ಜಿಲ್ಲೆ

ಸ್ಥಳೀಯರು ಉಸ್ತುವಾರಿ ವಂಚಿತ

ಮಡಿಕೇರಿ
ಜಿಲ್ಲೆಯಿಂದ ಆಯ್ಕೆ ಆದವರೇ ಕೊಡಗಿಗೆ ಉಸ್ತುವಾರಿ ಸಚಿವರು ಆಗುವುದಕ್ಕೆ ಕಾಲವೇ ಕೂಡಿ ಬರುತ್ತಿಲ್ಲ. ಈ ಹಿಂದೆ ಜಿಲ್ಲೆಯಿಂದ ಇಬ್ಬರು ಬಿಜೆಪಿಯ ಹಿರಿಯ ಶಾಸಕರು ಇದ್ದರೂ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹೊರ ಜಿಲ್ಲೆಯವರಿಗೆ ಉಸ್ತುವಾರಿ ಜವಾಬ್ದಾರಿ ಕೊಡಲಾಗಿತ್ತು. ಈಗ ಅದು ಮತ್ತೆ ಪುನರಾವರ್ತನೆ ಆಗಿದೆ. ಈಗಲೂ ಕಾಂಗ್ರೆಸ್‌ನ ಇಬ್ಬರು ಶಾಸಕರು ಕೊಡಗಿನಲ್ಲಿ ಶಾಸಕರಾಗಿದ್ದಾರೆ. ಆದರೂ ಸ್ಥಳೀಯರು ಉಸ್ತುವಾರಿಯ ಜವಾಬ್ದಾರಿಯಿಂದ ವಂಚಿತರಾಗಿದ್ದಾರೆ.
ದೂರದ ರಾಯಚೂರಿನ ಎನ್.ಎಸ್. ಭೋಸರಾಜ್ ಈಗ ಕೊಡಗಿನ ಉಸ್ತುವಾರಿ ಸಚಿವರಾಗಿದ್ದಾರೆ. ಭಾನುವಾರ ಮಡಿಕೇರಿಗೆ ಆಗಮಿಸಿದ್ದ ಅವರನ್ನು ಕಾಂಗ್ರೆಸಿಗರು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಸರ್ಕಾರಿ ಬಸ್‌ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆಗೆ ಚಾಲನೆ ನೀಡಿ ಮರಳಿದ್ದಾರೆ. ಬಜೆಟ್‌ಗೆ ಮೊದಲು ಮತ್ತೊಮ್ಮೆ ಬರುವುದಾಗಿಯೂ ಹೇಳಿದ್ದಾರೆ. ಸ್ಥಳೀಯ ಉಸ್ತುವಾರಿ ಸಚಿವರ ಬಗ್ಗೆ ಜನವಲಯದಲ್ಲಿ ಬೇಡಿಕೆಯ ಧ್ವನಿ ಇದ್ದರೂ ಭೋಸರಾಜ್ ಕುರಿತು ಜಿಲ್ಲೆಯ ಇಬ್ಬರು ಶಾಸಕರು ಆಶಾಭಾವನೆ ಹೊಂದಿದ್ದಾರೆ. ಅವರೊಬ್ಬ ಹಿರಿಯ ರಾಜಕಾರಣಿ ಆಗಿರುವುದರಿಂದ ಜಿಲ್ಲೆಯನ್ನು ಆದಷ್ಟು ಬೇಗ ಅರಿತುಕೊಂಡು ಇಲ್ಲಿಯ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ ಎನ್ನುವು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ವಿಜಯವಾಣಿ ಓದುಗರು ಹಂಚಿಕೊಂಡ ಅಭಿಪ್ರಾಯಗಳು ಇಲ್ಲಿದೆ.

ಅವರೊಬ್ಬ ಅನುಭವಿ ರಾಜಕಾರಣಿ. ಎರಡು ಬಾರಿ ಶಾಸಕ, ಒಮ್ಮೆ ವಿಧಾನಪರಿ?ತ್ ಸದಸ್ಯರಾಗಿ ಆಡಳಿತದ ಅನುಭವ ಹೊಂದಿದ್ದಾರೆ. ಸರ್ಕಾರದಲ್ಲೂ ್ಲ ವಿವಿಧ ಹುದ್ದೆಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯೂ ಆಗಿದ್ದರು. ಕೊಡಗಿನ ಸಮಸ್ಯೆ ಬಗ್ಗೆ ಅವರ ಗಮನ ಸೆಳೆಯಲಾಗುವುದು.

