ಜಿಲ್ಲೆ

ಅತ್ಯಾಚಾರಿ ಲವ್​ ಜಿಹಾದಿಗೆ ಗಲ್ಲಿಗೇರಿಸಿ

ಕಲಬುರಗಿ: ಜಿಲ್ಲೆಯಲ್ಲಿ ನಡೆಯುತ್ತಿರುವ ಅಪ್ರಾಪ್ತೆಯರ ಮೇಲಿನ ಅತ್ಯಾಚಾರ, ಮುಸ್ಲಿಮ್​ ಯುವಕರಿಂದ ಲವ್​ ಜಿಹಾದ್​ ಖಂಡಿಸಿ, ಅತ್ಯಾಚಾರಿಗಳಿಗೆ ಗಲ್ಲು ಶಿೆ ವಿಧಿಸಲು ಆಗ್ರಹಿಸಿ ನಗರದಲ್ಲಿ ಸಕಲ ಹಿಂದು ಸಮಾಜದ ನೇತೃತ್ವದಲ್ಲಿ ಮಂಗಳವಾರ ಬೃಹತ್​ ಪ್ರತಿಭಟನಾ ಮೆರವಣಿಗೆ ನಡೆಸಿ, ಆಕ್ರೋಶ ವ್ಯಕ್ತಪಡಿಸಲಾಯಿತು.

ನಗರದ ಜಗತ್​ ವೃತ್ತದಲ್ಲಿ ನೂರಾರು ಪ್ರತಿಭಟನಾಕಾರರು ಮಾನವ ಸರಪಳಿ ರಚಿಸಿ, ಲವ್​ ಜಿಹಾದ್​ ನಿಲ್ಲಿಸಿ, ಹಿಂದು ಹುಡುಗಿಯರನ್ನು ರಸಿ ನಾಮಲಕ ಹಿಡಿದು, ರಾಜ್ಯ ರ‍್ಕಾರ, ಪೊಲೀಸ್​ ವ್ಯವಸ್ಥೆ ವಿರುದ್ಧ ಘೋಷಣೆಗಳನ್ನು ಕೂಗುತ್ತ, ಮಳೆಯ ಮಧ್ಯೆ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಡಿಸಿ ಕಚೇರಿ ಎದುರು ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಶಾಸಕ ಡಾ.ಅವಿನಾಶ್​ ಜಾಧವ ಮಾತನಾಡಿ, ಕಾಂಗ್ರೆಸ್​ ಅಧಿಕಾರಕ್ಕೆ ಬಂದ ಮೇಲೆ ಜಿಲ್ಲೆಯಲ್ಲಿ ಲೈಗಿಂಕ ದರ‍್ಜನ್ಯ ಪ್ರಕರಣ ಹೆಚ್ಚುತ್ತಿವೆ. ಚಂದ್ರಂಪಳ್ಳಿ, ಯಡ್ರಾಮಿ, ಜೇರ‍್ಗಿ, ನಂದಿಕೂರ ಸೇರಿ ವಿವಿಧೆಡೆ ಪೈಶಾಚಿಕ ಕೃತ್ಯಗಳು ನಡೆಯುತ್ತಿವೆ. ಬಾಲಕಿಯರ ಮೇಲೆ ಲೈಂಗಿಕ ದರ‍್ಜನ್ಯ ನಡೆಸಿದ ಕಿಡಿಗೇಡಿಗಳಿಗೆ ಕಠಿಣ ಶಿೆ ವಿಧಿಸಬೇಕು ಎಂದು ಆಗ್ರಹಿಸಿದರು.

ಬಂಜಾರ ಸಮಾಜದ ಮುಖಂಡ ಮನೋಹರ ಪವಾರ ಮಾತನಾಡಿ, ಅಪ್ರಾಪ್ತ ಬಾಲಕಿಯನ್ನು ಲವ್​ ಜಿಹಾದ್​ ಬಲೆಗೆ ಬೀಸಿ, ಅತ್ಯಾಚಾರ ಎಸಗಿದ ವಾಸಿಂ ಶೇಖ್​ನನ್ನು ಗಲ್ಲಿಗೇರಿಸಬೇಕು. ಯಡ್ರಾಮಿ, ಜೇರ‍್ಗಿ ನಂತರ ಇದೀಗ ಮತ್ತೊಂದು ಟನೆ ನಡೆದಿದೆ. ಇಂತಹ ಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದರು.

