ವಿಜಯವಾಣಿ ಸುದ್ದಿಜಾಲ ಧಾರವಾಡ
ಮಹಿಳಾ ಓದುಗರ ಜ್ಞಾನ ಹೆಚ್ಚಿಸುವ ಜತೆಗೆ ಸೀರೆಯನ್ನು ಬಹುಮಾನವಾಗಿ ನೀಡುವ `ನಾರಿ ನಿನಗೊಂದು ಸ್ಯಾರಿ' ಸ್ಪರ್ಧೆಯ ಲಕ್ಕಿ ವಿಜೇತರನ್ನು ನಗರದಲ್ಲಿ ಗುರುವಾರ ಆಯ್ಕೆ ಮಾಡಲಾಯಿತು.
ಕನ್ನಡದ ನಂಬರ್ ಒನ್ ದಿನಪತ್ರಿಕೆ `ವಿಜಯವಾಣಿ' ಹಮ್ಮಿಕೊಂಡಿದ್ದ `ನಾರಿ ನಿನಗೊಂದು ಸ್ಯಾರಿ' ಸ್ಪರ್ಧೆಯಲ್ಲಿ ಸಾವಿರಾರು ಮಹಿಳಾ ಓದುಗರ ಪಾಲ್ಗೊಂಡು ಉತ್ತರದ ಕೂಪನ್ ಅನ್ನು ವಿಜಯವಾಣಿ ಕಚೇರಿಗೆ ಕಳುಹಿಸಿದ್ದರು. ಈ ಪೈಕಿ ಸರಿಯುತ್ತರ ನೀಡಿದ ಧಾರವಾಡ- 71 (ಗ್ರಾಮೀಣ) ಹಾಗೂ ಹು- ಧಾ ಪಶ್ಚಿಮ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ತಲಾ ಐದರಂತೆ ಒಟ್ಟು 10 ವಿಜೇತರನ್ನು ಲಕ್ಕಿ ಡ್ರಾ ಮೂಲಕ ಆಯ್ಕೆ ಮಾಡಲಾಯಿತು.
ಕುಮಾರೇಶ್ವರನಗರ ಮಹಿಳಾ ಮಂಡಳದ ಜಯಶ್ರೀ ಎಸ್. ಪಾಟೀಲ, ಉಷಾ ಗದ್ದಗಿಮಠ, ಪ್ರೇಮಾ ನಡುವಿನಮನಿ, ಚೈತ್ರಾ ಸಂತಿ, ಮಟ್ಟಿ ಪ್ಲಾಟ್‌ನ ಸರಸ್ವತಿ ಜ್ಞಾನ ಮಹಿಳಾ ಮಂಡಳದ ನೇಹಾ ಬುದ್ನಿ, ಲಕ್ಷ್ಮೀ ಕೋಟೂರ, ವಿಜಯಲಕ್ಷ್ಮೀ ಆರ್. ಭೋಸಲೆ, ಇತರರು ಲಕ್ಕಿ ಡ್ರಾ ಮೂಲಕ ವಿಜೇತರನ್ನು ಆಯ್ಕೆ ಮಾಡಿದರು.
* ಹು-ಧಾ ಪಶ್ಚಿಮ ಕ್ಷೇತ್ರದ ವಿಜೇತರು: ಲಕ್ಷ್ಮೀ ಎಲ್. ನಾಯ್ಕ ಮಹಾಮನೆ ಬಡಾವಣೆ, ಸಹನಾ ಪಾಟೀಲ ಸಪ್ತಗಿರಿ ಲೇಔಟ್, ರೂಪಾ ವಿ. ಜವಳಿ ಜೆ.ಪಿ. ನಗರ ಗೋಕುಲ ರೋಡ್ ಹುಬ್ಬಳ್ಳಿ, ಅಶ್ವಿನಿ ವಿ. ಹಸರೆ ವಿಜಯಾನಂದನಗರ, ರಜನಿ ಎಸ್. ಪಾಟೀಲ ಮಾಳಮಡ್ಡಿ ಲಕ್ಕಿ ವಿಜೇತರಾಗಿ ಆಯ್ಕೆಯಾದರು.
* ಧಾರವಾಡ- 71 (ಗ್ರಾಮೀಣ) ಕ್ಷೇತ್ರದ ವಿಜೇತರು:
ಸುಶೀಲಾ ಬೆಂಡಿಗೇರಿ ಸೈದಾಪುರ, ಅಕ್ಷತಾ ಪಟ್ಟಣಶೆಟ್ಟಿ ರವಿವಾರಪೇಟೆ, ಸುನಿತಾ ಬಸ್ತಿ ಮಂಗಳವಾರಪೇಟೆ ಅಡಕಿ ಓಣಿ, ರೋಹಿಣಿ ಹಿರೇಮಠ ಅಷ್ಟಗಿ ಲೇಔಟ್ ನರೇಂದ್ರ ಹಾಗೂ ವಿದ್ಯಾ ಮುಧೋಳ ಕೆಸಿಸಿ ಬ್ಯಾಂಕ್ ರಸ್ತೆ ಮೇದಾರ ಓಣಿ ಲಕ್ಕಿ ವಿಜೇತರಾಗಿ ಆಯ್ಕೆಯಾದರು.