ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜು.೭ಕ್ಕೆ ತನ್ನ ಬಜೆಟ್ ಮಂಡಿಸುತ್ತಿದೆ. ಈಗಾಗಲೇ ಗ್ಯಾರಂಟಿ ಯೋಜನೆಗಳ ಮೂಲಕ ಅಧಿಕಾರ ಹಿಡಿದು ಈ ಪೈಕಿ ಶಕ್ತಿ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದಿರುವ ಈ ಹೊಸ ಸರ್ಕಾರದ ಬಜೆಟ್ ಸಾಕಷ್ಟು ಭರವಸೆಗಳನ್ನು ಮೂಡಿಸಿದೆ.
ಕೊಡಗಿನಲ್ಲಿ ಸುಮಾರು ೨ ದಶಕಗಳ ಕಾಲ ಬಿಜೆಪಿ ಭದ್ರ ಕೋಟೆ ಇತ್ತು. ಇದನ್ನು ಇಬ್ಬರು ಯುವ ಮತ್ತು ವಿದ್ಯಾವಂತ ಶಾಸಕರು ಛಿದ್ರ ಮಾಡಿದ್ದು, ಕೊಡಗಿನಲ್ಲಿ ಮತ್ತೆ ಕಾಂಗ್ರೆಸ್ ಗತ ವೈಭವಕ್ಕೆ ಮುನ್ನುಡಿ ಬರೆದಿದ್ದಾರೆ. ಮುಂದಿನ ತಾ.ಪಂ., ಜಿ.ಪಂ. ಹಾಗೂ ಲೋಕಸಭಾ ಚುನಾವಣೆ ಸಂದರ್ಭ ಜಿಲ್ಲೆಯಲ್ಲಿ ಇದೇ ಹವಾ ಮುಂದುವರಿಯಬೇಕಾದರೆ ಸರ್ಕಾರದ ಸಹಕಾರವೂ ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಮಂಡಿಸುತ್ತಿರುವ ಈ ಬಜೆಟ್ ಮೇಲೆ ಜಿಲ್ಲೆಯಲ್ಲಿ ದೊಡ್ಡ ನಿರೀಕ್ಷೆಗಳು ಇವೆ.
ಕೃಷಿಪ್ರಧಾನ ಕೊಡಗಿನಲ್ಲಿ ಕಾಫಿ ಪ್ರಮುಖ ಬೆಳೆ. ಇದರ ಜತೆಯಲ್ಲಿ ಕರಿಮೆಣಸು, ಅಡಿಕೆಯನ್ನೂ ಬೆಳೆಯಲಾಗುತ್ತಿದೆ. ಒಂದೊಮ್ಮೆ ಭತ್ತದ ಕಣಜ ಎಂದು ಗುರುತಿಸಲಾಗಿದ್ದ ಜಿಲ್ಲೆಯಲ್ಲಿ ಈಗ ಭತ್ತ ಬೆಳೆಯುವ ಪ್ರದೇಶ ಕಡಿಮೆ ಆಗಿದೆ. ಕೊಡಗಿನೊಂದಿಗೆ ಗುರುತಿಸಿಕೊಂಡಿದ್ದ ಕಿತ್ತಳೆ, ಜೇನಿನ ಪರಿಮಳವೂ ಮೊದಲಿನಷ್ಟು ಇಲ್ಲ. ಹಾಗಾಗಿ ಕೃಷಿ ಕ್ಷೇತ್ರದ ಪುನರುಜ್ಜೀವನಕ್ಕೆ ಸಾಕಷ್ಟು ಕೊಡುಗೆಯ ನಿರೀಕ್ಷೆ ಇದೆ.
