ವಿರಾಜಪೇಟೆ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅತಿಥಿ ಉಪನ್ಯಾಸಕರ ಸಂಘದ ವತಿಯಿಂದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಅವರನ್ನು ಗುರುವಾರ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಟಿ.ಎಲ್.ತ್ಯಾಗರಾಜು ಮಾತನಾಡಿ, ವಿವಿಧ ಬೇಡಿಕೆಗಳ ಈಡೇರಿಕೆಗಾಗಿ 43 ದಿನಗಳ ರಾಜ್ಯ ವ್ಯಾಪಿ ಪ್ರತಿಭಟನೆ ನಡೆಸುತ್ತಿದ್ದ ಅತಿಥಿ ಉಪನ್ಯಾಸಕರ ಸಮಸ್ಯೆಯನ್ನು ಎ.ಎಸ್.ಪೊನ್ನಣ್ಣ ಅವರು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದು, ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದರು. ಎಂ.ಫಿಲ್ ಮುಗಿಸಿದವರು ಸಹ ಯುಜಿಸಿ ಮಾನದಂಡಕ್ಕೆ ಅರ್ಹರಾಗಿದ್ದು, ಅವರನ್ನು ನೆಟ್ ಮತ್ತು ಸ್ಲೆಟ್ ಪರೀಕ್ಷೆಗೆ ಸಮಾನರೆಂದು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಪೊನ್ನಣ್ಣ ಮಾತನಾಡಿ, ನಿಮ್ಮ ಎಲ್ಲ ಬೇಡಿಕೆಗಳ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು. ಕಾಲೇಜಿನ ಅತಿಥಿ ಉಪನ್ಯಾಸಕರಾದ ಡಾ. ಪ್ರಭು, ಎಂ.ಎನ್. ಮೋಹನ್‌ಕುಮಾರ್, ಕೆ.ಎಸ್. ಕಾರ್ಯಪ್ಪ, ಸುಮಯ್ಯ ತಬಸುಮ್, ಧನ್ಯಾ, ದರ್ಶಿನಿ ದೇವಯ್ಯ, ರೂಪಾ, ಗೀತಾ, ವೀಣಾ, ಬೊಳ್ಳಮ್ಮ ಇದ್ದರು.