ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಆಯ್ಕೆಯಾದ ನೂತನ ನಿರ್ದೇಶಕರನ್ನು ಮುಖಂಡರು ಅಭಿನಂದಿಸಿದರು. ರಾಜಪ್ಪ, ಗಂಗಾಧರ, ನಾಗಮಲ್ಲಪ್ಪ, ಪ್ರತಾಪ್, ಬಸವಣ್ಣ, ಮಲ್ಲು, ಮಹದೇವಪ್ಪ, ಕೃಷ್ಣ, ದೊಡ್ಡಮ್ಮ, ಲಕ್ಷ್ಮಮ್ಮ ಇತರರು ಇದ್ದರು.  
ಜಿಲ್ಲೆ

ಮಡಹಳ್ಳಿ ಡೇರಿ ಬಿಜೆಪಿ ಬೆಂಬಲಿತರ ಪಾಲು

ಗುಂಡ್ಲುಪೇಟೆ: ತಾಲೂಕಿನ ಮಡಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ 11 ಸ್ಥಾನಗಳೂ ಬಿಜೆಪಿ ಬೆಂಬಲಿತರ ಪಾಲಾಯಿತು.

ಡೇರಿ ಆವರಣದಲ್ಲಿ ಶನಿವಾರ ಚುನಾವಣೆ ಪ್ರಕ್ರಿಯೆ ನಡೆಯಿತು. ನಿರ್ದೇಶಕರಾಗಿ ರಾಜಪ್ಪ, ಗಂಗಾಧರ, ನಾಗಮಲ್ಲಪ್ಪ, ಪ್ರತಾಪ್, ಬಸವಣ್ಣ, ಮಲ್ಲು, ಮಹದೇವಪ್ಪ, ಕೃಷ್ಣ, ದೊಡ್ಡಮ್ಮ, ಲಕ್ಷ್ಮಮ್ಮ, ಸಿದ್ದಬಸವಯ್ಯ ಆಯ್ಕೆಯಾದರು. ಚುನಾವಣಾಧಿಕಾರಿ ಆಗಿ ಸಹಕಾರ ಇಲಾಖೆಯ ಸಿಬ್ಬಂದಿ ಕೀರ್ತಿರಾಜ್ ಕಾರ್ಯ ನಿರ್ವಹಿಸಿದರು.