ಇತ್ತೀಚಿನ ವರ್ಷಗಳಲ್ಲಿ ಪ್ರವಾಸೋದ್ಯಮ ಜಿಲ್ಲೆಯ ಪ್ರಮುಖ ಆರ್ಥಿಕ ಮೂಲವಾಗಿದೆ. ಆದರೆ ಇಲ್ಲಿ ಹೇಳಿಕೊಳ್ಳುವಂತಹ ಅಭಿವೃದ್ಧಿ ಆಗಿಲ್ಲ ಎನ್ನುವುದು ಸಾಮಾನ್ಯ ಆರೋಪ. ಈ ಬಗ್ಗೆಯೂ ಬಜೆಟ್‌ನಲ್ಲಿ ಯೋಜನೆಯ ನಿರೀಕ್ಷೆ ಇದೆ. ವನ್ಯಜೀವಿ-ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ, ಮಳೆಯಿಂದ ಹಾಳಾಗುವ ರಸ್ತೆಗಳಿಗೆ ಶಾಶ್ವತ ಪರಿಹಾರ, ಪ್ರವಾಹಪೀಡಿತರಿಗೆ ಶಾಶ್ವತ ಪರಿಹಾರ ಹೀಗೆ ನಿರೀಕ್ಷೆಗಳ ದೊಡ್ಡ ಪಟ್ಟಿಯೇ ಇದೆ. ಕ್ರೀಡಾವಿಶ್ವವಿದ್ಯಾಲಯ, ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಮಿನಿ ವಿಮಾನ ನಿಲ್ದಾಣದಂತಹ ಬೇಡಿಕೆಗಳೂ ಇವೆ. ಬಜೆಟ್‌ನಲ್ಲಿ ನೂತನ ಸರ್ಕಾರ ಯಾವ ರೀತಿ ಸ್ಪಂದಿಸುತ್ತದೆ ಎನ್ನುವುದು ಸದ್ಯದ ಕುತೂಹಲ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಜೆಟ್ ಮೇಲೆ ಕೃಷಿಕರು ಆಶಾಭಾವನೆ ಇಟ್ಟುಕೊಂಡಿದ್ದಾರೆ. ಕೊಡಗಿನಲ್ಲಿ ರೈತರೇ ಕಾಫಿ ಬೆಳೆಯುತ್ತಿದ್ದು, ಸಣ್ಣ ಕಾಫಿ ಬೆಳೆಗಾರರನ್ನು ಸಂಕಷ್ಟದಿಂದ ಪಾರು ಮಾಡಲು ವಿಶೇಷ ಯೋಜನೆಗಳನ್ನು ಕಲ್ಪಿಸಬೇಕು. ೧೦ಎಚ್.ಪಿ. ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಲು ಮತ್ತು ವಿದ್ಯುತ್ ಬಾಕಿ ಬಿಲ್ ಮನ್ನಾ ಮಾಡುವುದಕ್ಕೆ ಹಣವನ್ನು ಮೀಸಲಿಡಬೇಕು. ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದಲೂ ಪ್ರತಿವರ್ಷ ಕಾಫಿ ಫಸಲು ಹಾಳಾಗುತ್ತಿದೆ. ಈಗಾಗಲೇ ಕಾಫಿ ತೋಟಗಳು ರೋಗಪೀಡಿತವಾಗಿವೆ. ರೈತರು ಸಾಲಗಾರರಾಗಿದ್ದಾರೆ.
- ಕೆ.ಎಂ. ದಿನೇಶ್, ಸೋಮವಾರಪೇಟೆ ತಾಲೂಕು ಘಟಕ ಅಧ್ಯಕ್ಷ, ರಾಜ್ಯ ರೈತ ಸಂಘ
- ಹಿಂದಿನ ಸರ್ಕಾರದಲ್ಲಿ ದಿನಬಳಕೆಯ ವಸ್ತುಗಳ ಬೆಲೆ ಗಗಕ್ಕೇರಿತ್ತು. ಬೆಲೆ ಇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಯೋಜನೆ ರೂಪಿಸಬೇಕು. ಅನ್ನಭಾಗ್ಯ ಯೋಜನೆಗೆ ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಖರೀದಿಯಿಂದ ಅಕ್ಕಿ ದಾಸ್ತಾನು ಕಡಿಮೆಯಾಗಿ ಬೇಡಿಕೆ ಹೆಚ್ಚಾಗಿ, ಬೆಲೆ ಏರುತ್ತಿದೆ. ಕೇಂದ್ರ ಸರ್ಕಾರದಿಂದ ಅಕ್ಕಿ ಖರೀದಿಗೆ ಮುಂದಾಗಬೇಕು. ಬಜೆಟ್‌ನಲ್ಲಿ ರೈತಪರ ಯೋಜನೆಗಳು ಇರಬೇಕು. ರೈತರಿಗೆ ಕೊಳ್ಳುವ ಶಕ್ತಿ ಇದ್ದರೆ, ವರ್ತಕರಿಗೂ ಆದಾಯ ಇರುತ್ತದೆ.
- ಕೆ.ಎ. ಆದಂ, ವರ್ತಕರು, ಸೋಮವಾರಪೇಟೆ
- ಕೊಡಗು ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಕೈ ಕೊಟ್ಟಿದೆ. ರೈತರು ಸಂಕ?್ಟದಲ್ಲಿ ಇದ್ದಾರೆ. ಸರ್ಕಾರ ರೈತಾಪಿ ವರ್ಗಕ್ಕೂ ಗ್ಯಾರಂಟಿ ನೀಡಬೇಕು. ಸಹಕಾರಿ ಬ್ಯಾಂಕುಗಳ ಸಾಲ ಮನ್ನ ಮಾಡಬೇಕು. ಶೂನ್ಯ ಬಡ್ಡಿದರ ಸಾಲದ ಮಿತಿಯನ್ನು ೫ ಲಕ್ಷಕ್ಕೆ ಏರಿಸಬೇಕು. ಕನಿಷ್ಠ ಬಡ್ಡಿಗೆ ಹೆಚ್ಚುವರಿ ೧೦ ಲಕ್ಷವರೆಗೆ ಸಾಲ ನೀಡಬೇಕು. ಯಾಂತ್ರೀಕೃತ ಕೃಷಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಯಂತ್ರಗಳ ಸಬ್ಸಿಡಿ ಹೆಚ್ಚಿಸಬೇಕು. ಮೂಲಸೌಕರ್ಯ ಅಭಿವೃದ್ಧಿಗೆ ಪೂರಕವಾಗುವ ರೀತಿಯಲ್ಲಿ ಬಜೆಟ್ ಮಂಡನೆಯಾಗಲಿ
- ಮನೋಜ್ ಕುಮಾರ್ ಎನ್.ಸಿ., ಕೃಷಿಕ, ಮಾಯಮುಡಿ
- ದಿನಬಳಕೆ ವಸ್ತುಗಳು, ಗ್ಯಾಸ್ ಬೆಲೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೇ ಇದೆ. ಇದರ ಬಗ್ಗೆ ಗಮನ ಹರಿಸಬೇಕು. ಉಚಿತ ಸಾರಿಗೆ ವ್ಯವಸ್ಥೆಯನ್ನು ಅಗತ್ಯ ಇರುವವರಿಗೆ ಮಾತ್ರ ಸೀಮಿತಗೊಳಿಸಬೇಕು. ಇದರಿಂದ ಪ್ರತಿನಿತ್ಯ ಶಾಲಾ ಕಾಲೇಜು, ಕೆಲಸಕ್ಕೆ ತೆರಳುವವರಿಗೆ ತೊಂದರೆ ಆಗುತ್ತಿದೆ. ಗೃಹಿಣಿಯರನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ರೂಪಿಸಲಿ.
- ಕತ್ರಿಕೊಲ್ಲಿ ಅನಿತಾ ವಿಶ್ವನಾಥ್, ಗೃಹಿಣಿ, ಗೋಣಿಕೊಪ್ಪಲು
- ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಬೇಕು. ಕೂಡಿಗೆಯಲ್ಲಿ ಮಿನಿ ವಿಮಾನ ನಿಲ್ದಾಣ ಆಗಬೇಕು. ನಿರಂತರ ವಿದ್ಯುತ್ ಸರಬರಾಜಿಗೆ ಇಲ್ಲಿನ ವ್ಯವಸ್ಥೆ ಮೇಲ್ದರ್ಜೆಗೆ ಏರಿಸಬೇಕು. ಕಾಡಾನೆಗಳ ಹಾವಳಿ ತಡೆಗಟ್ಟಲು ಅವುಗಳ ಸ್ಥಳಾಂತರ ಸೇರಿ ವಿಶೇಷ ಯೋಜನೆ ರೂಪಿಸಬೇಕು. ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸಬೇಕು. ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪಿಸಬೇಕು. ಕೊಡವ ಅಧ್ಯಯನ ಪೀಠ ಶುರುವಾಗಬೇಕು. ಭಾಗಮಂಡಲ, ತಲಕಾವೇರಿಯನ್ನು ಪ್ರವಾಸಿ ತಾಣ ರದ್ದುಪಡಿಸಿ ಧಾರ್ಮಿಕ ತಾಣ ಮಾಡಬೇಕು. ಪ್ರಾಕೃತಿಕ ವಿಕೋಪ ಪರಿಹಾರಕ್ಕೆ ಆವರ್ತ ನಿಧಿ ಸ್ಥಾಪಿಸಬೇಕು. ಇಲ್ಲಿನ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡಬೇಕು.
