ಜಿಲ್ಲೆ

ಸೆ. 22 ರಂದು ಎಂ. ಜಿ. ಹೆಗಡೆಯವರ ಆತ್ಮಕಥೆ 'ಚಿಮಣಿ ಬೆಳಕಿನಿಂದ' ಬಿಡುಗಡೆ

Mangaluru - Prakash MC Manjeshwar

ಮಂಗಳೂರು: ಶಿವಮೊಗ್ಗದ ಅಹರ್ನಿಶಿ ಪ್ರಕಾಶನವು ಪ್ರಕಟಿಸಿದ ಲೇಖಕ, ಅಂಕಣಕಾರ ಎಂ.ಜಿ. ಹೆಗಡೆಯವರ ಆತ್ಮಕಥೆ 'ಚಿಮಣಿ ಬೆಳಕಿನಿಂದ' ಸೆಪ್ಟಂಬರ್ 22 ರಂದು ಸಂಜೆ 4 ಕ್ಕೆ ಮಂಗಳೂರು ಕುದ್ಮುಲ್ ರಂಗರಾವ್ ಪುರಭವನದಲ್ಲಿ ಬಿಡುಗಡೆಯಾಗಲಿದೆ.

ವಿಧಾನ ಪರಿಷತ್ ಸದಸ್ಯರಾದ ಶ್ರೀ ಬಿ.ಕೆ.ಹರಿಪ್ರಸಾದ್ ಅವರು ಕಾರ್ಯಕ್ರಮದ ಉದ್ಘಾಟನೆ ನಡೆಸಿ ಪುಸ್ತಕ ಬಿಡುಗಡೆ ಮಾಡಲಿರುವರು. ಗಾಂಧಿ ವಿಚಾರ ವೇದಿಕೆಯ ಅಧ್ಯಕ್ಷ ಶ್ರೀಧರ ಭಿಡೆಯವರು ಅಧ್ಯಕ್ಷತೆ ವಹಿಸುವರು. ಹಿರಿಯ ಲೇಖಕಿ ಭುವನೇಶ್ವರಿ ಹೆಗಡೆ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಚಿಂತಕ ಅರವಿಂದ ಚೊಕ್ಕಾಡಿಯವರು ಪುಸ್ತಕ ಪರಿಚಯ ಮಾಡಲಿದ್ದಾರೆ. ಸಭಾ ಕಾರ್ಯಕ್ರಮಕ್ಕಿಂತ ಮೊದಲು ಭಾನುಮತಿ ಹೆಗಡೆ, ಸಹನಾ ಭಟ್, ಹುಸೇನ್ ಕಾಟಿಪಳ್ಳ ಅವರಿಂದ ಎಂ.ಜಿ.ಹೆಗಡೆಯವರು ರಚಿಸಿದ ಭಾವಗೀತೆಗಳ ಗಾಯನ ಇರುತ್ತದೆ.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್, ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಉಮರ್ ಯು.ಎಚ್, ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸ್ಪ್ಯಾನಿ ಜೋಕಿಂ, ವಿಶ್ವವಿದ್ಯಾನಿಲಯ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಉದಯ ಕುಮಾರ್ ಇರ್ವತ್ತೂರು, ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಉಪ ಕುಲಸಚಿವ ಡಾ. ಪ್ರಭಾಕರ ನೀರುಮಾರ್ಗ, ಸಿ.ಐ.ಎಲ್.ನ ನಿರ್ದೇಶಕ ನಂದಗೋಪಾಲ, ಪುಸ್ತಕದ ಪ್ರಕಾಶಕರಾದ ಅಕ್ಷತಾ ಹುಂಚದಕಟ್ಟೆ, ನಾಗವೇಣಿ, ಸೀತಾರಾಮ ಹೆಗಡೆ, ಪ್ರಪ್ರಭಾಕರ ಹೆಗಡೆ ಹಸಲ್ಮನೆ, ಲಾತವ್ಯ ಆಚಾರ್ಯ, ಲಕ್ಷ್ಮೀ ಹೆಗಡೆ, ಕುಮಾರ ಗಹನ ಹೆಗಡೆ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