ಜಿಲ್ಲೆ

ರಾಷ್ಟ್ರೀಯ ಕ್ರಿಯೇಟಿವ್​ ರೈಟಿಂಗ್​ನಲ್ಲಿ ಮಾನ್ವಿ ಪ್ರಥಮ

ಚಿಂತಾಮಣಿ: ಇತ್ತೀಚೆಗೆ ಅಮಹಮದ್​ಬಾದ್​ನಲ್ಲಿ ಹಮ್ಮಿಕೊಂಡಿದ ಐಸಿಎಸ್​ಸಿ ಶಾಲಾ ಮಟ್ಟದ ರಾಷ್ಟ್ರೀಯ ಕ್ರಿಯೇಟಿವ್​ ರೈಟಿಂಗ್​ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಚಿಂತಾಮಣಿ ನಗರದ ಹೊರವಲಯ ಜ್ಯೋತಿ ಆಂಗ್ಲ ಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ ಜೂನಿಯರ್​ ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆದು ರಾಜ್ಯ, ಜಿಲ್ಲೆ ಮತ್ತು ತಾಲೂಕಿಗೆ ಕೀರ್ತಿ ತಂದಿದ್ದಾರೆ.ಅ.10ರಂದು ಗುಜರಾತ್​ ರಾಜ್ಯದ ಅಮಹಮದ್​ ಬಾದ್​ನ ಜಾರ್ಜ ಹೆಸ್​ ಮೆಮೋರಿಯಲ್​ ನ್ಯಾಷನಲ್​ ಲಿಟರರಿ ಕಾಂಫಿಟೀಷನ್​ ಸ್ಪರ್ಧೆಗಳನ್ನು ಲಾಲ್​ಜಿ ಮೆಮೋರಿಯಲ್​ ಲಯನ್ಸ್​ ಶಾಲೆಯಲ್ಲಿ ಆಯೋಜನೆ ಮಾಡಿದ್ದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಾನ್ವಿ ಜೂನಿಯರ್​ ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ ಎಂದು ಶಾಲೆಯ ಪ್ರಾಂಶುಪಾಲ ವರ್ಕಿಯಾವಾಲಿದತ್​ ತಿಳಿಸಿದ್ದಾರೆ.