ಕಾಗವಾಡ: ಕಾಗವಾಡದಲ್ಲಿ ಸೆ.26ರಿಂದ 29ರವರೆಗೆ ಆಯೋಜಿಸಿದ್ದ ಚಂದುಕಾಕಾ ಸರಾಫ್ ಜ್ಯುವೆಲ್ಸ್ ಚಿನ್ನ ಮತ್ತು ವಜ್ರದ ಆಭರಣಗಳ ಪ್ರದರ್ಶನಕ್ಕೆ ಆರಂಭದಿಂದಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕಳೆದ 197 ವರ್ಷಗಳಿಂದ ಶುದ್ಧತೆ, ಸಂಪ್ರದಾಯ ಮತ್ತು ನಂಬಿಕೆಯ ಭದ್ರ ಬುನಾದಿಯ ಮೇಲೆ ನಿಂತು ನಿರಂತರವಾಗಿ ಸಂಸ್ಥೆ ಪ್ರಗತಿ ಹೊಂದುತ್ತಿದೆ. ಪ್ರದರ್ಶನದ ಪ್ರಮುಖ ಅಂಶವೆಂದರೆ 25,000 ರೂ.ಗೂ ಹೆಚ್ಚಿನ ಆಭರಣ ಖರೀದಿಯಲ್ಲಿ ಕುಬೋಟಾ ಟ್ರ್ಯಾಕ್ಟರ್ ಗೆಲ್ಲುವ ಸುವರ್ಣಾವಕಾಶ ಕಲ್ಪಿಸಲಾಗಿತ್ತು. ಇದರೊಂದಿಗೆ ವಜ್ರಾಭರಣಗಳ ಮೇಲೆ ವಿಶೇಷ ರಿಯಾಯಿತಿ ಹಾಗೂ ಚಿನ್ನಾಭರಣಗಳ ಮೇಲೆ ಶೇ.10 ರಿಯಾಯಿತಿ ನೀಡಲಾಗಿತ್ತು. ಪ್ರದರ್ಶನದ ಮೆಗಾ ಡ್ರಾವನ್ನು ಶನಿವಾರ ಗ್ರಾಹಕರ ಸಮ್ಮುಖದಲ್ಲಿ ನಡೆಸಲಾಯಿತು. ಇಂದ್ರಜಿತ್ ಸುನೀಲ್ ಪೋತದಾರ್ ಈ ಬಾರಿಯ ಕುಬೋಟಾ ಟ್ರ್ಯಾಕ್ಟರ್ ವಿಜೇತರಾದರು. ಸಂಸ್ಥೆ ನಿರ್ದೇಶಕ ಅತುಲ್ ಶಾ, ಸಂಗೀತಾ ಶಾ, ನಮೋ ಟ್ರ್ಯಾಕ್ಟರ್ ಮಾಲೀಕ ಜಯಕುಮಾರ ಬಾಫನಾ ಇದ್ದರು.