ಜಿಲ್ಲೆ

ನದಿಗೆ ಹಾರಿ ಪ್ರೇಮಿಗಳು ಆತ್ಮಹತ್ಯೆ

ಸುಭಾಸ ಹೆಗಡೆ ಧೂಪದಹೊಂಡ

ಹೊನ್ನಾವರ: ಪಟ್ಟಣದ ಶರಾವತಿ ಸೇತುವೆ ಮೇಲಿಂದ ಶುಕ್ರವಾರ ರಾತ್ರಿ ನದಿಗೆ ಹಾರಿದ ಯುವಕ, ಯುವತಿಯ  ಮ್ರತದೇಹ ಶನಿವಾರ ಪತ್ತೆಯಾಗಿದೆ.

ಮೃತರು ತುಮಕೂರು ಜಿಲ್ಲೆಯವರಾಗಿದ್ದು ನೆಲಹಾಳ ನಿವಾಸಿ  ದೀಲಿಪ ಶಿವರಾಜು ಎನ್ ಬಿ(17) ಮತ್ತು ಅಮೂಲ್ಯ ಲೋಕೇಶ್(17) ಎಂದು ಗುರುತಿಸಲಾಗಿದೆ

ಶುಕ್ರವಾರ ರಾತ್ರಿ ಜನದಟ್ಟಣೆ ಕಡಿಮೆ ಇರುವ ಸಮಯದಲ್ಲಿ ಇಬ್ಬರೂ ಸೇತುವೆ ಮೇಲಿಂದ ನದಿಗೆ ಹಾರಿದ್ದಾರೆ. ಯುವತಿಯ ಶವವು ಶರಾವತಿ ನದಿಗೆ ಹೊಂದಿಕೊಂಡಿರುವ ಟೊಂಕಾ ಬಳಿ ಸಿಕ್ಕಿದ್ದು, ಇನ್ನೊಂದು ಮ್ರತದೇಹ ತಡವಾಗಿ ಪತ್ತೆಯಾಗಿದೆ. 

. ಘಟನೆಗೆ ನಿಖರ ಕಾರಣ ಎನೆಂದು ಸೂಕ್ತ ತನಿಖೆಯಿಂದ ತಿಳಿದು ಬರಬೇಕಿದೆ. ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.