- ಮುಕ್ಕಾಟಿರ ವಿನಯ್, ಲಯನ್ಸ್ ಕ್ಲಬ್ ವಲಯ ಅಧ್ಯಕ್ಷ, ನಾಪೋಕ್ಲು
- ಇಪ್ಪತ್ತು ವ?ರ್ದಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ಜಿಲ್ಲೆಯಲ್ಲಿ ನಡೆದಿಲ್ಲ. ಕೊಡಗಿನ ಎಲ್ಲಾ ಗ್ರಾಮಪಂಚಾಯತ್ ಮಟ್ಟದಿಂದ ಅಭಿವೃದ್ಧಿ ಕಾರ್ಯಗಳು ಆರಂಭವಾಗಬೇಕು. ಕೊಡಗಿನ ಮುಖ್ಯರಸ್ತೆಗಳ ಅಭಿವೃದ್ಧಿಗೆ ೨೦೦ ಕೋಟಿ ರೂ. ಬಿಡುಗಡೆ ಮಾಡಬೇಕು. ಕೊಡಗಿನ ಅರಣ್ಯವಾಸಿಗಳಿಗೆ ನಿವೇಶನ ಘೋ?ಣೆ ಮಾಡಬೇಕು. ಕೊಡಗಿನ ಎಲ್ಲಾ ಸರ್ಕಾರಿ ಶಾಲೆಗಳ ಉನ್ನತೀಕರಣ ಮಾಡಬೇಕು. ವಿರಾಜಪೇಟೆ ಕ್ಷೇತ್ರಕ್ಕೆ ಆಟದ ಮೈದಾನ, ಈಜುಕೊಳ, ಕ್ರೀಡಾ ಶಾಲೆ ತೆರೆಯಬೇಕು. ಗಿರಿಜನರ ಅಭಿವೃದ್ಧಿಗೆ ಯೋಜನೆಗಳನ್ನು ಬಜೆಟ್ ನಲ್ಲಿ ಘೋಷಿಸಬೇಕು.
- ಕೆ.ವಿ. ಸುನಿಲ್, ವಕೀಲ, ವಿರಾಜಪೇಟೆ
- ಅಗತ್ಯ ವಸ್ತುಗಳ ಬೆಲೆ ನಿಯಂತ್ರಣ ಮಾಡಬೇಕು. ರಸಗೊಬ್ಬರ, ಕೃಷಿಗೆ ಸಂಬಂಧಿತ ವಸ್ತುಗಳ ಬೆಲೆ ಕಡಿತಗೊಳಿಸಬೇಕು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ದಿನಗೂಲಿ ಹೆಚ್ಚಳ ಮಾಡಬೇಕು. ಕೊಡಗಿನಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಬೇಕು. ಎಲ್ಲದಕ್ಕೂ ಮುಖ್ಯವಾಗಿ ಕೊಡಗನ್ನು ಈ ಬಾರಿ ಬಜೆಟ್ ನಲ್ಲಿ ಕಡೆಗಣಿಸಬಾರದು.
- ಅನು?ಾ, ಗೃಹಿಣಿ, ವಿರಾಜಪೇಟೆ
- ಕೊಡಗಿನ ಪರಿಸರಕ್ಕೆ ಧಕ್ಕೆಯಾಗದ ರೀತಿಯಲ್ಲಿ ಇಲ್ಲಿಯ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸಲು ಮುಂದಿನ ರಾಜ್ಯ ಬಜೆಟ್‌ನಲ್ಲಿ ಹಣವನ್ನು ಮಿಸಲಿಡಬೇಕು. ಮಳೆಗಾಲದಲ್ಲಿ ಇಲ್ಲಿಯ ರಸ್ತೆಗಳು ಸಂಪೂರ್ಣ ಹಾಳಾಗುತ್ತಿದೆ ಇದಕ್ಕೆ ವಿಶೇ? ಅನುದಾನ ಜಿಲ್ಲೆಗೆ ಮಿಸಲಿಡಲಿ. ಇನ್ನ?್ಟು ನಿರೀಕ್ಷೆಯನ್ನು ಜಿಲ್ಲೆಯ ಜನರು ಇಟ್ಟುಕೊಂಡಿದ್ದಾರೆ.
- - ಕೆ.ಪಿ. ಜಯಕುಮಾರ್, ಶಿಕ್ಷಕ, ಶ್ರೀ ವಿಘ್ನೇಶ್ವರ ಬಾಲಿಕ ಪದವಿ ಪೂರ್ವ ಕಾಲೇಜು, ಶನಿವಾರಸಂತೆ
- ರಾಜ್ಯ ಸರ್ಕಾರ ಕೊಡಗು ಜಿಲ್ಲೆಯಲ್ಲಿ ಬೆಳಕಿಗೆ ಬಾರದ ಹೊಸ ಸ್ಥಳಗಳನ್ನು ಪ್ರವಾಸಿಗರಿಗೆ ಪರಿಚಯಿಸಿದರೆ ಇನ್ನ?್ಟು ಪ್ರವಾಸಿಗರನ್ನು ಸೆಳೆಯಬಹುದು. ಇರುವ ಖ್ಯಾತ ಪ್ರವಾಸಿ ತಾಣಗಳಲ್ಲಿ ಕನಿ?್ಠ ಮೂಲಭೂತ ಸೌಕರ್ಯ ಕಲ್ಪಿಸಬೇಕು. ದುಬಾರೆಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಸೇತುವೆ ನಿರ್ಮಾಣ ಮಾಡಬೇಕು. ಒಟ್ಟಿನಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಬೇಕು. ವಿದ್ಯುತ್ ಬಿಲ್ ಹೆಚ್ಚಳದ ಹೊಡೆತ ಅರಗಿಸಿಕೊಳ್ಳುವುದು ಅಸಾಧ್ಯ. ದಯವಿಟ್ಟು ವಿದ್ಯುತ್ ದರವನ್ನು ಮೊದಲಿನ ಸ್ಥಿತಿಗೆ ತರಲು ಮನವಿ.
- ಸಚಿನ್ ಟಿ. ಸೋಮಣ್ಣ, ಮಾಲೀಕರು, ಪಾರ್ಮ್ ಎರಾ, ಗುಡ್ಡೆಹೊಸೂರು
- ಕೊಡಗು ಪ್ರಕೃತಿ ಸಂಪತ್ತು ಹೊಂದಿದೆ. ಇಲ್ಲಿಗೆ ಬರುವ ಕೆಲ ಪ್ರವಾಸಿಗರಿಂದ ಮಲಿನವಾಗುತ್ತಿದೆ. ಇಲ್ಲಿ ಸಂಗ್ರಹವಾಗುವ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯಗಳನ್ನು ಸಂಗ್ರಹಿಸಿ ಮರು ಉತ್ಪಾದನೆ ಮಾಡುವ ಕಾರ್ಖಾನೆ ಸ್ಥಾಪಿಸಿದರೆ ಉತ್ತಮ. ಎಲ್ಲಾ ಪ್ರಮುಖ ಸ್ಥಳಗಳಲ್ಲಿ ಕಸದ ಬುಟ್ಟಿ ಇಡಬೇಕು.
- ಆಶಾನವೀನ್, ಗೃಹಿಣಿ, ಕುಶಾಲನಗರ
- ಕೊಡಗು ಜಿಲ್ಲೆಯಲ್ಲಿ ಅತಿ ಹೆಚ್ಚು ಗಿರಿಜನರು ಅರಣ್ಯದಲ್ಲಿ ವಾಸವಿದ್ದು, ಕೇಂದ್ರ ಸರ್ಕಾರದದಿಂದ ಕೃಷಿ ಜಮೀನಿಗೆ ಹಕ್ಕು ಪತ್ರ ಈಗಾಗಲೇ ವಿತರಿಸಲಾಗಿದೆ. ಗಿರಿಜನರು ಕಿಸಾನ್ ಸಮ್ಮಾನ್ ಯೋಜನೆಯ ವಂಚಿತರಾಗಿದ್ದಾರೆ. ಹೋಂಸ್ಟೇ ಪರವಾನಗಿಯನ್ನು ಹಾಡಿಯಲ್ಲಿರುವ ಗಿರಿನರಿಗೆ ಒದಗಿಸಿಕೊಟ್ಟಲ್ಲಿ ಗಿರಿಜನರಿಗೆ ಜೀವನೋಪಾಯಕ್ಕೆ ಉತ್ತಮ
- ಕಿರಣ್ ಕುಮಾರ್ ಕೆ. ಎಸ್., ಗಿರಿಜನರ ಮುಖಂಡ, ಮಾಲ್ದಾರೆ