ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ನಿಂದಿಸಿದ ಪೊಲೀಸ್ ಅಧಿಕಾರಿ ಎಂ. ಚಂದ್ರಶೇಖರ ಅಮಾನತಿಗೆ ಒತ್ತಾಯಿಸಿ ತೇರದಾಳದ ವಿಶೇಷ ತಹಸೀಲಾರ್ ಕಚೇರಿಯಲ್ಲಿ ತಾಲೂಕು ಜೆಡಿಎಸ್ ಮುಖಂಡರು, ಉಪತಹಸೀಲ್ದಾರ್ ಶ್ರೀಕಾಂತ ಮಾಯನ್ನವರಗೆ ಮನವಿ ಸಲ್ಲಿಸಿದರು. ಬುಜಬಲಿ ಕೆಂಗಾಲಿ, ಬಾಬಸಿ ದೇಸಾಯಿ, ಶಂಕರ ಕಬಾಡಗಿ ಇದ್ದರು. 
ಜಿಲ್ಲೆ

ಎಂ. ಚಂದ್ರಶೇಖರ ಅವರನ್ನು ಅಮಾನತುಗೊಳಿಸಿ

ತೇರದಾಳ: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ನಿಂದಿಸಿದ ಪೊಲೀಸ್ ಅಧಿಕಾರಿ ಎಂ. ಚಂದ್ರಶೇಖರ ಅವರನ್ನು ಕೂಡಲೇ ಸೇವೆಯಿಂದ ಅಮಾನತು ಮಾಡಬೇಕೆಂದು ಆಗ್ರಹಿಸಿ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ಬರೆದ ಮನವಿ ಪತ್ರವನ್ನು ತಾಲೂಕು ಜೆಡಿಎಸ್ ಮುಖಂಡರು ತಹಸೀಲ್ದಾರರಿಗೆ ಶುಕ್ರವಾರ ಅರ್ಪಿಸಿದರು.

ಜೆಡಿಎಸ್ ತಾಲೂಕು ಅಧ್ಯಕ್ಷ ಬುಜಬಲಿ ಕೆಂಗಾಲಿ ಹಾಗೂ ಮುಖಂಡರು, ಮಾಜಿ ಮುಖ್ಯಮಂತ್ರಿಗಳು, ಈಗಿನ ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಅವಾಚ್ಯ, ಅಸಭ್ಯ ಮತ್ತು ಅವಹೇಳನಕಾರಿ ಪದ ಬಳಸಿದ್ದಲ್ಲದೆ, ಆ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಬಿಟ್ಟಿದ್ದಾರೆ. ಆದ್ದರಿಂದ ಕುಮಾರಸ್ವಾಮಿಗಳ ವ್ಯಕ್ತಿತ್ವಕ್ಕೆ ಧಕ್ಕೆ ತಂದ ಚಂದ್ರಶೇಖರ ಅವರನ್ನು ಕೂಡಲೇ ಅಮನತುಗೊಳಿಸಬೇಕಲ್ಲದೆ, ಅವರ ವಿರುದ್ಧ ಉನ್ನತ ಮಟ್ಟದ ತನಿಖೆಗೆ ಕೇಂದ್ರ ಗೃಹ ಮಂತ್ರಾಲಯಕ್ಕೆ ಸೂಕ್ತ ಶಿಫಾರಸಿನೊಂದಿಗೆ ಕಳುಹಿಸಬೇಕೆಂದು ಆಗ್ರಹಿಸಿದರು.

ಉಪತಹಸೀಲ್ದಾರ್ ಶ್ರೀಕಾಂತ ಮಾಯನ್ನವರ ಮನವಿ ಸ್ವೀಕರಿಸಿದರು. ಬಾಬಸಿ ದೇಸಾಯಿ, ಶಂಕರ ಕಬಾಡಗಿ, ಸತ್ಯಪ್ಪ ಮಹೇಶವಾಡಗಿ, ಚಿಕ್ಕಪ್ಪ ಲೋಹಾರ, ಅವ್ವಪ್ಪ ನೀಲನ್ನವರ, ಈರಪ್ಪ ಹಂದಿಗುಂದ, ಸಿದ್ಧಪ್ಪ ಹುದ್ದಾರ, ಬಸು ಲಕ್ಕಪ್ಪಗೋಳ, ಅಪ್ಪು ಶಿಲೇದಾರ, ಬಾಪು ಗಾಡಿವಡ್ಡರ, ಬಸಪ್ಪ ನಿಂಬಿಕಾಯಿ, ಶಿವಾನಂದ ಖವಾಸಿ ಇತರರಿದ್ದರು.