ಜಿಲ್ಲೆ

ಕ್ಯಾದಿಗೆರೆ ಬಳಿ ಜಯಣ್ಣ ಸ್ಮಾರಕ

reporterctd

ಚಿತ್ರದುರ್ಗ : ಬರದ ನಾಡಿನ ಭಗಿರಥ,ದಲಿತ ಹೋರಾಟಗಾರ ಎಂ.ಜಯಣ್ಣಗೆ ಅವರ ಅಭಿಮಾನಿಗಳು ಮಂಗಳವಾರ ನಗರದಲ್ಲಿ ಅಂತಿಮ ನಮನ ಸಲ್ಲಿಸಿದರು. ಈ ವೇಳೆ ಜೈ ಜಯಣ್ಣ, ಜಯಣ್ಣ ಅಮರ್ ರಹೇ, ಚಿತ್ರದುರ್ಗದ ಅಂಬೇಡ್ಕರ್,ಎಂ.ಜಯಣ್ಣ ಅಲ್ಲ ,ನಮ್ಮ ಜಯಣ್ಣ ಎಂಬಿತ್ಯಾದಿ ಘೋಷಣೆಗಳು ಮುಗಿಲು ಮುಟ್ಟಿದವು.

ಜಯಣ್ಣ ನಿವಾಸದಿಂದ ಅವರ ಪಾರ್ಥಿವ ಶರೀರವನ್ನು ಒನಕೆ ಓಬವ್ವ ವೃತ್ತಕ್ಕೆ ಮಧ್ಯಾಹ್ಹ 12.45ರ ಹೊತ್ತಿಗೆ ತಂದಾಗ,ನಾಡಿನಾದ್ಯಂತ ಬಂದಿದ್ದ ಸಹಸ್ರ ಸಂಖ್ಯೆ ಜನರು ಅಂತಿಮ ಗೌರವ ಸಲ್ಲಿಸಿದರು. ನಗರದ ಕೆಎಚ್‌ಬಿ ಕಾಲನಿಯ ಅವರ ನಿವಾಸಕ್ಕೆ ಪಾರ್ಥಿವ ಶರೀರ ತಂದಾದ ಬಳಿಕ, ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾ ಮೀಜಿ,ಶ್ರೀ ಮಾರ್ಕೆಂಡಯ್ಯ ಮುನಿ ಸ್ವಾಮೀಜಿ ಅಂತಿಮ ದರ್ಶನ ಪಡೆದರು.

ನುಡಿ-ನಮನ : ಓಬವ್ವ ವೃತ್ತದಲ್ಲಿ ನುಡಿ-ನಮನ ಸಲ್ಲಿಸಿದ ಅನೇಕ ಪ್ರಮುಖರು,ಜಯಣ್ಣರ ನಿಸ್ವಾರ್ಥ ಹೋರಾಟವನ್ನು ಸ್ಮರಿಸಿದರು. ಜಿಲ್ಲೆಗೆ ಸೀಮಿತ ರಾಗಿದ್ದ ನಾಯಕನಲ್ಲ,ಇಡೀ ರಾಜ್ಯದ ನಾಯಕನಾಗಿ ದಲಿತರು,ಶೋಷಿತರು,ರೈತರು,ಬಡವರ ಪರ ಅನೇಕ ಹೋರಾಟ ಮಾಡಿದ್ದಾರೆ. ತಾವು ನಂಬಿದ್ದ ಸಿದ್ಧಾಂತಗಳಾಚೆ ಎಂದಿಗೂ ಯೋಚಿಸಲಿಲ್ಲವೆಂದರು.

