ಜಿಲ್ಲೆ

ಬಿದ್ದಪ್ಪ ಮಾದಾಪುರ ಗ್ರಾ.ಪಂ. ಅಧ್ಯಕ್ಷ

ಸುನಿಲ್ ಪೊನ್ನೇಟಿ

ಮಡಿಕೇರಿ:

ಮಾದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಬಿದ್ದಪ್ಪ ಮತ್ತು ಉಪಾಧ್ಯಕ್ಷರಾಗಿ ವಿ. ಆರ್. ಸುರೇಶ್ ಅವಿರೋಧವಾಗಿ ಆಯ್ಕೆಯಾದರು. ಗುರುವಾರ ನಡೆದ ಚುನಾವಣಾ ಪ್ರಕ್ರಿಯೆ ವೇಳೆ ಈ ಆಯ್ಕೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಮೂರು ನಾಮಪತ್ರಗಳು ಕ್ರಮಬದ್ಧವಾಗಿ ಸ್ವೀಕೃತವಾಗಿದ್ದವು.

ಅಂತಿಮ ಕ್ಷಣದಲ್ಲಿ ಎರಡು ನಾಮಪತ್ರಗಳನ್ನು ಹಿಂಪಡೆದದ್ದರಿಂದ ಮತದಾನವಿಲ್ಲದೆ ಆಯ್ಕೆ ಪ್ರಕ್ರಿಯೆ ಸುಸೂತ್ರವಾಗಿ ನಡೆಯಿತು.
ಸೋಮವಾರಪೇಟೆ ತಹಸೀಲ್ದಾರ್ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಪಿಡಿಒ ಸುಮೇಶ್, ಸಿಬ್ಬಂದಿ ಇದ್ದರು.