ಎಚ್.ಡಿ.ಕೋಟೆ: ಹನ್ನೆರಡನೆ ಶತಮಾನದಲ್ಲಿ ಸ್ಥಾಪನೆಯಾದ ಅನುಭವ ಮಂಟಪದಲ್ಲಿ ಬಸವಣ್ಣನವರು ಶ್ರೇಷ್ಠ ವಚನಕಾರರಾಗಿ ಹೊರಹೊಮ್ಮಿದರೆ, ತಮ್ಮ ಅಪಾರವಾದ ಭಕ್ತಿಯಿಂದ ಶಿವನನ್ನೇ ಒಲಿಸಿಕೊಂಡವರು ಮಾಚಿದೇವ ಶರಣರು ಎಂದು ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಕ್ಯಾತನಹಳ್ಳಿ ನಾಗರಾಜು ಬಣ್ಣಿಸಿದರು.
ತಾಲೂಕಿನ ಕ್ಯಾತನಹಳ್ಳಿ ಗ್ರಾಮದಲ್ಲಿ ಸೋಮವಾರ ಮಡಿವಾಳ ಸಮುದಾಯದ ವತಿಯಿಂದ ಹಮ್ಮಿಕೊಂಡಿದ್ದ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಡಿವಾಳ ಮಾಚಿದೇವರು ಶ್ರೇಷ್ಠ ಶರಣರು. ಇವರ ವಚನಗಳು ಸಮಾಜದಲ್ಲಿರುವ ಅಂಕು ಡೊಂಕುಗಳನ್ನು ತಿದ್ದುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಮಾಚಿದೇವರು ವಚನಗಳು ಬರೆದು ಶ್ರೇಷ್ಠ ಶರಣರು ಎನಿಸಿದ್ದಾರೆ. ಇವರು ದುಷ್ಟರನ್ನು ಸಂಹಾರ ಮಾಡಿ ತಮ್ಮ ಕಾಯಕ ಮಡಿವಂತಿಕೆಯನ್ನು ಮಾಡಿ ಶ್ರೇಷ್ಠ ವ್ಯಕ್ತಿಯಾಗಿ ದೇವರನ್ನು ಕಂಡವರು ಎಂದು ತಿಳಿಸಿದರು.
ಮಡಿವಾಳ ಸಮಾಜದ ಮುಖಂಡ ಎಸ್.ಬೀರೇಶ್, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕೆ.ಪಿ ಚೆಲುವರಾಜು, ಗ್ರಾಮದ ಮುಖಂಡರಾದ ಎಸ್.ಬೀರೇಗೌಡ, ಎನ್. ವೆಂಕಟರಾಜು, ಎಸ್.ಶಿವರಾಜು ಮಾತನಾಡಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪ್ರಸನ್ನ ಕುಮಾರ್, ಮಾಜಿ ಅಧ್ಯಕ್ಷ ಕೆ.ಆರ್.ಬಸವರಾಜ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಕೆ.ಟಿ.ಕಮಲಾಕ್ಷ ಕೃಷ್ಣೇಗೌಡ, ರವಿಕುಮಾರ್, ರಾಮಚಂದ್ರ, ಮಾರಿಗುಡ್ಡಪ್ಪ, ಚಿಕ್ಕನಾಯಕ, ಶಿವಶಂಕರೇಗೌಡ, ಛೇರ್ಮನ್ ಮಹಾದೇವ, ಕುಮಾರ, ಕೃಷ್ಣ, ಆಟೋ ರವಿ, ಚೆಲುವರಾಜು, ಗೋವಿಂದೇಗೌಡ, ಮಡಿವಾಳ ಸಮಾಜದ ಅಧ್ಯಕ್ಷ ಜವರಶೆಟ್ಟಿ, ಮಹದೇವಶೆಟ್ಟಿ, ದೇವರಾಜಶೆಟ್ಟಿ, ಚಿಕ್ಕಸ್ವಾಮಿ, ಬಸವರಾಜಶೆಟ್ಟಿ, ಮಹದೇವ, ಕೆಂಡ, ಶ್ರೀಕಂಠ, ಶಿವಣ್ಣ, ಹೊನ್ನಯ್ಯ, ಕುಮಾರ್, ಭಾಗಮ್ಮ, ರಾಜಣ್ಣ, ಕಣಿಯರ್, ಜೈರಾಮ ಇದ್ದರು.