ಜಿಲ್ಲೆ

ಲೂಯಿ ಬ್ರೈಲ್ ಕೊಡುಗೆ ಅದ್ವಿತೀಯ: ಮನ್‌ಮುಲ್ ನಿರ್ದೇಶಕ ಯು.ಸಿ.ಶಿವಕುಮಾರ್ ಶ್ಲಾಘನೆ

reportermys

ಮಂಡ್ಯ: ಅಂಧರಿಗೆ ಶಿಕ್ಷಣ ಕಲಿಯಲು ಲಿಪಿ ಸ್ಥಾಪಿಸಿದ ಲೂಯಿ ಬ್ರೈಲ್ ಕೊಡುಗೆ ಅದ್ವಿತೀಯ ಎಂದು ಮನ್‌ಮುಲ್ ನಿರ್ದೇಶಕ ಯು.ಸಿ.ಶಿವಕುಮಾರ್(ಶಿವಪ್ಪ) ಶ್ಲಾಘಿಸಿದರು.

ನಗರದ ಪಿಇಎಸ್ ಕಾಲೇಜಿನ ರಂಗಮಂದಿರದಲ್ಲಿ ಸ್ನೇಹ ಚಾರಿಟಬಲ್ ಟ್ರಸ್ಟ್ ಮಂಡ್ಯ ಮತ್ತು ಲೂಯಿ ಬ್ರೈಲ್ ಚಾರಿಟಬಲ್ ಟ್ರಸ್ಟ್ ಮೈಸೂರು ಸಹಯೋಗದಲ್ಲಿ ಆಯೋಜಿಸಿದ್ದ ಲೂಯಿ ಬ್ರೈಲ್ ದಿನಾಚರಣೆ ಮತ್ತು ಕನ್ನಡ ರಾಜ್ಯೋತ್ಸವ ಉದ್ಘಾಟಿಸಿ ಮಾತನಾಡಿದರು. ಎಲ್ಲ ಮಕ್ಕಳಂತೆ ಅಂಧರು ಶಿಕ್ಷಣ ಕಲಿಯಲು ಅನುಕೂಲವಾಗುವಂತೆ ಲಿಪಿಯನ್ನು ಕಂಡುಹಿಡಿಯುವ ಮೂಲಕ ಲೂಯಿ ಬ್ರೈಲ್ ಅವರು ದೊಡ್ಡ ಸಾಧನೆ ಮಾಡಿದ್ದಾರೆ. ಅಂತಹವರ ಜನ್ಮದಿನವನ್ನು ಆಚರಿಸಿ ಸಾಧಕರನ್ನು ಸನ್ಮಾನಿಸುವುದು ಶ್ಲಾಘನೀಯ ಎಂದು ನುಡಿದರು.

ಸ್ನೇಹ ಚಾರಿಟಬಲ್ ಟ್ರಸ್ಟ್‌ನ ಟ್ರಸ್ಟಿ ಸಿ.ವೆಂಕಟರಾಮು ಮಾತನಾಡಿ, ಬ್ರೈಲ್ ಎಂಬುದು ವಿವಿಧ ವರ್ಣಮಾಲೆ ಮತ್ತು ಸಂಖ್ಯಾತ್ಮಕ ಚಿಹ್ನೆಗಳನ್ನು ಪ್ರತಿನಿಧಿಸಲು ಆರು ಚುಕ್ಕೆಗಳೊಂದಿಗೆ ಬರೆಯಲ್ಪಟ್ಟ ಭಾಷೆ. ಈ ಆರು ಚುಕ್ಕೆಗಳನ್ನು ಸಂಗೀತ ಟಿಪ್ಪಣಿಗಳು ಮತ್ತು ಗಣಿತ ಮತ್ತು ವೈಜ್ಞಾನಿಕ ಚಿಹ್ನೆಗಳನ್ನು ಪ್ರತಿನಿಧಿಸಲು ಬಳಸಲಾಗುತ್ತದೆ ಎಂದರು.

ಟ್ರಸ್ಟ್‌ನ ಅಧ್ಯಕ್ಷ ಎನ್.ಎಸ್.ಮಂಜುನಾಥ್, ಉಪಾಧ್ಯಕ್ಷ ಕೆ.ಎಂ.ಪುಟ್ಟರಾಜು, ಖಜಾಂಚಿ ಮಹೇಶ್, ಅಖಂಡ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಸುಧೀರ್‌ಕುಮಾರ್, ಹೆಮ್ಮಿಗೆ ಚಂದ್ರಶೇಖರ್, ಕಾರ್ಮಿಕ ಮುಖಂಡ ಅಜಯ್‌ಕುಮಾರ್ ಇತರರಿದ್ದರು.

ಇದೇ ವೇಳೆ ವಿಕಲಚೇತನರ ಒಕ್ಕೂಟ ಅಧ್ಯಕ್ಷ ಎಂ.ಎಸ್.ಚಲುವರಾಜು, ವೀರಶೈವ ಅರ್ಚಕ ಪುರೋಹಿತರ ನಿಸ್ವಾರ್ಥ ಸೇವಾ ಸಂಘದ ಜಿಲ್ಲಾಧ್ಯಕ್ಷ ಜೆ.ಎಂ.ಕಲ್ಲೇಶ್‌ಕುಮಾರ್, ನಿವೃತ್ತ ಸಂಗೀತ ಶಿಕ್ಷಕ ಶಿವನಂಜು ಮತ್ತು ಸಮಾಜಸೇವಕ ಕೆ.ಜೆ.ಯೋಗೇಶ್ ಅವರನ್ನು ಸನ್ಮಾನಿಸಲಾಯಿತು.