ಮೂಡುಬಿದಿರೆ : ಸ್ಯಾರಿ ನಮ್ಮ ದೇಶದ ಸಾಂಪ್ರದಾಯಿಕ ಉಡುಗೆ. ಅದನ್ನು ಹೆಮ್ಮೆಯಿಂದ ನಾವು ಧರಿಸುತ್ತೇವೆ. ಮಹಿಳೆಗೆ ಇಷ್ಟವಾಗುವ ಸ್ಯಾರಿಯ ಪರಿಕಲ್ಪನೆಯನ್ನು ಇಟ್ಟುಕೊಂಡು ‘ನಾರಿ ನಿನಗೊಂದು ಸ್ಯಾರಿ’ ಎಂಬ ವಿಭಿನ್ನ ಸ್ಪರ್ಧೆಯನ್ನು ಪತ್ರಿಕೆ ನಡೆಸಿರುವುದು ಶ್ಲಾನೀಯ. ಸಕಾರಾತ್ಮಕ ವಿಚಾರಗಳನ್ನು ಇಟ್ಟುಕೊಂಡು ತನ್ನದೇ ಓದುಗ ಬಳಗವನ್ನು ಹೊಂದಿರುವ ವಿಜಯವಾಣಿ ಪತ್ರಿಕೆಯು ಇಂತಹ ಹಲವು ಪ್ರಯತ್ನ, ಪ್ರಯೋಗಗಳಿಂದ ಓದುಗರಿಗೆ ಮತ್ತಷ್ಟು ಹತ್ತಿರವಾಗುತ್ತಿದೆ ಎಂದು ವಕೀಲೆ, ಜೈನ್ ಮಿಲನ್ ವಲಯ ಜತೆ ಕಾರ್ಯದರ್ಶಿ ಶ್ವೇತಾ ಜೈನ್ ಹೇಳಿದರು.
ಮೂಡುಬಿದಿರೆ ಸಾವಿರಕಂಬ ಬಸದಿಯಲ್ಲಿ ಶನಿವಾರ ಬಸದಿ ಸ್ವಚ್ಛತಾ ತಂಡ ಹಾಗೂ ಜೈನ್ ಮಿಲನ್ ಮೂಡುಬಿದಿರೆ ಟಕದ ಮಹಿಳಾ ಸದಸ್ಯರ ಸಹಯೋಗದಲ್ಲಿ ನಡೆದ ‘ವಿಜಯವಾಣಿ’ ಪತ್ರಿಕೆಯ ‘ನಾರಿ ನಿನಗೊಂದು ಸ್ಯಾರಿ’ ಬಹುವಾನ ಯೋಜನೆಯ ಲಕ್ಕಿ ಡ್ರಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಸದಿ ಸ್ವಚ್ಛತಾ ತಂಡ ಹಾಗೂ ಜೈನ್ ಮಿಲನ್ ಘಟಕ ಮಹಿಳಾ ಸದಸ್ಯರು ಲಕ್ಕಿ ಡ್ರಾ ನೆರವೇರಿಸಿದರು. ಜೈನ್ ಮಿಲನ್ ಗೌರವ ಸಲಹೆಗಾರ್ತಿ ಮಂಜುಳಾ ಅಭಯಚಂದ್ರ ಜೈನ್, ಬಸದಿ ಸ್ವಚ್ಛತಾ ತಂಡದ ಸದಸ್ಯೆಯರಾದ ವಿಶಾಖ ನಿರಂಜನ್, ಸುಧಾ ಪೃಥ್ವಿರಾಜ್, ವಿನಿತಾ, ಅರುಣಾ ಮಹೇಂದ್ರ, ಪದ್ಮಪ್ರಿಯಾ ಸೂರಜ್, ವಿಜಯವಾಣಿ ಮಂಗಳೂರು ಆವೃತ್ತಿ ಪ್ರಸರಣ ವಿಭಾಗದ ಎಕ್ಸಿಕ್ಯೂಟಿವ್ ಸೂರಜ್ ಪೈ ಉಪಸ್ಥಿತರಿದ್ದರು. ಪತ್ರಿಕೆ ಮೂಡುಬಿದಿರೆ ವರದಿಗಾರ ಯಶೋಧರ ವಿ.ಬಂಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು.