ಗುರ್ಲಾಪುರ: ಸಂಘವು ಎಲ್ಲರ ಸಹಕಾರದಿಂದ ಅಭಿವೃದ್ಧಿಯತ್ತ ಮುನ್ನಡೆಯುತ್ತಿದೆ ಎಂದು ಸಂಘದ ಅಧ್ಯಕ್ಷ ಸಿ.ಸಿ.ಮಗದುಮ್ ಹೇಳಿದರು.
ಸಮೀಪದ ಇಟನಾಳ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಾರ್ಷಿಕ ಸರ್ವ ಸಾಧಾರಣ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಸಕ್ತ ವರ್ಷದಲ್ಲಿ 11.58ಕೋಟಿ ರೂ. ಬೆಳೆ ಸಾಲ, 82.90ಲಕ್ಷ ರೂ. ಮಾಧ್ಯಮಿಕ ಸಾಲ, 2.07ಕೋಟಿ ರೂ. ಇತರ ಸಾಲ ವಿತರಿಸಿ ವಸೂಲಾತಿ ಮಾಡಿದೆ. ಕಡಿಮೆ ಬಡ್ಡಿದರದಲ್ಲಿ ಟ್ರ್ಯಾಕ್ಟರ್ ಸಾಲ ಕೊಡಲಾಗುವುದು. ರೈತರು ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಸಿದ್ಧೇಶ್ವರ ಸ್ವಾಮೀಜಿ ಮಾತನಾಡಿದರು. ಗುರುಪಾದ ದಾನಿಹಾಳ, ಆಡಳಿತ ಮಂಡಳಿ ಸದಸ್ಯರಾದ ಧೂಳಪ್ಪ ಮುತ್ನಾಳ, ಸಿದ್ದಪ್ಪ ಹಾಲಳ್ಳಿ, ಮುತ್ತಪ್ಪ ದಾಸನವರ, ಗೋವಿಂದ ಪೂಜೇರಿ, ಮಹಾಂತೇಶ ಬೆನ್ನಳ್ಳಿ, ಸಿದ್ದಪ್ಪ ಸುನದೋಳಿ, ನಿಂಬೆವ್ವ ದಾನಿಹಾಳ, ಸುಮಿತ್ರಾ ತೇರದಾಳ, ಅರ್ಜುನ್ ಮಾದರ, ಯಲ್ಲಪ್ಪ ಸನದಿ, ಸಂತೋಷ ಪಾಟೀಲ, ಮಹಾಂತೇಶ ಹಾಲಳ್ಳಿ, ಬಸಪ್ಪ ಮಾದರ, ಪ್ರಸನ್ನ ಬೆನ್ನಳ್ಳಿ, ಅಮಿತ್ ಬಾಗೋಜಿ, ಬಾಳಪ್ಪ ಮಾದರ ಇತರರಿದ್ದರು.