮರೆಮಾಚಿದರೇ? - ಘಟನೆ ನಡೆದ ಸ್ಥಳದಿಂದ ಅವಶೇಷ ತರಾತುರಿಯಲ್ಲಿ ಸಾಗಿಸಿದ ಅನುಮಾನ

Mangaluru - Nishantha Narayana

ವಿಟ್ಲ: ವಿಟ್ಲದ ಕ್ವಾರಿಯಲ್ಲಿ ಸಂಭವಿಸಿದ ಭೀಕರ ಸ್ಪೋಟದ ಸುತ್ತ ಹಲವು ಅನುಮಾನಗಳು ಮೂಡಿವೆ. ಸ್ಪೋಟಕಗಳನ್ನು ಕಲ್ಲು ಬಂಡೆಗಳ ತಪ್ಪಲಿನ ನೆರಳಿನ ಪ್ರದೇಶದಲ್ಲಿ ಇಟ್ಟಿರುವಂತೆ ಸ್ಥಳದಲ್ಲಿ ಕುರುಹುಗಳು ಕಾಣಿಸುತ್ತವೆ. ಜಾಗದಲ್ಲಿ ಪ್ಲಾಸ್ಟಿಕ್ ತುಂಡು, ವಯರ್ ತುಂಡುಗಳು, ಕೆಲವು ಸೋಟಕದ ತುಂಡುಗಳು ಸಿಕ್ಕಿವೆ. ಘಟನೆ ನಡೆದ ಕೆಲವೇ ಕ್ಷಣದಲ್ಲಿ ಹೆಚ್ಚಿನ ಸಾಮಾಗ್ರಿಗಳನ್ನು ಸ್ಥಳದಿಂದ ಬೇರೆಡೆಗೆ ವರ್ಗಾವಣೆ ಮಾಡಿದ್ದಾರೆಂದು ಸ್ಥಳದಲ್ಲಿ ಅನುಮಾನ ವ್ಯಕ್ತವಾಗಿದೆ. ಹಿರಿಯ ಅಽಕಾರಿಗಳನ್ನು ಇನ್ನೊಂದು ಸ್ಥಳಕ್ಕೆ ಕರೆದುಕೊಂಡು ಹೋಗಿ ತೋರಿಸಿದ್ದು, ನೈಜ ಘಟನೆಯಾದ ಜಾಗವನ್ನು ಮುಚ್ಚಿಟ್ಟಿದ್ದಾರೆ ಎಂಬ ಅನುಮಾನವಿದೆ.

*ಎಲ್ಲರನ್ನೂ ಜಾಡಿಸಿದ ಸ್ಥಳೀಯರು: ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ವಿಟ್ಲಮುಡ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಪುನೀತ್ ಮಾಡತ್ತಾರು, ಪಂಚಾಯಿತಿ ಅಭಿವೃದ್ಧಿ ಅಽಕಾರಿ ಸುಜಯ ಕೆ. ಸ್ಥಳಕ್ಕಾಗಮಿಸಿದ್ದಾರೆ. ಸ್ಥಳೀಯ ನಿವಾಸಿಗಳು ಗಣಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೂರುಗಳನ್ನು ನೀಡಿದರೂ, ಅಗತ್ಯ ಕ್ರಮಕೈಗೊಂಡಿಲ್ಲ ಎಂದು ತೀವ್ರ ತರಾಟೆಗೆ ತೆಗೆದುಕೊಂಡರು. ಘಟನೆ ನಡೆದ ಒಂದೂವರೆ ತಾಸಿನ ಬಳಿಕ ಸ್ಥಳಕ್ಕೆ ಬಂದ ವಿಟ್ಲ ಪೊಲೀಸರಿಗೆ ಽಕ್ಕಾರ ಕೂಗಿ ಘೇರಾವ್ ಹಾಕಿದರು. ೧೦ ನಿಮಿಷ ದಾರಿ ಇರುವವರು ತಡವಾಗಿ ಬಂದಿದ್ಯಾಕೆ? ಅಪಾಯಾಕಾರಿ ವಸ್ತುಗಳ ಬಗ್ಗೆ ನಿರ್ಲಕ್ಷ್ಯತೆ ವಹಿಸಿದ್ಯಾಕೆ? ಊರಿಗೆಲ್ಲಾ ತಿಳಿದರೂ ರಕ್ಷಕ ವಿಭಾಗಕ್ಕೆ ತಿಳಿಯದೆ ಇದ್ದದ್ದು ಯಾಕೆ ಎಂದು ಪ್ರಶ್ನೆಗಳನ್ನು ಎತ್ತಿದರು.

ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಅವರು ಸ್ಥಳಕ್ಕೆ ಬೇಟಿ ನೀಡುತ್ತಿದ್ದಂತೆ ಸ್ಥಳದಲ್ಲಿದ್ದ ಜನರು ಕೆಂಡಾಮಂಡಲಗೊಂಡಿದ್ದಾರೆ. ಕ್ವಾರಿಗೆ ವಿರೋಧ ವ್ಯಕ್ತಪಡಿಸಿದಾಗ ಬಡಿಯಲು ಜನ ಕಳುಹಿಸಿದಿರಿ, ಈಗ ಜನರ ಪ್ರಾಣ ಹೋಗುವ ಸ್ಥಿತಿ ನಿರ್ಮಾಣವಗಿದೆ ಈಗ ಏನು ಮಾಡುತ್ತೀರಿ ಎಂದು ಪ್ರಶ್ನೆಗಳ ಸುರಿಮಳೆಯನ್ನೇ ಹಾಕಿದ್ದಾರೆ. ಯುವಕರ ತಂಡವನ್ನು ಬೆದರಿಸುವುದಕ್ಕೆ ಕಳುಹಿಸಿಲ್ಲ ಎಂಬುದನ್ನು ಸ್ಪಷ್ಟಪಡಿಸಿ, ನಾವು ಪ್ರಮಾಣಕ್ಕೂ ಸಿದ್ಧ ಎಂದು ಸ್ಥಳೀಯರು ಹೇಳಿದ್ದಾರೆ. ಕರೆ ಮಾಡಿ ಬೆದರಿಸಿದ್ದಲ್ಲದೆ, ಹಿಂಬಾಲಿಸುವುದಕ್ಕೆ ಜನ ಬಿಟ್ಟಿಲ್ವಾ ಎಂದು ಪ್ರಶ್ನಿಸಿದ್ದಾರೆ.

*ಸಭೆಯಲ್ಲಿ ಮಾತನಾಡಿದವರು ನಾಪತ್ತೆ: ಪಂಚಾಯಿತಿ ಸಭೆಗಳಲ್ಲಿ ಗ್ರಾಮಸ್ಥರು ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುತ್ತಿದ್ದಂತೆ ಸ್ಥಳೀಯ ಪಂಚಾಯಿತಿ ಸದಸ್ಯರೊಬ್ಬರು ಎಲ್ಲದಕ್ಕೂ ನಾನು ಮಾತನಾಡುತ್ತೇನೆಂದು ಹೇಳಿಕೊಂಡು ಜನರ ಬಾಯಿಮುಚ್ಚಿಸುತ್ತಿದ್ದರು. ಸ್ಟೋಟ ನಡೆದು ಜನರು ಸಂಕಷ್ಟಕ್ಕೆ ಸಿಲುಕಿದರೂ ವ್ಯಕ್ತ ನಾಪತ್ತೆಯಾಗಿದಾರೆ. ಈಗ ಜನರ ಸಮಸ್ಯೆಯನ್ನು ಮಾತನಾಡುವವರು ಯಾರು ಎಂದು ಆಕ್ರೋಶಿತ ಜನರು ಪ್ರಶ್ನಿಸುತ್ತಿದ್ದರು.

ಎಲ್ಲ ಕ್ವಾರಿ ಸ್ಥಗಿತವಾಗಲಿ

ಹಲವು ವರ್ಷಗಳಿಂದ ಕ್ವಾರಿ ನಡೆಸುವುದಕ್ಕೆ ಆಕ್ಷೇಪ ವ್ಯಕ್ತಡಿಸಿಕೊಂಡು ಬಂದಿದ್ದೇವೆ. ದೂರು ನೀಡಿದರೂ ಕ್ರಮಗಳಾಗುತ್ತಿಲ್ಲ. ನಮ್ಮಲ್ಲಿ ದಾಖಲೆಗಳ ಅಟ್ಟಿಯಾಗಿದೆ ಹೊರತು ಕ್ವಾರಿಗಳು ನಿಲ್ಲುತ್ತಿಲ್ಲ. ಗ್ರಾಮದಲ್ಲಿ ಜನರಿಗೆ ಸಮಸ್ಯೆಯಾಗುತ್ತಿರುವ ಎಲ್ಲ ಕ್ವಾರಿಗಳನ್ನು ತಕ್ಷಣ ನಿಲ್ಲಿಸಲು ಕ್ರಮ ಆಗಬೇಕು ಎಂದು ಸ್ಥಳದಲ್ಲಿದ್ದವರು ಆಗ್ರಹಿಸಿದರು.

ಗ್ರಾಮ ಪಂಚಾಯಿತಿಯಲ್ಲಿ ಭೂಕಂಪದ ಅನುಭವವಾಗಿದ್ದು, ತಕ್ಷಣ ಸ್ಥಳಕ್ಕೆ ಬಂದು ಪರಿಶೀಲನೆಯನ್ನು ನಡೆಸಿದ್ದೇವೆ. ಮನೆಗಳ ಛಾವಣಿ ಸೇರಿ ವಸ್ತುಗಳಿಗೆ ಹಾನಿಯಾದ ಬಗ್ಗೆ ದೂರು ಬಂದಿದೆ. ಸುಮಾರು ೧೨ ಮನೆಗಳಿಗೆ ಹಾನಿಯಾಗಿರುವ ಮಾಹಿತಿಯಿದೆ. ಗ್ರಾಮದಲ್ಲಿ ೫ ಕ್ವಾರಿಗಳಿದ್ದು, ಪರವಾನಗಿ ಹೊಂದಿವೆ.

| ಸುಜಯ ಕೆ.

ಪಂಚಾಯಿತಿ ಅಭಿವೃದ್ಧಿ ಅಽಕಾರಿ