ಜಿಲ್ಲೆ

ಮಾಚಿದೇವರ ಜಯಂತ್ಯುತ್ಸವ ಫೆ.೧ರಂದು

ರಮೇಶ ಮೇಳಕುಂದಾ

ಕಲಬುರಗಿ: ವಚನ ಸಾಹಿತ್ಯ ಸಂರಕ್ಷಕ, ಶಿವಶರಣ ಮಡಿವಾಳ ಮಾಚಿದೇವರ ಜಯಂತ್ಯುತ್ಸವವನ್ನು ಜಿಲ್ಲಾ ಮಡಿವಾಳ ಸಮಾಜದಿಂದ ಫೆ.೧ರಂದು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಸಮಾಜದ ಮುಖಂಡ ರುಕ್ಮಣ್ಣ ಮಡಿವಾಳ ತಿಳಿಸಿದರು. ಬೆಳಗ್ಗೆ ೧೦.೩೦ಕ್ಕೆ ಮಡಿವಾಳ ಮಾಚಿದೇವರ ವೃತ್ತದಿಂದ (ಹುಮನಾಬಾದ್ ರಿಂಗ್ ರಸ್ತೆ) ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದ ಬಳಿಯ ಕನ್ನಡ ಭವನದವರೆಗೆ ಮಾಚಿದೇವರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಸಲಾಗುವುದು. ವೇದಿಕೆ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಸಮಾಜದ ವಿದ್ಯಾರ್ಥಿಗಳು, ಕ್ರೀಡಾ ಸಾಧಕರು, ಸರ್ಕಾರಿ ನೌಕರರು, ಪದೋನ್ನತಿ ಪಡೆದ, ನಿವೃತ್ತ ಮತ್ತು ಹೊಸದಾಗಿ ನೇಮಕರಾದವರನ್ನು ಸನ್ಮಾನಿಸಲಾಗುವುದು. ರಾಷ್ಟçಮಟ್ಟದ ಕ್ರಿಕೆಟ್ ಆಟಗಾರ್ತಿ ಮಮತಾ ಮಡಿವಾಳ ಅವರನ್ನು ಸನ್ಮಾನಿಸಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಶೇ.೮೦ಕ್ಕಿಂತ ಹೆಚ್ಚು ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳು ಜ.೨೭ಕ್ಕೂ ಮುನ್ನ ಮೊ.೯೬೮೬೧೦೧೫೭೯, ೯೪೮೨೬ ೧೫೪೧೨ಗೆ ಕರೆ ಮಾಡಿ ಹೆಸರು ನೋಂದಣಿ ಮಾಡಬಹುದು ಎಂದರು. ಮುಖಂಡರಾದ ರವಿ ಶಹಾಪುರಕರ, ಬಾಬುರಾವ ಹಾಗರಗುಂಡಗಿ, ಚಂದ್ರಶೇಖರ ಮಡಿವಾಳ, ಗಂಗಾಧರ ಬಂಗರಗಿ, ಶ್ರೀಮಂತ ಮಡಿವಾಳ, ನಾಗೇಶ ತರನಲ್ಲಿ ಇದ್ದರು.

ಕಲಬುರಗಿ ಜಿಲ್ಲೆಯಲ್ಲಿ ೩೦ ಸಾವಿರಕ್ಕಿಂತ ಹೆಚ್ಚು ಸಮಾಜದ ಬಂಧುಗಳಿದ್ದು, ಪ್ರತಿ ವರ್ಷವೂ ಮಾಚಿದೇವರ ಜಯಂತ್ಯುತ್ಸವದಲ್ಲಿ ಜನಪ್ರತಿನಿಧಿ, ಅಧಿಕಾರಿಗಳು ಭಾಗವಹಿಸದೆ ಮೋಸ ಮಾಡುತ್ತಿದ್ದಾರೆ. ಪ್ರಸಕ್ತ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಸಣ್ಣ ಸಮುದಾಯಕ್ಕೆ ಶಕ್ತಿ ತುಂಬಬೇಕು. | ಬಾಬುರಾವ ಹಾಗರಗುಂಡಗಿ, ಮಡಿವಾಳ ಸಮಾಜದ ಮುಖಂಡ