ಎ.ಎಸ್. ಪೊನ್ನಣ್ಣ, ವಿರಾಜಪೇಟೆ ಶಾಸಕ

ಅವರು ಹಿರಿಯರಾಗಿದ್ದು ಅನುಭವಿಗಳೂ ಆಗಿರುವುರಿಂದ ಅಭಿವೃದ್ಧಿ ಕೆಲಸಗಳನ್ನು ನಿರೀಕ್ಷೆ ಮಾಡಬಹುದಾಗಿದೆ. ಮಡಿಕೇರಿ ಕ್ಷೇತ್ರದ ಅಭಿವೃದ್ಧಿ ಮತ್ತು ಇಲ್ಲಿಯ ಸಮಸ್ಯೆಗಳ ನಿವಾರಣೆಗೆ ಹಿರಿಯ, ಅನುಭವಿ ರಾಜಕಾರಣಿಯ ಸಹಾಯ ಪಡೆದುಕೊಳ್ಳಲಾಗುವುದು. ಇಲ್ಲಿ ಆಗಬೇಕಿರುವ ಕೆಲಸಗಳನ್ನು ಉಸ್ತುವಾರಿ ಸಚಿವರ ಮೂಲಕ ಸರ್ಕಾರದ ಗಮನ ಸೆಳೆಯಲಾಗುವುದು.

ಡಾ.ಮಂತರ್ ಗೌಡ, ಮಡಿಕೇರಿ ಶಾಸಕ

ಕೊಡಗು ಪುಟ್ಟ ಜಿಲ್ಲೆ. ಆದರೂ ಬೇರೆ ಜಿಲ್ಲೆಗಳಿಗಿಂತ ಇಲ್ಲಿ ತನ್ನದೇ ಆದ ಸಾಕ?್ಟು ಸಮಸ್ಯೆಗಳು ಇವೆ. ಇಲ್ಲಿನವರೇ ಉಸ್ತುವಾರಿ ಸಚಿವರಾದರೆ ಅವರಿಗೆ ಮೂಲ ಸಮಸ್ಯೆಗಳು ತಿಳಿದಿರುತ್ತದೆ. ಹೊರಗಿನವರಾದರೆ ಅವರು ತಿಂಗಳಿಗೆ ಒಂದೋ ಎರಡೋ ಸಲ ಬಂದು ಹೋಗುತ್ತಾರೆ. ಇಲ್ಲಿನ ವಾಸ್ತವ ಅರಿಯುವಾಗಲೇ ಅವರ ಅವಧಿ ಮುಗಿದು ಹೋಗುತ್ತದೆ. ಹಾಗಾಗಿ ಇಲ್ಲಿನವರಿಗೇ ಉಸ್ತುವಾರಿ ಸ್ಥಾನ ನೀಡುವುದು ಉತ್ತಮ.

