ನೆಲಮಂಗಲದಲ್ಲಿ ಮದಕರಿ ನಾಯಕರ ಜಯಂತಿಯನ್ನು ಶಾಸಕ ಎನ್​.ಶ್ರೀನಿವಾಸ್​ ಉದ್ಘಾಟಿಸಿದರು. ನಗರಸಭೆ ಅಧ್ಯಕ್ಷ ಎನ್​.ಗಣೇಶ್​, ಉಪಾಧ್ಯಕ್ಷ ಜಿ.ಆನಂದ್​, ಸದಸ್ಯ ಸಿ.ಪ್ರದಿಪ್​, ನೆ.ಯೋ.ಪ್ರಾಧಿಕಾರ ಅಧ್ಯಕ್ಷ ನಾಗರಾಜು, ಪುರಸಭೆ ಮಾಜಿ ಸದಸ್ಯ ನಾಗರಾಜು, ಸುಬ್ರಹ್ಮಣಿ, ಮುಖಂಡ ಚಿಕ್ಕಣ್ಣ, ಚಿಕ್ಕಹನುಮೇಗೌಡ, ಮಾರುತಿ ಇದ್ದರು. 
ಜಿಲ್ಲೆ

ಶೌರ್ಯಕ್ಕೆ ಮತ್ತೊಂದು ಹೆಸರೇ ಮದಕರಿ

ನೆಲಮಂಗಲ: ಚಿತ್ರದುರ್ಗದ ಮದಕರಿ ನಾಯಕರ ಶೌರ್ಯ, ಸಾಹಸ, ಪರಾಕ್ರಮ ಸಮಾಜಕ್ಕೆ ಮಾದರಿಯಾಗಿದೆ ಎಂದು ಶಾಸಕ ಎನ್​.ಶ್ರೀನಿವಾಸ್​ ತಿಳಿಸಿದರು. ನಗರದ ಅಂಬೇಡ್ಕರ್​ ಭವನದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜನ ಜಾಗೃತಿ ವೇದಿಕೆ ಹಾಗೂ ರಾಜ್ಯ ವಾಲ್ಮೀಕಿ ನಾಯಕರ ಹಿತರಕ್ಷಣಾ ಟ್ರಸ್ಟ್​ನಿಂದ ಅಯೋಜಿಸಿದ್ದ 283ನೇ ವೀರ ಮದಕರಿ ನಾಯಕರ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು. ಏಳು ಸುತ್ತಿನ ಕೋಟೆ ಆಳಿದ ಸ್ವಾಭಿಮಾನಿ, ಸಾಹಸಿ, ನಿರ್ಭೀತ ನಡೆಯ ಮದಕರಿ ನಾಯಕರು ಚಿತ್ರದುರ್ಗದ ಸ್ವಾಭಿಮಾನದ ಸಂಕೇತವಾಗಿದ್ದಾರೆ. ತಮ್ಮ ಆಡಳಿತ ಅವಧಿಯಲ್ಲಿ ಸಂಸ್ಥಾನವನ್ನು ಬಲಪಡಿಸುವಲ್ಲಿ, ರಾಜ್ಯವನ್ನು ಸುಭಿಕ್ಷೆಯಿಂದ ಇಟ್ಟುಕೊಳ್ಳಲು ವಿಭಿನ್ನ ಯೋಜನೆಗಳನ್ನು ರೂಪಿಸಿದ್ದರು ಎಂದರು.

ವಾಲ್ಮೀಕಿ ಭವನ ನಿಮಾರ್ಣ ಮಾಡಿದ್ದು, ಅದಷ್ಟು ಬೇಗ ಉದ್ಘಾಟಿಸಲಾಗುವುದು ಎಂದು ತಿಳಿಸಿದರು. ನಗರಸಭೆ ಅಧ್ಯಕ್ಷ ಎನ್​.ಗಣೇಶ್​ ಮಾತನಾಡಿ, ಮದಕರಿ ನಾಯಕ ತನ್ನ ಆಳ್ವಿಕೆಯಲ್ಲಿ ಕೈಗೊಂಡ ಹಲವು ರ್ನಿಣಯಗಳು ಚಿತ್ರದುರ್ಗ ಸಂಸ್ಥಾನದ ಕೀರ್ತಿಯನ್ನು ದಕ್ಷಿಣ ಭಾರತದಲ್ಲಿ ಹರಡಲು ಕಾರಣವಾಯಿತು ಎಂದು ಹೇಳಿದರು.