ಜಿಲ್ಲೆ

ಕೈದಿಗಳ ಐಷಾರಾಮಿ ಪೋಟೋ ವೈರಲ್

ಬಳ್ಳಾರಿ ; ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ಕೈದಿಗಳು ಐಷಾರಾಮಿ ಜೀವನ ನಡೆಸುತ್ತಿರುವ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಬುಧವಾರ ವೈರಲ್‌ಯಾಗಿವೆ.

ಜೈಲಿನಲ್ಲಿ ಗಾಂಜಾ, ಮಾಂಸಹಾರಿ ಅಡುಗೆ ತಯಾರಿಕೆ, ಮೊಬೈಲ್ ಬಳಕೆಯ ಫೋಟೊಗಳನ್ನು ಜಾಲತಾಣದಲ್ಲಿ ಹರಿಬಿಟ್ಟು ಜೈಲು ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಬೆದರಿಸುವ ಯತ್ನ ಕೈದಿಗಳಿಂದ ನಡೆದಿದೆ ಎನ್ನಲಾಗಿದೆ. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಫೋಟೋಗಳಲ್ಲಿನ ಕೈದಿಗಳು ಜೈಲಿನಿಂದ ಬಿಡುಗಡೆಗೊಂಡು ಹಲವು ತಿಂಗಳೇ ಕಳೆದಿವೆ. ಶಿವಮೊಗ್ಗದ ಹಿಂದು ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ಆರೋಪಿಗಳು ಹಳೆಯ ಫೋಟೋಗಳನ್ನು ಹರಿಬಿಟ್ಟು ಈ ಜೈಲಿಂದ ಶಿವಮೊಗ್ಗ ಜೈಲಿಗೆ ವರ್ಗಾವಣೆಯಾಗಬೇಕು ಎಂಬ ಉದ್ದೇಶದಿಂದ ವಿನ ಕಾರಣ ತೊಂದರೆ ಮಾಡುತ್ತಿದ್ದಾರೆ ಎಂದು ಅಧಿಕಾರಿ ತಿಳಿಸಿದರು. ಕಳೆದ ಕೆಲ ತಿಂಗಳ ಹಿಂದಯೇ ಜೈಲು ಸಿಬ್ಬಂದಿಗೆ ಅವ್ಯಾಚ ಶಬ್ಧ ಹಾಗೂ ಜಗಳ ಮಾಡಿಕೊಂಡಿರುವ ವಿಡಿಯೋಗಳನ್ನು ಹರಿಬಿಟ್ಟಿದ್ದರು. ಈಗ ಜೈಲಿನಿಂದ ಬಿಡುಗಡೆಗೊಂಡ ಕೈದಿಗಳ ವಿವಿಧ ಫೋಟೋಗಳನ್ನು ಹರಿಬಿಟ್ಟು ಜೈಲು ಸಿಬ್ಬಂದಿಗೆ ಬೆದರಿಕೆಗೆ ಯತ್ನಿಸಿದ್ದಾರೆ.

ಕೋಟ್... ಸದ್ಯ ಹರಿಬಿಟ್ಟಿರುವ ಫೋಟೊದಲ್ಲಿ ಕಾಣಿಸಿಕೊಂಡಿರುವ ಕೈದಿಗಳು 2021- 22ರಲ್ಲಿ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ. ಶಿವಮೊಗ್ಗದ ಹಿಂದು ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ಆರೋಪಿಗಳು ಶಿವಮೊಗ್ಗ ಜೈಲಿಗೆ ವರ್ಗಾವಣೆಯಾಗಬೇಕು ಎಂಬ ಉದ್ದೇಶದಿಂದ ಇಂತಹ ಕಿಡಿಗೇಡಿ ಕೃತ್ಯ ಎಸಗಿದ್ದಾರೆ.

- ಲತಾ, ಅಧೀಕ್ಷಕಿ, ಜಿಲ್ಲಾ ಕೇಂದ್ರ ಕಾರಾಗೃಹ, ಬಳ್ಳಾರಿ.