ಜಿಲ್ಲೆ

ಚರ್ಮಗಂಟು ರೋಗಕ್ಕೆ ತುತ್ತಾದ ಹಸುವಿನ ಹಾಲು ಕುಡಿಯಬೇಡಿ

Haveri

ರಾಣೆಬೆನ್ನೂರ: ಜಾನುವಾರುಗಳಿಗೆ ಚರ್ಮಗಂಟು ರೋಗ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯ ಪಿಕೆಕೆ ಇನಿಷಿಯೇಟಿವ್ಸ್ ನೇತೃತ್ವದಲ್ಲಿ ಬೆಂಗಳೂರಿನ ಐಐಎಸ್‌ಸಿ (ಭಾರತೀಯ ವಿಜ್ಞಾನಿಗಳ ಸಂಸ್ಥೆ) ವಿಜ್ಞಾನಿಗಳ ತಂಡ ತಾಲೂಕಿನ ಅರೇಮಲ್ಲಾಪುರ ಸೇರಿ ವಿವಿಧ ಗ್ರಾಮಗಳಿಗೆ ಶುಕ್ರವಾರ ಭೇಟಿ ನೀಡಿ, ರೋಗ ಬಾಧಿತ ಎತ್ತುಗಳನ್ನು ಪರಿಶೀಲಿಸಿತು.
ಚರ್ಮಗಂಟು ರೋಗಕ್ಕೆ ತುತ್ತಾದ ಎತ್ತುಗಳನ್ನು ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಗುಣ ಮಾಡುವ ವಿಧಾನಗಳ ಕುರಿತು ರೈತರಿಗೆ ಸಲಹೆ ನೀಡಿದರು. ಸಂಸ್ಥೆಯ ವಿಜ್ಞಾನಿ ಡಾ. ಉತ್ಪಾಲ ಟಾಟು ಮಾತನಾಡಿ, ರೋಗಬಾಧಿತ ಹಸುವಿನ ಹಾಲನ್ನು ಮನಷ್ಯ ಸೇವಿಸಬಾರದು. ಜತೆಗೆ ಕರುಗಳಿಗೂ ಕುಡಿಸಬಾರದು. ಅದನ್ನು ನಾಶಪಡಿಸಬೇಕು ಎಂದು ಸಲಹೆ ನೀಡಿದರು.
ಚರ್ಮ ಗಂಟು ರೋಗ ಕಂಡು ಬಂದ ಎತ್ತುಗಳನ್ನು ಪ್ರತ್ಯೇಕವಾಗಿಟ್ಟು ಅವುಗಳ ರೋಗ ನಿರೋಧಕ ಶಕ್ತಿ ಕುಂದದಂತೆ ನೋಡಿಕೊಳ್ಳಬೇಕು. ಅದಕ್ಕೆ ಸಾಧ್ಯವಾದಷ್ಟು ಹುಲ್ಲು ತಿನಿಸಿ, ನೀರು ಕುಡಿಸಬೇಕು. ಜತೆಗೆ ಜ್ವರ, ನೋವು ಕಡಿಮೆಯಾಗುವ ಔಷಧಗಳನ್ನು ಸಕಾಲಕ್ಕೆ ಒದಗಿಸಬೇಕು ಎಂದು ರೈತರಿಗೆ ತಿಳಿ ಹೇಳಿದರು.