ಜಿಲ್ಲೆ

ಮಾಡತ್ತಡ್ಕ ಕ್ವಾರಿ ಸೋಟ, ಹಾನಿ ಅಂದಾಜು

Mangaluru - Nishantha Narayana

ವಿಟ್ಲ: ಮಾಡತ್ತಡ್ಕದ ಕ್ವಾರಿಯಲ್ಲಿ ಕಲ್ಲು ಒಡೆಯುವುದಕ್ಕಾಗಿ ತಂದಿರುವ ಸೋಟಕಗಳು ಬಿಸಿಲಿನ ತೀವ್ರತೆಗೆ ಏಕಾಏಕಿ ಸಿಡಿದು ೨೧ ಮನೆಗಳಿಗಾದ ಹಾನಿಯ ಬಗ್ಗೆ ಪಂಚಾಯಿತಿ ರಾಜ್ ಇಂಜಿನಿಯರಿಂಗ್ ವಿಭಾಗ ವರದಿ ಸಿದ್ಧಪಡಿಸಿದ್ದು, ಸುಮಾರು ೧ಲಕ್ಷ ರೂ. ಹಾನಿಯ ಮೌಲ್ಯವೆಂದು ಹೇಳಿದೆ. ಕೇಂದ್ರದ ಪಿಇಎಸ್‌ಒ ತಂಡದ ಸ್ಥಳಕ್ಕಾಗಮಿಸಿ ಮಾದರಿ ಸಂಗ್ರಹಿಸುವ ಕಾರ್ಯವನ್ನು ಗುರುವಾರ ಮಾಡಿದೆ.

ಸೋಟದ ಸ್ಥಳದ ಸಮೀಪದಲ್ಲಿದ್ದ ಎರಡು ಮನೆಗಳಿಗೆ ತೀವ್ರವಾದ ಹಾನಿಯಾಗಿದ್ದು, ೪೭ ಸಾವಿರ ರೂ. ಹಾಗೂ ೩೩ ಸಾವಿರ ರೂ.ಹಾನಿ ಅಂದಾಜಿಸಲಾಗಿದೆ. ೮ ಮನೆಗಳಿಗೆ ಸಾಧಾರಣ ಹಾನಿಯಾಗಿದ್ದು, ೨೨ ಸಾವಿರ ರೂ. ಎಂದು ಹೇಳಲಾಗಿದೆ. ಉಳಿದ ೧೧ ಮನೆಗಳಿಗೆ ಸಣ್ಣ ಪ್ರಮಾಣದ ಹಾನಿಯಾಗಿ ಒಟ್ಟು ೧ ಲಕ್ಷ ರೂ. ಹಾನಿ ಸಂಭವಿಸಿದೆ ಎಂದು ಇಂಜಿನಿಯರಿಂಗ್ ವಿಭಾಗದ ಅಽಕಾರಿಗಳು ವರದಿಯಲ್ಲಿ ಹೇಳಿದ್ದಾರೆ. ವರದಿಯ ವಿಟ್ಲಮುಡ್ನೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಽಕಾರಿಗೆ ಸಲ್ಲಿಕೆ ಮಾಡಿದ್ದು, ಮುಂದಿನ ಕ್ರಮವನ್ನು ಅವರು ಕೈಗೊಳ್ಳಬೇಕಾಗಿದೆ.

ಕೇಂದ್ರ ಸರ್ಕಾರದ ಕಾಮರ್ಸ್ ಆಂಡ್ ಇಂಡಸ್ಟ್ರಿ ಅಡಿಯಲ್ಲಿ ಬರುವ ಪೆಟ್ರೋಲಿಯಂ ಆಂಡ್ ಎಕ್ಸ್-ಸಿವ್ಸ್ ಸೇಫ್ಟಿ ಆರ್ಗನೈಸೇಶನ್‌ನ ಅಽಕಾರಿ ಐನ್ ನಂದಿ ಅವರನ್ನೊಳಗೊಂಡ ತಂಡ ಸ್ಥಳಕ್ಕೆ ಭೇಟಿ ನೀಡಿದೆ. ಸೋಟದ ಬಳಿಕ ಉಳಿದ ಅವಶೇಷಗಳನ್ನು ಸ್ಥಳದಲ್ಲಿ ಸಂಗ್ರಹಿಸಿದ್ದಾರೆ. ಪ್ರಾಥಮಿಕ ತನಿಖೆಯ ಸಂದರ್ಭ ಹೇಳಲಾದ ವಸ್ತುವನ್ನೇ ಸೋಟಕ್ಕೆ ಬಳಸಲಾಗಿದೆಯಾ ಅಥವಾ ಬೇರಾವುದಾದರೂ ಅಪಾಯಕಾರಿ ವಸ್ತುಗಳ ಬಳಸಲಾಗಿದೆಯಾ ಎಂಬ ಬಗ್ಗೆಯೂ ತನಿಖೆ ನಡೆಯಲಿದೆ ಎನ್ನಲಾಗಿದೆ. ವಿಟ್ಲ ಹೋಬಳಿ ಉಪತಹಸೀಲ್ದಾರ್ ನವೀನ್ ಕುಮಾರ್, ಕಂದಾಯ ನಿರೀಕ್ಷಕ ರವಿ ಎಂ. ಎಸ್. ಹಾಜರಿದ್ದರು.