ಜಿಲ್ಲೆ

ಧ್ವನ್ಯಾಲೋಕದಲ್ಲಿ ಲೋಟಸ್, ಲಿಲ್ಲೀಸ್ ಪದರ್ಶನ

ಮೈಸೂರು: ನಗರದಲ್ಲಿ ಲೋಟಸ್, ಲಿಲ್ಲೀಸ್ ಸೇರಿದಂತೆ ನಾನಾ ಹೂವುಗಳ ಲೋಕವೇ ತೆರೆದುಕೊಂಡು ನೋಡುಗರನ್ನು ಸೆಳೆಯಿತು.

ಬೋಗಾದಿ ರಸ್ತೆಯಲ್ಲಿರುವ ಧ್ವನ್ಯಾಲೋಕ ಆವರಣದಲ್ಲಿ ಲೋಟಸ್, ಲಿಲ್ಲೀಸ್ ಮಾತ್ರವಲ್ಲದೆ ಅಲಂಕಾರಿಕ ಕೃತಕ ಹೂವು, ಪೇಪರ್ ಕಲೆ, ಅಲಂಕಾರಿಕ ವಸ್ತುಗಳನ್ನು ಪ್ರದರ್ಶಿಸಲಾಗಿದ್ದು, ಅ.20ರವರೆಗೆ ಪ್ರದರ್ಶನ ವೀಕ್ಷಿಸಬಹುದಾಗಿದೆ.

ಪ್ರದರ್ಶನದಲ್ಲಿ ವಿವಿಧ ಬಗೆಯ ಲೋಟಸ್ ಮತ್ತು ಲಿಲ್ಲೀಸ್ ಗಿಡಗಳ ಮಾಹಿತಿ ಒದಗಿಸಲಾಗುತ್ತಿದೆ. ಈ ಸಸ್ಯಗಳ ಬೆಳವಣಿಗೆಯ ವಿವಿಧ ಹಂತಗಳ ಮಾಹಿತಿ ಪಡೆಯಬಹುದಾಗಿದೆ. ಈ ಹೂವಿನ ಆಧ್ಯಾತ್ಮಿಕ ಮಹತ್ವ, ಔಷಧೀಯ ಮೌಲ್ಯ, ಕೃಷಿ ತಂತ್ರ, ಪಾಕಶಾಲೆ ಕುರಿತ ವಿವರವನ್ನು ನೀಡಲಾಗುತ್ತಿದೆ.

ಲೋಟಸ್, ಲಿಲ್ಲೀಸ್ ಕುರಿತು ಪರಿಣತಿ ಪಡೆದಿರುವ ಸಂಧ್ಯಾ ಮಂಜುನಾಥ್ ನೇತೃತ್ವದಲ್ಲಿ ಪ್ರದರ್ಶನ ಏರ್ಪಡಿಸಲಾಗಿದೆ. ನಿವೃತ್ತ ಪ್ರಾಧ್ಯಾಪಕಿ ಪ್ರೊ.ಶಶಿಕಲಾ, ಸುಮನ್ ಅರಸ್ ಇದ್ದರು.