  • ಸುಮನ್ ಎಂ.ಆರ್., ಕೃಷಿಕ, ತಿತಿಮತಿ
  • ಪ್ರತಿಬಾರಿಯೂ ಕೊಡಗನ್ನು ಕಡೆಗಣಿಸಲಾಗುತ್ತಿದೆ. ಪ್ರಕೃತಿ ರಮಣೀಯವಾದ ಜಿಲ್ಲೆ, ಅದರೊಳಗೆ ಅ?್ಟೇ ಸವಾಲುಗಳು. ಅದು ನಮಗೆ ಮಾತ್ರ ಗೊತ್ತು. ದೂರದ ಊರಿನವನ್ನು ಉಸ್ತುವಾರಿ ಮಾಡಿದರೆ ಅವರಿಗೆ ಸಮಸ್ಯೆ ತಿಳಿಹೇಳುವ ಹೊತ್ತಿಗೆ ಮತ್ತೊಂದು ಸಮಸ್ಯೆ ತಲೆದೋರಿರುತ್ತದೆ. ಇಲ್ಲಿಂದ ಗೆದ್ದವರಿಗೆ ಉಸ್ತುವಾರಿ ನೀಡಿದ್ದಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಒಳಿತಾಗುವುದು.
  • ಪಡಿಕಲ್ಲು ಶರ್ಮಿಳ, ಉಪನ್ಯಾಸಕಿ, ಕಾವೇರಿ ಕಾಲೇಜು ಗೋಣಿಕೊಪ್ಪ
  • ಕೊಡಗಿನಲ್ಲಿ ಅಪ್ಪಚ್ಚು ರಂಜನ್ ನಂತರ ಜಿಲ್ಲೆಯವರಿಗೆ ಯಾರಿಗೂ ಮಂತ್ರಿ ಸ್ಥಾನ ಲಭಿಸಿರುವುದಿಲ್ಲ. ಈ ಬಾರಿಯೂ ಹೊರ ಜಿಲ್ಲೆಯವರನ್ನು ಉಸ್ತುವಾರಿ ಸಚಿವರಾಗಿ ನೇಮಿಸಿರುವುದರಿಂದ ಜಿಲ್ಲೆಯ ಅಭಿವೃದ್ಧಿ ಕುಂಠಿತವಾಗಬಹುದು. ಪೊನ್ನಣ್ಣ ಮುಖ್ಯಮಂತ್ರಿಯವರ ಕಾನೂನು ಸಲಹೆಗಾರರಾಗಿ ಆಯ್ಕೆ ಆಗಿರುವುದರಿಂದ ಜಿಲ್ಲೆಗೆ ಸ್ವಲ್ಪಮಟ್ಟಿನ ಪ್ರಯೋಜನವಾಗಬಹುದು
  • ಕೃ?್ಣ ಎಂ. ಎ., ಸಾಮಾಜಿಕ ಕಾರ್ಯಕರ್ತ, ಕರಡಿಗೋಡು ಸಿದ್ದಾಪುರ
  • ಕೊಡಗಿನ ಜ್ವಲಂತ ಸಮಸ್ಯೆಗಳ ಅರಿವೇ ಇಲ್ಲದ ಉಸ್ತುವಾರಿಗಳನ್ನು ಕೊಡಗಿಗೆ ಕೊಟ್ಟಿರುವುದರಿಂದ ಇಲ್ಲಿನ ಜ್ವಲಂತ ಸಮಸ್ಯೆಗಳ ಅರಿವು ಅವರಿಗೆ ಇರುವುದಿಲ್ಲ ಹಾಗಾಗಿ ಕೊಡಗಿನ ಅಭಿವೃದ್ಧಿ ಶೂನ್ಯವಾಗಲಿದೆ ಮತ್ತು ಇಲ್ಲಿನ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಲು ಸಾಕ?್ಟು ಸಮಯ ಬೇಕಾಗಿರುವುದರಿಂದ ಅಲ್ಲಿಯವರೆಗೆ ಕೊಡಗಿನಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುವುದಿಲ್ಲ. ಇದು ಕೊಡಗಿನ ಇನ್ನ?್ಟು ಹಿನ್ನಡೆಗೆ ಕಾರಣವಾಗಲಿದೆ.
  • ಪವನ್ ದೇವಯ್ಯ, ಉದ್ಯಮಿ, ನಂದಿಗುಂದ
  • ಕೊಡಗಿನ ಬಗ್ಗೆ ತಿಳಿಯದೆ ಇರುವವರನ್ನು ಉಸ್ತುವಾರಿ ಮಾಡಿರುವುದು ದುರಂತ. ಕೊಡಗಿನವರನ್ನೇ ಕೊಡಗು ಉಸ್ತುವಾರಿ ಮಾಡಬೇಕಿತ್ತು. ಕೊಡಗಿನ ಜ್ವಲಂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಬೇಕಿದೆ. ಕೇವಲ ನಾಮ್ ಕೆ ವಾಸ್ಥೆ ಉಸ್ತುವಾರಿ ಸಚಿವರಾಗಬಾರದು. ಸ್ಥಳೀಯರ ಅಭಿಪ್ರಾಯ ಪಡೆದು ಅಭಿವೃದ್ಧಿ ಪಡಿಸಬೇಕು. ಸ್ಥಳೀಯರು ಉಸ್ತುವಾರಿ ಆದರೆ ಮಾತ್ರ ಕೊಡಗು ಅಭಿವೃದ್ಧಿ ಸಾಧ್ಯ.
  • ರುಕ್ಮಿಣಿ, ನಿವೃತ್ತ ಮುಖ್ಯ ಶಿಕ್ಷಕಿ, ಶನಿವಾರಸಂತೆ
  • ನಮ್ಮಲ್ಲಿ ಇರುವ ಶಾಸಕರು ಸಮರ್ಥರಿರುವಾಗ ಹೊರಗಿನವರನ್ನು ಉಸ್ತುವಾರಿ ಮಾಡುವ ಅವಶ್ಯಕತೆ ಇರಲಿಲ್ಲ. ಕೊಡಗಿನವರೇ ಉಸ್ತುವಾರಿಯಾದಾಗ ಇಲ್ಲಿನ ಸಮಸ್ಯೆಗಳ ಅರಿವು ಚೆನ್ನಾಗಿರುತ್ತದೆ. ಇದು ನಾಮ್ ಕೇ ವಾಸ್ತೇ ಆಯ್ತು ಅ?್ಟೇ. ಇದುವರೆಗೂ ಕೊಡಗಿನ ಉಸ್ತುವಾರಿ ಸಚಿವರು ಮಾಡಿದ ಯಾವ ಅಭಿವೃದ್ಧಿಯೂ ನನ್ನ ಕಣ್ಣಿಗೆ ಕಂಡಿಲ್ಲ. ಕೊಡಗಿಗೆ ಏನಾದರೂ ಮಾಡಬೇಕೆಂಬ ನಿರೀಕ್ಷೆ ಉಸ್ತುವಾರಿ ಸಚಿವರಿಗೆ ಇದೆಯಾ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಅವರು ಜಿಲ್ಲೆಯಲ್ಲಿ ಬಂದು ನಿಂತು ಕೆಲಸ ಮಾಡಿದ ದಿನ ಜನರಿಗೆ ಆ ಸ್ಥಾನದ ಮನವರಿಕೆಯಾಗುತ್ತದೆ. ಇಲ್ಲದೇ ಹೋದಲ್ಲಿ ಅಲಂಕಾರಕ್ಕೆ ಬಂದ ಹಾಗಾಗುತ್ತದೆ.
  • - ಡಾ. ಎಸ್.ವಿ. ನರಸಿಂಹನ್, ವೈದ್ಯರು, ವಿರಾಜಪೇಟೆ
  • ಉಸ್ತುವಾರಿ ಸಚಿವ ಸ್ಥಾನ ಸರ್ಕಾರದ ದೊಡ್ಡ ಜವಾಬ್ದಾರಿ. ಕೊಡಗಿನ ಇಬ್ಬರು ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಇಲ್ಲಿನ ಸಂಘಸಂಸ್ಥೆಗಳು, ಜಿಲ್ಲಾಧಿಕಾರಿ ಇವರ ಜೊತೆ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿದ್ದೇ ಆದಲ್ಲಿ ಉಸ್ತುವಾರಿ ಸಚಿವರು ಯಾವ ಜಿಲ್ಲೆಯವರಾದರೂ ಪರ್ವಾಗಿಲ್ಲ. ಉಸ್ತುವಾರಿ ಸಚಿವರು ಬರೇ ಮಡಿಕೇರಿಯಲ್ಲಿ ಸಭೆ ನಡೆಸಿ ತೆರಳಿದರೆ ಸಾಲದು. ಪ್ರತಿ ತಾಲ್ಲೂಕು ಕೇಂದ್ರಗಳಿಗೆ ಭೇಟಿ ಕೊಡಬೇಕು. ಅಲ್ಲಿನ ಕೆಲಸಗಳನ್ನು ಮಾಡಬೇಕು. ವಿರಾಜಪೇಟೆ ಕ್ಷೇತ್ರದಲ್ಲಿ ಒಂದು ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಹಾಗೂ ಮೆಡಿಕಲ್ ಕಾಲೇಜು ಬೇಕು. ನಗರದಲ್ಲಿ ಉದ್ಯಾನವನಗಳನ್ನು ಅಭಿವೃದ್ಧಿಪಡಿಸಲಿ. ಸರ್ಕಾರಿ ಆಸ್ಪತ್ರೆಗೆ ಆಧುನಿಕ ಸ್ಪರ್ಶಕೊಟ್ಟು ಇನ್ನ?್ಟು ಉತ್ತಮ ಸೇವೆಗಳು ಸಿಗುವಂತೆ ಮಾಡಲಿ.
  • ಡಿ. ತಸ್ನೀಂ ಅಖ್ತರ್, ಮಾಜಿ ಉಪಾಧ್ಯಕ್ಷೆ, ಪ.ಪಂ. ವಿರಾಜಪೇಟೆ
  • ತಂತ್ರಜ್ಞಾನ ಅದ್ಭುತವಾಗಿ ಬೆಳೆದಿದೆ. ಈಗ ಯಾವುದೇ ಮಾಹಿತಿ ಬೆರಳ ತುದಿಯಲ್ಲಿ ಲಭ್ಯವಿರುತ್ತೆ. ಅದನ್ನ ಉಪಯೋಗಿಸುವ ಜ್ಞಾನವಿದ್ದು ಸೂಕ್ತ ರೀತಿಯಲ್ಲಿ ಬಳಸಿಕೊಂಡರೆ ಸಾಕು. ಅದು ಭೋಸರಾಜು ಅವರಿಗೆ ಮತ್ತು ಅವರ ತಂಡಕ್ಕೆ ಇದೆ ಎನ್ನುವ ವಿಶ್ವಾಸವಿದೆ.
  • ಭಾರದ್ವಾಜ್ ಕೆ. ಅನಂದತೀರ್ಥ, ಸಾಹಿತಿ, ರಾಮಸ್ವಾಮಿ ಕಣಿವೆ.

