ಕನಕಗಿರಿ ಸಮೀಪದ ಕಲಕೇರಿ ಗ್ರಾಮದಲ್ಲಿ ಸಾರ್ವಜನಿಕರಿಗೆ ಹುಚ್ಚು ನಾಯಿ ಕಚ್ಚಿರುವುದು. 
ಜಿಲ್ಲೆ

ಹುಚ್ಚು ನಾಯಿ ಕಡಿತ, ಆತಂಕಗೊಂಡ ಗ್ರಾಮಸ್ಥರು

ಕನಕಗಿರಿ: ಸಮೀಪದ ಕಲಕೇರಿ ಗ್ರಾಮದಲ್ಲಿ ಇಬ್ಬರು ಮಕ್ಕಳು ಸೇರಿ ನಾಲ್ವರನ್ನು ಹುಚ್ಚು ನಾಯಿ ಗುರುವಾರ ರಾತ್ರಿ ಕಚ್ಚಿ ಪರಾರಿಯಾಗಿದೆ. ಹುಚ್ಚು ನಾಯಿಯ ದಾಳಿಯಿಂದ ಆತಂಕಕ್ಕೊಳಗಾದ ಗ್ರಾಮಸ್ಥರು ನಾಯಿ ಹಿಡಿಯಲು ರಾತ್ರಿ ಇಡೀ ಜಾಗರಣೆ ಮಾಡಿದರು. ಆದರೂ ನಾಯಿ ಸಿಗದೆ ಇರುವ ಕಾರಣ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಗಾಯಾಳುಗಳು ಕನಕಗಿರಿ ಸಮುದಾಯ ಆರೋಗ್ಯಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಸಂಭಂಧ ಪಟ್ಟ ಇಲಾಖೆಯವರು ಪತ್ತೆ ಹಚ್ಚಿ ಗ್ರಾಮಸ್ಥರ ಆತಂಕ ದೂರ ಮಾಡಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.