ಹಿರಿಯೂರು: ಶೋಷಣೆಯ ವಿರುದ್ಧ ಗಟ್ಟಿ ಧ್ವನಿ ಮೂಲಕ ನಾಡಿನಲ್ಲಿ ಬದಲಾವಣೆ ತರುವಲ್ಲಿ ನಾರಾಯಣ ಗುರುಗಳ ಪಾತ್ರ ಪ್ರಮುಖವಾಗಿದೆ ಎಂದು ತಹಶೀಲ್ದಾರ್ ರಾಜೇಶ್‌ಕುಮಾರ್ ಹೇಳಿದರು.
ತಾಲೂಕು ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅನಾದಿ ಕಾಲದಿಂದಲೂ ಕೆಲ ವರ್ಗದವರು ನಿರಂತರ ಶೋಷಣೆಗೆ ಒಳಪಟ್ಟಿದ್ದು, ಈ ದುಷ್ಟ ಪದ್ಧತಿ ವಿರುದ್ಧ ಧ್ವನಿ ಎತ್ತಿ ಒಂದೇ ಜಾತಿ, ಒಂದೇ ಧರ್ಮ, ಮಾನವರೆಲ್ಲೂ ಒಂದೇ ಎಂಬ ಘೋಷವಾಕ್ಯದೊಂದಿಗೆ ಸಾಮಾಜಿಕ ಕ್ರಾಂತಿಗೆ ಮುಂದಾದವರು ನಾರಾಯಣ ಗುರುಗಳು ಎಂದು ಹೇಳಿದರು. ಮೂಢನಂಬಿಕೆ, ಜಾತಿ, ಅಸ್ಪೃಶ್ಯತೆ, ಬೆತ್ತಲೆ ಸೇವೆ, ದೇವದಾಸಿ, ಜೀತ, ಬಾಲ್ಯವಿವಾಹ ಹೀಗೆ ಅನೇಕ ಅನಿಷ್ಠ ಪದ್ಧತಿ ವಿರುದ್ಧ ಹೋರಾಟ ನಡೆಸಿ, ಅವುಗಳಿಂದ
ಜನರನ್ನು ಮುಕ್ತರನ್ನಾಗಿಸಲು ಶ್ರಮಿಸಿದ ಮಹಾನ್ ಸಂತ ಎಂದು ಬಣ್ಣಿಸಿದರು.