ಕೊಡಗಿನ ಶಾಸಕರನ್ನು ಮಂತ್ರಿ ಮಾಡಿ, ಅವರಿಗೆ ಜಿಲ್ಲಾ ಉಸ್ತುವಾರಿ ನೀಡಿದ್ದರೆ, ಒಂದಷ್ಟು ಅಭಿವೃದ್ಧಿ ನಿರೀಕ್ಷೆ ಮಾಡಬಹುದಿತ್ತು. ಜಿಲ್ಲೆಯ ಭೌಗೋಳಿಕ ಹಿನ್ನೆಲೆ, ಇಲ್ಲಿನ ಜನರ ಬೇಕು ಬೇಡಿಕೆಗಳು ಸ್ಥಳೀಯ ಜನಪ್ರತಿನಿಧಿಗಳಿಗೆ ಮಾತ್ರ ಗೊತ್ತಿರುತ್ತದೆ. ಶಾಸಕರು ರಾಜಕೀಯ ರಹಿತವಾಗಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಜಿಲ್ಲೆಯ ಮಾಹಿತಿ ನೀಡಬೇಕು. ಬಡಜನರಿಗೆ ಬಾಕಿಯಿರುವ ಹಕ್ಕುಪತ್ರ, ವಸತಿ, ರೈತರಿಗೆ ಹಾಗು ಸಂತ್ರಸ್ತರಿಗೆ ಮಳೆಹಾನಿ ಪರಿಹಾರ ಸೂಕ್ತ ಸಮಯದಲ್ಲಿ ಸಿಗಬೇಕು.

