ಸಿರಿಗೇರಿ: ಸಾರಿಗೆ ಸೌಲಭ್ಯ ಕಲ್ಪಿಸಲು ಆಗ್ರಹಿಸಿ ವಿದ್ಯಾರ್ಥಿಗಳು ಎಂ.ಸೂಗೂರುನಲ್ಲಿ ಬಸ್ ತಡೆದು ಶುಕ್ರವಾರ ಪ್ರತಿಭಟನೆ ನಡೆಸಿದರು.
ಗ್ರಾಮದಲ್ಲಿ ಸಮರ್ಪಕವಾದ ಬಸ್ ಸೌಕರ್ಯವಿಲ್ಲದೇ ವಿದ್ಯಾರ್ಥಿಗಳು ತೊಂದರೆ ಪಡುವಂತಾಗಿದೆ. ಬೆಳಗ್ಗೆ 8.30ಕ್ಕೆ ಬರಬೇಕಾದ ಬಸ್ 10.30ಕ್ಕೆ ಬರುತ್ತಿದೆ. ಇದರಿಂದ ತರಗತಿಗೆ ನಿಗದಿತ ಸಮಯದಲ್ಲಿ ತೆರಳಲು ಸಮಸ್ಯೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಕರಿಬೇವಿನ ಚಹಾದ ಬಗ್ಗೆ ನಿಮಗೆ ಗೊತ್ತಾ?; ಪ್ರತಿದಿನ ಒಂದು ಕಪ್ ಕುಡಿಯಿರಿ..ಅನಾರೋಗ್ಯ ಸಮಸ್ಯೆಗಳಿಗೆ ಇದೊಂದು ಮದ್ದು
ಕಂಪ್ಲಿ, ಗಂಗಾವತಿ, ಹೊಸಪೇಟೆಗೆ ತೆರಳಲುವ ವಿದ್ಯಾರ್ಥಿಗಳು ಸಾರಿಗೆ ಸಮಸ್ಯೆಯಿಂದ ಪರದಾಡುವಂತಹ ಸ್ಥಿತಿ ಬಂದಿದೆ. ಬೆಳಗ್ಗೆ ನಿಗದಿತ ಸಮಯದಲ್ಲಿ ಬಸ್ ಸೌಕರ್ಯ ಕಲ್ಪಿಸಬೇಕು. ಇಲ್ಲದಿದ್ದರೆ ಹೋರಾಟ ಮುಂದುವರಿಸಲಾಗುವುದು ಎಂದು ವಿದ್ಯಾರ್ಥಿಗಳು ಎಚ್ಚರಿಸಿದರು.