ಬೆಳಗಾವಿ: ಕೊಲ್ಲಾಪುರ ಜಿಲ್ಲೆಯ ಕನ್ಹೇರಿಮಠದ ಸಿದ್ಧಗಿರಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ನ್ಯೂರೋ ಮೈಕ್ರೊಸ್ಕೋಪ್ (ಜಾಯೀಸ್ ಪೆಂಟೇರೊ 800ಎಸ್) ಯಂತ್ರ ಬಳಸಿ, ಅತಿ ಕಡಿಮೆ ಶುಲ್ಕದಲ್ಲಿ ಮಿದುಳಿಗೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿರುವವರ ಶಸಚಿಕಿತ್ಸೆ ಮಾಡಲಾಗುತ್ತಿದೆ ಎಂದು ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ತಿಳಿಸಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಕನ್ಹೇರಿಮಠದ ಸಿದ್ಧಗಿರಿ ಆಸ್ಪತ್ರೆ'ಯು ಈ ಅತ್ಯಾಧುನಿಕ ಯಂತ್ರ ಬಳಸುತ್ತಿರುವ ದೇಶದ ಮೊದಲ ಆಸ್ಪತ್ರೆಯಾಗಿದೆ. ಗ್ರಾಮೀಣ ಭಾಗದ ಬಡ ಜನರಿಗೆ ಅನುಕೂಲವಾಗಲೆಂದು 4 ಕೋಟಿ ರೂ. ವೆಚ್ಚದಲ್ಲಿ ಖರೀದಿಸಿದ ಈ ಯಂತ್ರವು ಮಿದುಳಿಗೆ ಸಂಬಂಧಿಸಿದ ಕಾಯಿಲೆಗಳನ್ನು ಬೇಗ ಪತ್ತೆ ಮಾಡುತ್ತದೆ. ಇದರ ಮೂಲಕ ಪರಿಣಾಮಕಾರಿಯಾಗಿ ಶಸಚಿಕಿತ್ಸೆ ಮಾಡಿ, ರೋಗಿಗಳನ್ನು ಬೇಗ ಗುಣಮುಖ ಮಾಡಬಹುದು ಎಂದರು.
ದೊಡ್ಡ ಮಹಾನಗರಗಳ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಮಿದುಳಿನ ಶಸಚಿಕಿತ್ಸೆ ಮಾಡಿಸಿಕೊಂಡರೆ 10 ಲ ರೂಪಾಯಿಗೂ ಅಧಿಕ ವೆಚ್ಚವಾಗುತ್ತದೆ. ಆದರೆ, ನಮ್ಮಲ್ಲಿ ಈ ಯಂತ್ರದ ಸಹಾಯದಿಂದ 1 ಲ ರೂ. ವೆಚ್ಚದಲ್ಲೆ ಶಸಚಿಕಿತ್ಸೆ ಮಾಡಲಾಗುತ್ತಿದೆ. ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು. ಕರ್ನಾಟಕ ಸರ್ಕಾರದ ವಿವಿಧ ಆರೋಗ್ಯ ಯೋಜನೆಗಳಡಿ ಸಹ ನಮ್ಮಲ್ಲಿ ಚಿಕಿತ್ಸೆ ಪಡೆಯಲು ಅವಕಾಶವಿದೆ ಎಂದು ತಿಳಿಸಿದರು.
ಆಸ್ಪತ್ರೆ ವೈದ್ಯಕಿಯ ನಿರ್ದೇಶಕ ಮತ್ತು ನರರೋಗ ಶಸಚಿಕಿತ್ಸಕ ಡಾ.ಶಿವಶಂಕರ ಮರಜಕ್ಕೆ ಮಾತನಾಡಿ, ಈ ಮೈಕ್ರೋಸ್ಕೋಪ್ ಮಿದುಳಿನ ಸೂಕ್ಷ$್ಮ ನರಗಳ ಸಂಬಂಧಪಟ್ಟ ಕಾಯಿಲೆಗಳನ್ನು ಅತೀ ನಿಖರವಾಗಿ ಕಡಿಮೆ ಸಮಯದಲ್ಲಿ ಹಾಗೂ ಹೆಚ್ಚು ರಕ್ತ ಸ್ರಾವವಾಗದಂತೆ ಮಾಡಿ, ರೋಗಿಗಳನ್ನು ಬೇಗ ಗುಣಮುಖರನ್ನಾಗಿ ಮಾಡಲಾಗುತ್ತಿದೆ. ದೇಶದ 10&15 ನರರೋಗಕ್ಕೆ ಸಂಬಂಧಿಸಿದ ಆಸ್ಪತ್ರೆಗಳಲ್ಲಿ ಆಗುವಂತ ಮಿದುಳಿನ ಬೈಪಾಸ್ ಶಸ ಚಿಕಿತ್ಸೆ ಅಪಸ್ಮಾರಕ್ಕೆ ಹಾಗೂ ಮುಂತಾದ ಜಟಿಲ ಶಸಚಿಕಿತ್ಸೆಗಳಿಗೆ ನಮ್ಮಲ್ಲಿ ನುರಿತ ತಜ್ಞರ ತಂಡವಿದೆ ಎಂದರು. ಮೊದಲ ನ್ಯೂರೋ ನ್ಯಾವಿಗೇಶನ್ ನ್ಯೂರೋ ಮಾನಿಟರಿಂಗ್, ಕೀ ಹೋಲ್, ಮಿದುಳಿನ ಹಾಗೂ ಬೆನ್ನುಹುರಿ (ಸ್ಪೆನ್) ಶಸ ಚಿಕಿತ್ಸೆ ಮಾಡುವಂತ ಯಂತ್ರೋಪಕರಣಗಳನ್ನು ಹೊಂದಿರುವ ಹಳ್ಳಿಯಲ್ಲಿರುವ ಮೊದಲ ಆಸ್ಪತ್ರೆಯಾಗಿದೆ ಎಂದರು.
ಅರಿವಳಿಕೆ ತ ಡಾ.ಪ್ರಕಾಶ ಭರಮಗೌಡರ ಸುದ್ದಿಗೋಷ್ಠಿಯಲ್ಲಿದ್ದರು.
ಫೋಟೋ: 27 ಜಗ್ಗು 2
ಸುದ್ದಿಗೋಷ್ಠಿಯಲ್ಲಿ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಮಾತನಾಡಿದರು. ಡಾ. ಪ್ರಕಾಶ ಭರಮಗೌಡರ, ಡಾ.ಶಿವಶಂಕರ ಮರಜಕ್ಕೆ ಇದ್ದರು.