ಯಾವುದೇ ಸಮುದಾಯದ ವಿರುದ್ಧವಲ್ಲ. ಸುಮ್ಮನೆ ಕುಳಿತರೆ ಮರುಕಳಿಸಲಿದ್ದು, ಹಿಂದು ಹೆಣ್ಣು ಮಕ್ಕಳ ಮೇಲೆ ಕಣ್ಣು ಹಾಕುವವರ ಕಣ್ಣು ಕಿತ್ತಬೇಕು. ಸಂವಿಧಾನದಡಿ ಹೋರಾಡಬೇಕು. ಸಿಎಂ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್​ ರ‍್ಖಗೆ ಇಂತಹ ಕೃತ್ಯಗಳ ಮೇಲೆ ನಿಗಾ ಇರಿಸಬೇಕು. ಕಠಿಣ ಕ್ರಮ ತೆಗೆದುಕೊಳ್ಳದಿದ್ದರೆ ಹೋರಾಟ ತೀವ್ರವಾಗಲಿದೆ. ಪ್ರಿಯಾಂಕ್​ ಅವರು ಬಂಜಾರ ಸಮಾಜದ ಮಣಿಕಂಠ ರಾಠೋಡರನ್ನು ಗಡಿಪಾರು ಮಾಡಿಸಿದ್ದು, ಏನೇ ಮಾಡಿದರೂ ಇಡೀ ಸಮಾಜ ಮಣಿಕಂಠ ಜತೆಗಿದೆ ಎಂದರು.

ನಿಂದು ಬಾಳ್​ ಆಗ್ಯಾದ ಎಂದ ಪೊಲೀಸ್​: ಜಗತ್​ನಲ್ಲಿ ಪ್ರತಿಭಟನೆ ವೇಳೆ ಪೊಲೀಸ್​ ಅಧಿಕಾರಿಯೊಬ್ಬರೂ ನಿಂದು ಬಾಳ್​ ಆಗ್ಯಾದ ಎನ್ನುತ್ತಾರೆ. ಏನು ಮಾಡಬೇಕು ಅಂತಿದ್ದಾರೆ ತಿಳಿಯುತ್ತಿಲ್ಲ. ಏನು ಸಾಯಿಸಬೇಕು ಅಂತಿದ್ದೀರೆ?. ನಿಮ್ಮ ಅಕ್ಕತಂಗಿಗೆ ಆದರೆ ಏನು ಮಾಡ್ತೀರಿ ಎಂದು ದಿವ್ಯಾ ಹಾಗರಗಿ ಪ್ರಶ್ನಿಸಿದರು.

ಪಾಳಾದ ಶ್ರೀ ಗುರುಮರ‍್ತಿ ಶಿವಾಚರ‍್ಯರು, ಕೊಂಚೂರಿನ ಶ್ರೀ ಸವಿತಾನಂದನಾಥ ಸ್ವಾಮೀಜಿ, ಚವಡಾಪುರದ ಶ್ರೀ ಮುರಾರಿ ಮಹಾರಾಜ, ರವಿ ಬಿರಾದಾರ, ಸಾಗರ ರಾಠೋಡ, ಕೃಷ್ಣಾ ನಾಯಕ, ಲಕ್ಷಿ$್ಮಕಾಂತ ಸ್ವಾದಿ, ಎಂ.ಎಸ್​.ಪಾಟೀಲ್​ ನರಿಬೋಳ, ವಿರು ಸ್ವಾಮಿ ನರೋಣಾ, ಸಿದ್ದು ಹಿರೇಮಠ, ಭಾಗೀರಥಿ ಗುನ್ನಾಪುರ, ಮಾಲಾ ಕಣ್ಣಿ, ಭಾಗ್ಯಶ್ರೀ ಪಾಟೀಲ್​ ಇತರರಿದ್ದರು.