ಜಿಲ್ಲೆ

ಚರ್ಚೆಗೆ ಪ್ರಧಾನಿ‌‌ ಮೋದಿ‌ನ ಆಹ್ವಾನಿಸಿದ; ಶಾಸಕ ಲಕ್ಷ್ಮಣ ಸವದಿ

ಮಂಜುನಾಥ ಕೋಳಿಗುಡ್ಡ

ಬೆಳಗಾವಿ: ಕೇಂದ್ರ ಸರ್ಕಾರಕ್ಕೆ ರಾಜ್ಯದಿಂದ ಸಕ್ಕರೆ ಜಿಎಸ್ ಟಿ 8 ರಿಂದ 9 ಸಾವಿರ ಕೋಟಿ ರೂ.ಸಂದಾಯ ಮಾಡಲಾಗುತ್ತಿದೆ. ಎಥೆನಾಲ್ ದಿಂದ ಸಾಕಷ್ಟು ತೆರಿಗೆ ಹೋಗುತ್ತದೆ. ಆದರೆ, ಕಬ್ಬು ಬೆಳೆಗಾರರಿಗೆ ಅದರ ಲಾಭ ಸಿಗುತ್ತಿಲ್ಲ .

ಸಹಕಾರ ಸಂಘಗಳ ಲಾಭ ನಷ್ಟದ ಬ್ಯಾಲೆನ್ಸ್ ಶೀಟ್ ನ್ನು ಪದೇ‌ಪದೇ ಚೆಕ್ ಮಾಡುವ ಕೇಂದ್ರ ಸರ್ಕಾರ ಆಯಿಲ್ ಕಂಪನಿಗಳ ಬ್ಯಾಲೆನ್ಸ್ ಶೀಟ್ ಏಕೆ ಚೆಕ್ ಮಾಡುತ್ತಿಲ್ಲ. ವಾರ್ಷಿಕ ಸಾವಿರಾರೂ ಕೋಟಿ ರೂ.‌ಲಾಭಗಳಿಸುತ್ತಿವೆ ಎಂದು ಶಾಸಕ ಲಕ್ಷ್ಮಣ ಸವದಿ ಆಕ್ರೋಶ ಹೊರಹಾಕಿದರು.

ಇದೇ ವೇಳೆ ಮಧ್ಯಪ್ರವೇಶಿಸಿದ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಅವರು, ಹಿಂದಿನ ಕಾಂಗ್ರೆಸ್ ಸರ್ಕಾರದಿಂದಲೇ ಸಮಸ್ಯೆ ಆಗಿದೆ ಎಂದರು. ಇದರಿಂದ ಕೋಪಗೊಂಡ ಶಾಸಕ ಲಕ್ಷ್ಮಣ ಸವದಿ, ಈ ವಿಷಯದಲ್ಲಿ ಬಿಜೆಪಿ, ಕಾಂಗ್ರೆಸ್ ವಿಷಯ ತರಬೇಡಿ. ಈ ವಿಷಯ ಕುರಿತು ಚರ್ಚಿಸಲು ಪ್ರಧಾನಿ‌‌ ಮೋದಿ ಅವರನ್ನು ಕರೆದುಕೊಂಡು ಬನ್ನಿ ಎಂದರು. ಅದಕ್ಕೆ ಈರಣ್ಣಾ ಕಡಾಡಿ ಅವರು ಪ್ರಧಾನಿ ಏಕೆ ನನ್ನೊಂದಿಗೆ ಚರ್ಚೆಗೆ ಬನ್ನಿ ಎಂದರು.

ಇದು ಬೆಳಗಾವಿಯಲ್ಲಿ ಬುಧವಾರ ನಡೆದ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಘಟನೆ ನಡೆಯಿತು.

ಬೆಳಗಾವಿ ಜಿಲ್ಲೆ ಕಬ್ಬು ಬೆಳೆಯುವಲ್ಲಿ ಮುಂಚೂಣಿಯಲ್ಲಿದೆ. ಕೇಂದ್ರ ಸರ್ಕಾರದ ಹೊಸ ಯೋಜನೆಯಾದ ಕಬ್ಬಿನಿಂದ ಎಥನಾಲ್ ಉತ್ಪಾದನೆ ಪ್ರಾಜೆಕ್ಟ್ ಗೆ ಸಹಕಾರ ಕ್ಷೇತ್ರ ಪ್ರಮುಖ ಪಾತ್ರ ವಹಿಸಲಿದೆ. ಮುಂದಿನ ದಿನಗಳಲ್ಲಿ ದೇಶದ ಆರ್ಥಿಕತೆಗೆ ಸಹಕಾರ ಕ್ಷೇತ್ರ ಪ್ರಮುಖ ಪಾತ್ರ ನಿರ್ವಹಿಸಲಿದೆ ಎಂದು ಶಾಸಕ ಸವದಿ ಹೇಳಿದರು.