ನಾಪೋಕ್ಲು ಬಿಲ್ಲವ ಸಮಾಜದ ವತಿಯಿಂದ ಭಗವತಿ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಆಯೋಜಿಸಿದ್ದ ಶ್ರೀ ಬ್ರಹ್ಮರ್ಷಿ ನಾರಾಯಣ ಗುರು ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ವಿಜೇತ ಮುಖ್ಯಶಿಕ್ಷಕಿ ಎಂ.ವನಜಾ ಹಾಗೂ ಎನ್‌ಸಿಸಿ ನಿವೃತ್ತ ಅಧಿಕಾರಿ ಡಾ.ಗಣೇಶ್ ಅವರನ್ನು ಸನ್ಮಾನಿಸಲಾಯಿತು. 
ಜಿಲ್ಲೆ

ಎಂ.ವನಜಾ, ಡಾ.ಗಣೇಶ್‌ಗೆ ಸನ್ಮಾನ

ಮಾದೇಶ್ ತಿ.ನರಸೀಪುರ

ನಾಪೋಕ್ಲು: ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ವಿಜೇತೆ, ಹಾಕತ್ತೂರು ಪ್ರೌಢಶಾಲೆ ಮುಖ್ಯ ಶಿಕ್ಷಕಿ ಎಂ.ವನಜಾ ಹಾಗೂ ಎನ್‌ಸಿಸಿ ನಿವೃತ್ತ ಅಧಿಕಾರಿ ಡಾ.ಗಣೇಶ್ ಅವರನ್ನು ಬಿಲ್ಲವ ಸಮಾಜದಿಂದ ಸನ್ಮಾನಿಸಲಾಯಿತು.

ಇಲ್ಲಿನ ಭಗವತಿ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಬಿಲ್ಲವ ಸಮಾಜದ ಅಧ್ಯಕ್ಷ ಬಿ.ಎಂ.ಪ್ರತೀಪ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಶ್ರೀ ಬ್ರಹ್ಮರ್ಷಿ ನಾರಾಯಣ ಗುರು ಜಯಂತಿ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.

ಕೊಡಗು ಜಿಲ್ಲಾ ಬಿಲ್ಲವ ಸಮಾಜದ ಉಪಾಧ್ಯಕ್ಷ ವಿಠಲ ಪೂಜಾರಿ, ನಾಪೋಕ್ಲು ಬಿಲ್ಲವ ಸಮಾಜದ ಉಪಾಧ್ಯಕ್ಷ ಬಿ.ಆರ್.ವಸಂತ, ಜಗನಾಥ್ ಪಾಲೂರು ಹಾಗೂ ತಾಲೂಕು ಬಿಲ್ಲವ ಸಮಾಜದ ಮಾಜಿ ಅಧ್ಯಕ್ಷ ಎಲ್ಯಣ್ಣ ಪೂಜಾರಿ ಬೆಟ್ಟಗೇರಿ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ರೀನಾ ಜಗನ್ನಾಥ್, ಬಿಲ್ಲವ ಸಮಾಜದ ಕಾರ್ಯದರ್ಶಿ ಕೆ.ಎಸ್.ಲೋಹಿತ್, ಖಜಾಂಚಿ ದೀಪಕ್ ಬಿ ಡಿ, ಸಂಘಟನಾ ಕಾರ್ಯದರ್ಶಿ ಪ್ರಕಾಶ್ ಇತರರು ಇದ್ದರು.