  • ಮಂಜುಳಾ ಸುಬ್ರಮಣಿ, ಅಧ್ಯಕ್ಷರು, ಸೋಮವಾರಪೇಟೆ ಮಂಡಳ ಬಿಜೆಪಿ ಮಹಿಳಾ ಮೋರ್ಚಾ
  • ಕೊಡಗಿನವರೇ ಉಸ್ತುವಾರಿ ಸಚಿವರಾಗಿದ್ದರೆ ನಿಜವಾಗಲೂ ಹೆಚ್ಚಿನ ಅಭಿವೃದ್ಧಿ ನಿರೀಕ್ಷೆ ಮಾಡಬಹುದಿತ್ತು. ಈಗ ಜನರಿಗೆ ಕಾಂಗ್ರೆಸ್ ಶಾಸಕರ ಮೇಲೆ ಹೆಚ್ಚಿನ ನಿರೀಕ್ಷೆಯಿದೆ. ಸಣ್ಣ ಕಾಫಿ ಬೆಳೆಗಾರರ ೧೦ಎಚ್.ಪಿ. ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಹಾಗೂ ಬಾಕಿ ಬಿಲ್ ಮನ್ನಾ ಮಾಡುವ ಬಗ್ಗೆ ಬಿಜೆಪಿ ಸರ್ಕಾರ ಘೋಷಣೆ ಮಾಡಿದೆ. ಅದನ್ನು ಕಾಂಗ್ರೆಸ್ ಸರ್ಕಾರ ಮುಂದುವರೆಸಿಕೊಂಡು ಹೋಗಬೇಕು.
  • - ಎಸ್.ಪಿ. ಪೊನ್ನಪ್ಪ, ಉಪಾಧ್ಯಕ್ಷರು, ಜಿಲ್ಲಾ ಕೃಷಿಕ ಸಮಾಜ