ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಪ್ರವಾದಿ(ಸ) ಅವರು ಶಾಂತಿ, ಸಹನೆ, ದಯೆ, ಮಾನವೀಯತೆ ಸಂದೇಶವನ್ನು ಜಗತ್ತಿಗೆ ಸಾರಿದ್ದಾರೆ. ಈ ನಿಟ್ಟಿನಲ್ಲಿ ನಾವು ಪರಸ್ಪರ ಸಹಕಾರದ ಮೂಲಕ ಎಲ್ಲರೊಂದಿಗೆ ಶಾಂತಿ, ಪ್ರೀತಿ, ವಿಶ್ವಾಸಕ್ಕೆ ಧಕ್ಕೆ ಬಾರದ ರೀತಿ ಜೀವಿಸಬೇಕು ಎಂದು ಪಜೀರ್ ಗ್ರಾಮ ಪಂಚಾಯಿತಿ ಅಧ್ಯಕ್ಷ ರಫೀಕ್ ಪಜೀರ್ ಹೇಳಿದರು.
ಪಜೀರ್ ರಹ್ಮಾನಿಯಾ ಜುಮಾ ಮಸೀದಿ ಮತ್ತು ಜಂ-ಇಯ್ಯತುತ್ತಲಬಾ ಫ್ರೆಂಡ್ಸ್ ಅಸೋಸಿಯೇಷನ್ ಆಶ್ರಯದಲ್ಲಿ ಈದ್ ಮಿಲಾದ್ ಪ್ರಯುಕ್ತ ಪಜೀರ್ ಮಸೀದಿ ವಠಾರದಲ್ಲಿ ಆಯೋಜಿಸಲಾಗಿದ್ದ ಹಿದಾಯತುಲ್ ಇಸ್ಲಾಮ್ ಮದ್ರಸ ವಿದ್ಯಾರ್ಥಿಗಳ ಪ್ರತಿಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಮಸೀದಿಯ ಖತೀಬ್ ಇಬ್ರಾಹಿಮ್ ದಾರಿಮಿ ಕಾರ್ಯಕ್ರಮ ಉದ್ಘಾಟಿಸಿದರು. ಅಧ್ಯಕ್ಷ ಅಬ್ದುಲ್ ಹಮೀದ್, ಉಪಾಧ್ಯಕ್ಷ ಮೊಯಿದಿನ್ ಕುಂಞಿ, ಮಾಜಿ ಅಧ್ಯಕ್ಷ ಪಿ.ಮೊಹಮ್ಮದ್, ಕಾರ್ಯದರ್ಶಿ ಅಬೂಬಕರ್, ಕೋಶಾಧಿಕಾರಿ ಅಬ್ದುಲ್ ಖಾದರ್, ಜತೆ ಕಾರ್ಯದರ್ಶಿ ಬಶೀರ್, ಕಮಿಟಿ ಸದಸ್ಯರಾದ ಇಬ್ರಾಹಿಮ್ ಪಾಡಿ, ಮೊಹಮ್ಮದ್ ಖಾನ್, ಸಿ.ಎಚ್.ಲತೀಫ್, ಉಸ್ತಾದ್ ಅಬ್ದುಲ್ ಖಾದರ್ ಮುಡಿಪು, ಬಾಶಿತ್ ಝುಹ್ರಿ ಉಸ್ತಾದ್, ಚೆನೈಕೋಡಿ ಮಸೀದಿಯ ಖತೀಬ್ ನವಾಝ್ ಯಮಾನಿ, ಸಿ.ಎಚ್.ಅಬ್ದುರ್ರಹ್ಮಾನ್, ಸಾದಿಕ್ ಮುಸ್ಲಿಯಾರ್, ಜಂ- ಇಯ್ಯತುತ್ತಲಬಾ ಫ್ರೆಂಡ್ಸ್ ಅಸೋಸಿಯೇಷನ್ ಅಧ್ಯಕ್ಷ ನಾಸೀರ್ ಬಳಕ, ಕಾರ್ಯದರ್ಶಿ ಹಸನ್ ಕುಂಞಇ ಮೊದಲಾದವರು ಉಪಸ್ಥಿತರಿದ್ದರು.
ಸದರ್ ಮುಅಲ್ಲಿಮ್ ಅಬ್ದುಲ್ ಖಾದರ್ ಉಸ್ತಾದ್ ಸ್ವಾಗತಿಸಿದರು. ಅಬ್ದುಲ್ ಹಮೀದ್ ಸನ್ಮಾನ ಪತ್ರ ವಾಚಿಸಿದರು. ಸಮೀರ್ ಪಜೀರ್ ವಂದಿಸಿದರು. ವಿದ್ಯಾರ್ಥಿಗಳಾದ ಸಫೀಲ್ ಮುದಸ್ಸಿರ್ ಹನೀಫ್ ಕಾರ್ಯಕ್ರಮ ನಿರೂಪಿಸಿದರು.