ಕಲಾದಗಿಯಲ್ಲಿ ಜರುಗಿದ ಶ್ರೀಶೈಲ ಪಾದಯಾತ್ರಿಗಳ ಸೇವಾಕರ್ತರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಜನಹಿತ ಟ್ರಸ್ಟ್ ನಿರ್ದೇಶಕ ವಿಠ್ಠಲ ಪರೀಟ ಮಾತನಾಡಿದರು. ಶಾರದಾ ಕೇರಿ, ನಿಂಗಪ್ಪ ಅರಕೇರಿ, ಶಂಕ್ರಣ್ಣ ಬಿಜಾಪುರ, ಮಹಾದೇವ ಬಳಿಗಾರ ಮತ್ತಿತರರಿದ್ದಾರೆ. 
ಜಿಲ್ಲೆ

ದೇವರಿಗೆ ಪ್ರಿಯವಾಗುವುದು ನಿಸ್ವಾರ್ಥದ ಸೇವೆ

ಕಲಾದಗಿ: ಸೇವೆ ಮಾಡುವುದೆಂದರೆ ಉಪಕಾರವಲ್ಲ. ಅದು ಸಮಾಜಕ್ಕೆ ಮಾಡುವ ಕರ್ತವ್ಯ, ನಿಸ್ವಾರ್ಥದ ಸೇವೆ ದೇವರಿಗೆ ಬಹಳ ಪ್ರಿಯಗುತ್ತಾದೆ ಎಂದು ಮುಧೋಳದ ಜನಹಿತ ಟ್ರಸ್ಟ್ ನಿರ್ದೇಶಕ ವಿಠ್ಠಲ ಪರೀಟ ಹೇಳಿದರು.

ಗ್ರಾಮದ ಶಿವ ಚಿದಂಬರ ಸಭಾಭವನದಲ್ಲಿ ಸನಾತನ ಉತ್ಸವಗಳ ಆಚರಣಾ ಸಮಿತಿ ಆಯೋಜಿಸಿದ್ದ ಶ್ರೀಶೈಲ ಪಾದಯಾತ್ರಿಗಳಿಗೆ ಸೇವೆ ಸಲ್ಲಿಸಿದವರಿಗೆ ಗೌರವಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬದುಕಿನ ಕಷ್ಟ, ನೋವುಗಳು, ಮೌಲ್ಯಗಳ ಬೆಲೆ ತಿಳಿಯಬೇಕಾದರೇ ಧರ್ಮಕ್ಷೇತ್ರಗಳಿಗೆ ಪಾದಯಾತ್ರೆ ಮಾಡಬೇಕು ಎಂದರು.

ಮುರಗೊಡದ ಪ್ರದೀಪ ಪಟ್ಟಣಶೆಟ್ಟಿ ಅವರು ಮಾತನಾಡಿ, ಹಿಂದು ಧರ್ಮದ ಆಚರಣೆಗಳ ಜತೆಗೆ ಅವುಗಳನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ಕಾರ್ಯ ಪ್ರತಿಯೊಬ್ಬರು ಮಾಡಬೇಕು. ನಮ್ಮ ಹಬ್ಬಗಳಲ್ಲಿ ವೈಜ್ಞಾನಿಕ ಕಾರಣಗಳಿವೆ. ಅವುಗಳ ಅರಿವಿಲ್ಲದ ಕೆಲವು ಅವಿವೇಕಿಗಳು ಅದನ್ನು ಮೂಡನಂಬಿಕೆ ಎನ್ನುತ್ತಾರೆ ಎಂದರು.

ಶ್ರೀಶೈಲ ಪಾದಯಾತ್ರಾರ್ಥಿಗಳ ಸೇವೆಗೈದ ಹಾಗೂ ಸಮಾಜದ ವಿವಿಧ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಅರವತ್ತಕ್ಕೂ ಅಧಿಕ ಸೇವಾಕರ್ತರನ್ನು ಸನ್ಮಾನಿಸಲಾಯಿತು.

ರಾಮದುರ್ಗ ತಾಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾರದಾ ಕೇರಿ, ಬಾಗಲಕೋಟೆ ಎಪಿಎಂಸಿ ಮಾಜಿ ಅಧ್ಯಕ್ಷ ನಿಂಗಪ್ಪ ಅರಕೇರಿ, ಹಿರಿಯ ವರ್ತಕರಾದ ಶಂಕ್ರಣ್ಣ ಬಿಜಾಪುರ, ಚಿಪ್ಪಕಲಟ್ಟಿ ಗ್ರಾಮದ ಮಹಾದೇವ ಬಳಿಗಾರ ವೇದಿಕೆಯಲ್ಲಿದ್ದರು.

ಅಜಯ ಕುಲಕರ್ಣಿ, ಶ್ರೀಧರ ದಂತಿ, ರಾಜೂ ಅರಕೇರಿ, ಬ್ರಹ್ಮಾನಂದ ಬಡಿಗೇರ, ಮಲ್ಲಿಕಾರ್ಜುನ ರಂಗಣ್ಣವರ, ಅವಿನಾಶ ರಾಜೂರ, ನಿತೀಶ ಪಾಟೀಲ, ಹೊಳಬಸು ಪಾಣಿಶೆಟ್ಟಿ, ಮಾರುತಿ ಬಾರಕೇರ ಮತ್ತಿತರರಿದ್ದರು.