ಜಿಲ್ಲೆ

ಮಬನೂರ ಅಭಿವೃದ್ಧಿಗೆ ಅಗತ್ಯ ಕ್ರಮ

ಮುನವಳ್ಳಿ: ನರೇಗಾ ಯೋಜನೆಯಡಿ ಒಟ್ಟು 40 ಲಕ್ಷ ರೂ. ವೆಚ್ಚದಲ್ಲಿ ಸಂಜೀವಿನಿ ಶೆಡ್ (ಗ್ರಾಪಂ ಮೊದಲ ಮಹಡಿ)ನಿರ್ಮಿಸಲಾಗಿದೆ. ಮುಂಬರುವ ದಿನಗಳಲ್ಲಿ ಮಬನೂರ ಗ್ರಾಮಕ್ಕೆ ಹೆಚ್ಚಿನ ಅನುದಾನ ನೀಡಿ ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ವಿಶ್ವಾಸ ವೈದ್ಯ ಭರವಸೆ ನೀಡಿದರು.

ಸಮೀಪದ ಮಬನೂರ ಗ್ರಾಮದಲ್ಲಿ ಮಂಗಳವಾರ 2023-24ನೇ ಸಾಲಿನ ನರೇಗಾ ಯೋಜನೆಯಡಿ ನಿರ್ಮಿಸಿದ ಸಂಜೀವಿನಿ ಶೆಡ್ (ಗ್ರಾಪಂ ಮೊದಲ ಮಹಡಿ) ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಪಂ ಅಧ್ಯಕ್ಷೆ ನಿಂಗವ್ವ ಮೇಟಿ, ಜಿಪಂ ಮಾಜಿ ಸದಸ್ಯ ಕೀರಪ್ಪ ಹದ್ದನ್ನವರ, ಉಪಾಧ್ಯಕ್ಷೆ ಯಲ್ಲವ್ವ ತಳವಾರ, ಸದಸ್ಯರಾದ ಯಲ್ಲಪ್ಪ ನರಿ, ವಿಠ್ಠಲ ಅಗಸಿಮನಿ, ಮಹಾದೇವ ಪಟಾತ, ಪಡೆಪ್ಪ ನರಿ, ಬಸವ್ವ ಹಡಪದ, ಆರ್.ಕೆ.ಪಟಾತ, ಉದಯ ನರಿ, ಪಿಡಿಒ ಆರ್.ಎಸ್. ಚಿಪ್ಪಲಕಟ್ಟಿ, ಜಿ.ಕೆ.ಸುಂಕದ ಇತರರಿದ್ದರು.