ಶ್ರೀ ಬಸವನಾಗಿದೇವ ಸ್ವಾಮೀಜಿ,ಹರಳಯ್ಯ ಶ್ರೀಗಳು,ಸಂಸದರಾದ ಎ.ನಾರಾಯಣ ಸ್ವಾಮಿ,ಎಲ್.ಹನುಮಂತಯ್ಯ,ಮಾಜಿ ಸಚಿವ ಆಂಜನೇಯ,ಶಾಸಕರಾದ ಟಿ.ರಘುಮೂರ್ತಿ,ಜಿ.ಎಚ್.ತಿಪ್ಪಾರೆಡ್ಡಿ,ಮಾಜಿ ಶಾಸಕರಾದ ಎಸ್.ಕೆ. ಬಸವರಾಜನ್,ತಿಮ್ಮರಾಯಪ್ಪ, ತಹ ಸೀಲ್ದಾರ್ ಜೆ.ಸಿ.ವೆಂಕಟೇಶಯ್ಯ ನಾನಾ ತಾಲೂಕು,ಇತರೆ ಜಿಲ್ಲೆ ಗಳಿಂದ ಆಗಮಿಸಿದ್ದ ದಲಿತ ಹಾಗೂ ಇತರೆ ಸಂಘಟನೆಗಳು ಪ್ರಮುಖರು, ವಿವಿಧ ಪಕ್ಷಗಳು ನಾಯಕರು,ಕಾರ‌್ಯಕರ್ತರು, ಅಭಿಮಾನಿಗಳು,ಕುಟುಂಬ ವರ್ಗದವರು,ಬಂಧುಗಳು ಇದ್ದರು. ಅಂತಿಮ ಸಂಸ್ಕಾರದ ಸ್ಥಳ ನಿಗದಿ ಬಳಿಕ ಪಾರ್ಥಿವ ಶರೀರವನ್ನು ಕ್ಯಾದಿಗೆರೆಗೆ ಒಯ್ಯಲಾಯಿತು.

ಜಯಣ್ಣರ ಅಂತಿಮ ಸಂಸ್ಕಾರವನ್ನು ನಗರದ ಅಗಸನಕಲ್ಲಿನಲ್ಲಿ ನೆರವೇರಿಸಲು ಕುಟುಂಬ ವರ್ಗದವರು ನಿರ್ಧರಿಸಿದ್ದರು. ಆದರೆ ಆಂಜನೇಯ ಮತ್ತಿತರರು ಮಧ್ಯೆ ಪ್ರವೇಶಿಸಿ,ಜಯಣ್ಣ ನಾಡಿಗೂ ಸೇರಿದವರು. ಅವರ ಅಂತಿಮ ಸಂಸ್ಕಾರ ಸ್ಥಳ ಸ್ಮಾರಕವಾಗ ಬೇಕಿದೆ. ಅದಕ್ಕಾಗಿ ಬೇರೊಂದು ಸ್ಥಳ ನಿಗದಿ ಪಡಿಸೋಣವೆಂದು ಹೇಳಿ ಒಪ್ಪಿಸಿದರು.

ನಾರಾಯಣ ಸ್ವಾಮಿ,ತಿಪ್ಪಾರೆಡ್ಡಿ,ಆಂಜನೇಯ ಮತ್ತಿತರರು ಕ್ಯಾದಿಗೆರೆ ಬಳಿ ಖರೀದಿ 2 ಎಕರೆ ಜಮೀನು ಖರೀದಿಸಿ ಅಲ್ಲಿ ಜಯಣ್ಣರ ಅಂತಿಮ ಸಂಸ್ಕಾರವನ್ನು ನಡೆಸಯಲು ತೀರ್ಮಾನಿಸಲಾಯಿತು. ಇದಕ್ಕಾಗಿ ಆಂಜನೇಯ ಹಾಗೂ ಸಂಸದ ಎ.ನಾರಾಯಣ ಸ್ವಾಮಿ ತಲಾ ಒಂದೊಂದು ಎಕರೆ ಭೂಮಿ ಖರೀದಿಸಿ ಕೊಡುವುದಾಗಿ ಪ್ರಕಟಿಸಿದರು. ತಿಪ್ಪಾರೆಡ್ಡಿ ಸ್ಮಾರಕವನ್ನು ಅಭಿವೃದ್ಧಿ ಪಡಿಸುವುದಾಗಿ ತಿಳಿಸಿದರು.